ಸೆ. 4, 5ರಂದು ಶಿರೂರು ಶ್ರೀ ಆರಾಧನಾ ಮಹೋತ್ಸವ
ಉಡುಪಿ, ಆ.30: ಶಿರೂರು ಮೂಲಮಠವನ್ನು ಪೊಲೀಸರು ದ್ವಂದ್ವ ಮಠವಾಗಿರುವ ಸೋದೆ ಮಠಕ್ಕೆ ಹಸ್ತಾಂತರಿಸಿರುವ ಹಿನ್ನೆಲೆಯಲ್ಲಿ ವೃಂದವನಾಸ್ಥ ರಾಗಿರುವ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಯ ಆರಾಧನಾ ಮಹೋತ್ಸವವನ್ನು ಸೆ. 4 ಮತ್ತು 5ರಂದು ನಡೆಸಲು ನಿರ್ಧರಿಸಲಾಗಿದೆ.
ಸೆ. 4ರಂದು ಹೋಮ ಹವನ ಹಾಗೂ ಇತರ ಧಾರ್ಮಿಕ ಕ್ರಿಯೆಗಳು ನಡೆದರೆ, 5ರಂದು ಆರಾಧನಾ ಮಹೋತ್ಸವವನ್ನು ನಡೆಸಲಾಗುತ್ತದೆ. ಅಂದು ಸುಮಾರು 300 ಮಂದಿಗೆ ಭೋಜನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮಠದ ಮೂಲಗಳು ತಿಳಿಸಿವೆ.
ಈ ಸಂಬಂಧ ಮೂಲ ಮಠ ಹಾಗೂ ಪರಿಸರವನ್ನು ಸ್ವಚ್ಛಗೊಳಿಸುವ ಹಾಗೂ ಆರಾಧನೋತ್ಸವಕ್ಕೆ ಸಜ್ಜುಗೊಳಿಸುವ ಕಾರ್ಯ ಭರದಿಂದ ನಡೆಯುತ್ತಿದೆ ಎಂದು ಸೋದೆ ಮಠದ ಮೂಲಗಳು ತಿಳಿಸಿವೆ.
Next Story





