ಗ್ರಾಹಕರ ಗಮನಕ್ಕೆ: ಬ್ಯಾಂಕ್‌ಗಳಿಗೆ 3 ದಿನ ರಜೆ

ಬೆಂಗಳೂರು, ಆ.30: ಸೆಪ್ಟಂಬರ್ ತಿಂಗಳ ಆರಂಭದಲ್ಲಿ 3 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ ಇರಲಿದೆ.
ಸೆ.2ರಂದು ರವಿವಾರ ಎಂದಿನಂತೆ ಬ್ಯಾಂಕ್ ಗಳಿಗೆ ರಜೆ ಇದೆ. ಸೆ.3, 4, 5, 6, 7ರಂದು ಬ್ಯಾಂಕ್ ಗಳು ಕಾರ್ಯನಿರ್ವಹಿಸಲಿದೆ. ಸೆಪ್ಟೆಂಬರ್ 8ರಂದು 2ನೆ ಶನಿವಾರವಾಗಿದ್ದು ಅಂದು ಹಾಗು ಮರುದಿನ ರವಿವಾರ (ಸೆ.9) ರಜೆ ಇರುತ್ತದೆ.
ಸ್ಪಷ್ಟನೆ: ಸೆಪ್ಟಂಬರ್ ತಿಂಗಳ ಆರಂಭದಲ್ಲಿ ಬ್ಯಾಂಕ್ ಗಳಿಗೆ 6 ದಿನ ರಜೆ ಇರುತ್ತದೆ ಎಂದು ಈ ಮೊದಲು ಸುದ್ದಿ ಪ್ರಕಟವಾಗಿತ್ತು. ಕಣ್ತಪ್ಪಿನಿಂದ ನಡೆದ ಪ್ರಮಾದ ಇದಾಗಿದೆ. ಸೆಪ್ಟಂಬರ್ ಮೊದಲ ವಾರದಲ್ಲಿ ಬ್ಯಾಂಕ್ ಗಳಿಗೆ 3 ದಿನಗಳು ಮಾತ್ರ ರಜೆ ಇರುತ್ತದೆ.
Next Story





