ಹನೂರು: ಸಮರ್ಪಕ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಒತ್ತಾಯ
ಹನೂರು,ಆ.30: ಮಾರ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಸಂದ್ಯಾಯನಪಾಳ್ಯ, ನಾಲ್‍ರೋಡ್, ಕೀರಪಾತಿ ಇನ್ನಿತರರ ಗ್ರಾಮಗಳಿಗೆ ಸಮರ್ಪಕ ವಿದ್ಯುತ್ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ವಿದ್ಯುತ್ ಗುತ್ತಿಗೆದಾರರ ವಿರುದ್ಧ ಹರಿಹಾಯ್ದು, ಸಂಬಂಧಿಸಿದ ಕಾರ್ಯಪಾಲಕ ಅಭಿಯಂತರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಕ್ಷೇತ್ರದ ಗಡಿಹಂಚಿನಲ್ಲಿರುವ ಮಾರ್ಟಳ್ಳಿ ಗ್ರಾಪಂ ಗೆ ಸೇರಿದ ಹಲವು ಗ್ರಾಮಗಳಲ್ಲಿ ಪ್ರತಿ ದಿನ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದ್ದು, ಸಂದ್ಯಾಯನಪಾಳ್ಯ , ನಾಲ್‍ರೋಡ್, ಕೀರಪಾತಿಯ ಜನರಿಗೆ ತೀವ್ರ ತೊಂದರೆ ಆಗುತ್ತಿದೆ. ಈ ಕುರಿತು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂದ್ಯಾಯನಪಾಳ್ಯದಲ್ಲಿಯೇ ಇರುವ ಪವರ್ ಸ್ಷೇಷನ್‍ನ ಸುತ್ತ ಮುತ್ತಲಿನ ಗ್ರಾಮಗಳಿಗೆ ವಿದ್ಯುತ್‍ನ್ನು ಸಮರ್ಪಕವಾದ ರೀತಿಯಲ್ಲಿ ನೀಡದೆ ಈ ಸ್ಟೇಷನ್‍ನ ವ್ಯಾಪ್ತಿಗೆ ಬರುವ ದೂರದ ಗ್ರಾಮಗಳಿಗೆ 24 ತಾಸುಗಳ ಕಾಲ ವಿದ್ಯುತ್‍ನ್ನು ಒದಗಿಸಿ ನಮ್ಮ ಗ್ರಾಮಗಳಿಗೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.