ಮಂಡ್ಯ: ಜೀವಂತ ವ್ಯಕ್ತಿಗೆ ಮರಣ ಪ್ರಮಾಣಪತ್ರ ನೀಡಿದ್ದ ಗ್ರಾಮಲೆಕ್ಕಿಗ ಅಮಾನತು
ಮಂಡ್ಯ, ಆ.29: ತಂದೆಯ ಮರಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದ ಬದುಕಿರುವ ಪುತ್ರನಿಗೇ ಮರಣ ಪ್ರಮಾಣಪತ್ರ ನೀಡಿ ಕರ್ತವ್ಯಲೋಪವೆಸಗಿರುವ ಗ್ರಾಮಲೆಕ್ಕಿಗನನ್ನು ಸೇವೆಯಿಂದ ಅಮಾನತು ಪಡಿಸಲಾಗಿದೆ.
ಶ್ರೀರಂಗಪಟ್ಟಣ ತಾಲೂಕು ಪೀಹಳ್ಳಿ ವೃತ್ತದ ಗ್ರಾಮಲೆಕ್ಕಿಗ ಲಿಂಗಪ್ಪಾಜಿಯನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸೇವೆಯಿಂದ ಅಮಾನತುಪಡಿಸಿದ್ದಾರೆ.
ಶ್ರೀರಂಗಪಟ್ಟಣ ತಾಲೂಕು ಚಿಕ್ಕಹಾರೋಹಳ್ಳಿಯ ರಾಮೇಗೌಡ ತನ್ನ ತಂದೆ ತಿಮ್ಮೇಗೌಡರ ಮರಣ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದು, ಬದಲಾಗಿ ರಾಮೇಗೌಡರಿಗೇ ಪ್ರಮಾಣಪತ್ರ ನೀಡಲಾಗಿತ್ತು.
ಈ ಸಂಬಂಧ ಆಗಿರುವ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ ವಹಿಸಲಾಗಿದ್ದು, ನ್ಯಾಯ ದೊರಕಿಸಿಕೊಂಡುವಂತೆ ರಾಮೇಗೌಡ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದರು.
Next Story