ಉದ್ಯೋಗದ ನಿರೀಕ್ಷೆಯಲ್ಲಿ ಏಶ್ಯನ್ ಚಾಂಪಿಯನ್ ಮನ್‌ಜಿತ್

ಚಂಡಿಗಡ, ಆ.29: ಹರ್ಯಾಣದ ಜಿಂದ್ ಜಿಲ್ಲೆಯ ಉಜ್ಹಾನಾ ಗ್ರಾಮದ ಮನ್‌ಜಿತ್ ಸಿಂಗ್ ಏಶ್ಯನ್ ಗೇಮ್ಸ್‌ನ 400 ಮೀ. ಓಟದಲ್ಲಿ ಚಿನ್ನದ ಪದಕ ಜಯಿಸಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಮನ್‌ಜಿತ್‌ಗೆ ಖಾಯಂ ಉದ್ಯೋಗವಿಲ್ಲ. ಏಶ್ಯಾ ಗೇಮ್ಸ್‌ಗಿಂತ ಮೊದಲು ಒಎನ್‌ಜಿಸಿಯಲ್ಲಿ 2 ವರ್ಷ ಗುತ್ತಿಗೆಯ ಆಧಾರದಲ್ಲಿ ಕೆಲಸ ಮಾಡಿದ್ದರು.
‘‘ನನ್ನ ಮಗನಿಗೆ ಖಾಯಂ ನೌಕರಿಯಿಲ್ಲ. ರಾಜ್ಯ ಸರಕಾರದ ಉದ್ಯೋಗಕ್ಕಾಗಿ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಆತನ ಸಾಧನೆಯನ್ನು ಸರಕಾರ ಕಡೆಗಣಿಸಿದೆ. ಈ ಬಾರಿ ನನ್ನ ಮಗನಿಗೆ ಉದ್ಯೋಗ ಲಭಿಸುವ ವಿಶ್ವಾಸವಿದೆ’’ ಎಂದು ಮನ್‌ಜಿತ್ ತಂದೆ ರಣಧೀರ್ ಸಿಂಗ್ ಹೇಳಿದ್ದಾರೆ.
ಮನ್‌ಜಿತ್ ತಂದೆ ರಾಜ್ಯಮಟ್ಟದ ಶಾಟ್‌ಪುಟ್ ಅಥ್ಲೀಟ್ ಆಗಿದ್ದರು. ಮನ್‌ಜಿತ್ ರೈತ ಕುಟುಂಬದಿಂದ ಬಂದಿದ್ದಾರೆ.
‘‘ಮನ್‌ಜಿತ್ ಪಾಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ತರಬೇತಿ ನಡೆಸುತ್ತಿದ್ದು, ವರ್ಷಕ್ಕೆ ಒಂದು ಬಾರಿ ಮನೆಗೆ ಬರುತ್ತಾನೆ. ಆತ ಮನೆಯಲ್ಲಿದ್ದರೆ ತನಗೆ ಕೃಷಿ ಹಾಗೂ ಹೈನುಗಾರಿಕೆಗೆ ನೆರವಾಗುತ್ತಾನೆ’’ ಎಂದು ರಣಧೀರ್ ಸಿಂಗ್ ಹೇಳಿದ್ದಾರೆ.
Next Story





