ಚಿಕ್ಕಮಗಳೂರು: ಸರಳ ಬಕ್ರೀದ್ ಆಚರಿಸಿ ಕೊಡಗು ಸಂತ್ರಸ್ಥರಿಗೆ ನೆರವಾದ ಜನತೆ

ಚಿಕ್ಕಮಗಳೂರು, ಆ.29: ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸಿ ಹಬ್ಬದ ಹಣವನ್ನು ಒಗ್ಗೂಡಿಸಿ ಕೊಡಗು ಸಂತ್ರಸ್ತರ ನಿಧಿಗೆ ನೀಡುವ ಮೂಲಕ ತರೀಕೆರೆ ತಾಲೂಕಿನ ಲಿಂಗದಹಳ್ಳಿಯ ಮುಸ್ಲಿಂ ಸಮುದಾಯ ಮಾನವೀಯತೆ ಮೆರೆದಿದೆ.
ಕೊಡಗಿನಲ್ಲಿ ಅತಿವೃಷ್ಠಿಯಿಂದಾಗಿ ಅಲ್ಲಿನ ಜನತೆ ನಿರಾಶ್ರಿತರಾದ ಸುದ್ದಿ ತಿಳಿಯುತ್ತಿದ್ದಂತೇ ಅವರ ನೆರವಿಗೆ ಧಾವಿಸಲು ಸಂಕಲ್ಪಿಸಿದ ಸಮುದಾಯದ ಜನ ಅದಕ್ಕಾಗಿ ತಮ್ಮ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸಿದರು. ನಂತರ ಹಬ್ಬದಲ್ಲಿ ಉಳಿಸಿದ ಹಣವನ್ನು ಒಗ್ಗೂಡಿಸಿದ ಸಮುದಾಯದವರು ಬುಧವಾರ ನಗರಕ್ಕೆ ಆಗಮಿಸಿ ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಅವರಿಗೆ ಕೊಡಗಿನ ಸಂತ್ರಸ್ತರ ನಿಧಿಗಾಗಿ 51 ಸಾವಿರ ರೂಗಳನ್ನು ನೀಡಿದರು.
ಲಿಂಗದಹಳ್ಳಿ ಸುನ್ನಿ ಜಾಮಿಯಾ ಮಸೀದಿಯ ಅಧ್ಯಕ್ಷ ಆದಿಲ್ ಬಾಷಾ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಎ.ಅಬ್ದುಲ್ ರೆಹಮಾನ್, ಸಮುದಾಯದ ಮುಖಂಡ ಖಲಂದರ್ ಖಾನ್, ಖಲೀಲ್ ಅಹಮದ್, ಜಬೀವುಲ್ಲಾ ಹಾಜರಿದ್ದರು.
Next Story





