ಏಶ್ಯನ್ ಗೇಮ್ಸ್: ಹಾಕಿಯಲ್ಲಿ ಭಾರತದ ಮಹಿಳಾ ತಂಡ ಫೈನಲ್‌ಗೆ

ಜಕಾರ್ತ, ಆ.29: ಏಶ್ಯನ್ ಗೇಮ್ಸ್‌ನ ನಲ್ಲಿ ಚೀನಾ ವಿರುದ್ಧ 1-0ಅಂತರದಲ್ಲಿ ಜಯ ಗಳಿಸಿದ ಭಾರತದ ಮಹಿಳೆಯರ ಹಾಕಿ ತಂಡ ಫೈನಲ್ ಪ್ರವೇಶಿಸಿದೆ.
ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ಗುರ್ಜಿತ್ ಸಿಂಗ್ 52ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಕಬಳಿಸುವ ಮೂಲಕ ಭಾರತಕ್ಕೆ ಚೀನಾ ವಿರುದ್ಧ ಭಾರತಕ್ಕೆ ಗೆಲುವು ತಂದು ಕೊಟ್ಟರು. ಭಾರತದ ಮಹಿಳಾ ಹಾಕಿ ತಂಡ 20 ವರ್ಷಗಳ ಬಳಿಕ ಏಶ್ಯನ್ ಗೇಮ್ಸ್‌ನ ಹಾಕಿಯಲ್ಲಿ ಫೈನಲ್ ಪ್ರವೇಶಿಸಿದೆ.
1998ರಲ್ಲಿ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಭಾರತ 1-2 ಅಂತರದಲ್ಲಿ ಸೋಲು ಅನುಭವಿಸಿ ಚಿನ್ನ ಪಡೆಯುವ ಅವಕಾಶ ವಂಚಿತಗೊಂಡಿತ್ತು.
Next Story





