ಗುರುವಾಯನಕೆರೆ: ವಿದ್ಯಾರ್ಥಿ ನಾಪತ್ತೆ

ಬೆಳ್ತಂಗಡಿ, ಆ. 30: ಕುವೆಟ್ಟು ಗ್ರಾಮದ ಸುನ್ನತ್ ಕೆರೆ ನಿವಾಸಿ ಇಮ್ತಿಯಾಝ್ ಎಂಬವರ ಪುತ್ರ ಅಶ್ರಫ್ (14) ಬುಧವಾರದಿಂದ ನಾಪತ್ತೆಯಾಗಿದ್ದಾನೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆತ ಗುರುವಾಯನಕೆರೆ ಪ್ರೌಢ ಶಾಲೆಯ 9ನೆ ತರಗತಿಯ ವಿದ್ಯಾರ್ಥಿ.
ಶಾಲೆಗೆ ಎಂದು ಹೋದ ಅಶ್ರಫ್ ಶಾಲೆಗೂ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿದ್ದಾನೆ ಎಂದು ಇಮ್ತಿಯಾಝ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈತನ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ 9611545090 ಕರೆ ಮಾಡುವಂತೆ ತಿಳಿಸಿದ್ದಾರೆ.
Next Story





