Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕುವೈತ್: ನಿಷೇಧಿತ ಔಷಧಿ ಕೊಂಡುಹೋಗಿ ಜೈಲು...

ಕುವೈತ್: ನಿಷೇಧಿತ ಔಷಧಿ ಕೊಂಡುಹೋಗಿ ಜೈಲು ಪಾಲಾದ ಶಂಕರ ಪೂಜಾರಿ

ವಾರ್ತಾಭಾರತಿವಾರ್ತಾಭಾರತಿ30 Aug 2018 9:57 PM IST
share
ಕುವೈತ್: ನಿಷೇಧಿತ ಔಷಧಿ ಕೊಂಡುಹೋಗಿ ಜೈಲು ಪಾಲಾದ ಶಂಕರ ಪೂಜಾರಿ

ಉಡುಪಿ, ಆ.30: ಕುವೈತ್ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ನಿಷೇಧಿತವಾದ ನೋವು ನಿವಾರಕ ಔಷಧಿ (ಮಾತ್ರೆ) ಅಲ್ಟ್ರಾಸಿಟ್‌ನ್ನು ಮಾಹಿತಿಯ ಕೊರತೆಯಿಂದ ಕುವೈತ್ಗೆ ತೆಗೆದುಕೊಂಡು ಹೋಗಿದ್ದ ಕುಂದಾಪುರ ತಾಲೂಕು ಬಸ್ರೂರು ನಿವಾಸಿ ಶಂಕರ ಪೂಜಾರಿ (40) ಅವರನ್ನು ಕುವೈತ್ ಪೊಲೀಸರು ಬಂಧಿಸಿ ಕಳೆದ ಮೂರು ತಿಂಗಳುಗಳಿಂದ ಕುವೈತ್ನ ಸಿಲಾಬಿಯಾ ಪಬ್ಲಿಕ್ ಜೈಲಿನಲ್ಲಿ ಬಂಧಿಸಿ ಇಟ್ಟಿದ್ದಾರೆಂದು ತಿಳಿದುಬಂದಿದೆ.

ಈ ಬಗ್ಗೆ ಶಂಕರ ಪೂಜಾರಿ ಅವರ ಪತ್ನಿ ಜ್ಯೋತಿ ನೀಡಿದ ಮನವಿಯಂತೆ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ನಡೆಸಿದ ತನಿಖೆಯ ವೇಳೆ ಈ ವಿಷಯ ಗೊತ್ತಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್ ಶಾನುಭಾಗ್ ತಿಳಿಸಿದ್ದಾರೆ.

ಬಸ್ರೂರಿನ ಶಂಕರ ಪೂಜಾರಿ 2014ರ ಮೇ ತಿಂಗಳಲ್ಲಿ ಕುವೈತ್ಗೆ ತೆರಳಿ ಅಲ್ಲಿನ ಅಗ್ರಿಕಲ್ಚರಲ್ ಫುಡ್ ಪ್ರಾಡಕ್ಟ್ ಕಂ. ಕೆ.ಎಸ್.ಸಿ.ಯಲ್ಲಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದ್ದರು. ಆ ಬಳಿಕ ಅವರು ಎರಡು ವರ್ಷಗಳಿಗೊಮ್ಮೆ ರಜೆಯಲ್ಲಿ ಊರಿಗೆ ಬಂದು ತೆರಳುತಿದ್ದರು. ಅದೇ ರೀತಿ 2018ರ ಎ.25ರಂದು ಉಡುಪಿಗೆ ಬಂದ ಅವರು ಎರಡು ತಿಂಗಳು ಊರಿನಲ್ಲಿದ್ದು ಜೂ.13ರಂದು ಮುಂಬೈಯಿಂದ ಕುವೈತ್ಗೆ ತೆರಳಿದ್ದರು.

ಕುವೈತ್ ವಿಮಾನ ನಿಲ್ದಾಣದಲ್ಲಿ ತಪಾಸಣೆಯ ಬಳಿಕ ಅವರನ್ನು ಮನೆಗೆ ತೆರಳಲು ಬಿಡಲಾಗಿತ್ತು. ಆದರೆ ಅವರು ಮನೆಗೆ ಮುಟ್ಟುವ ವೇಳೆಗೆ ಹಿಂದಿನಿಂದಲೇ ಬಂದ ಕುವೈತ್ ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದರು. ಮೊದಲು ಅವರನ್ನು ವಿಮಾನ ನಿಲ್ದಾಣದಲ್ಲೇ ಇರಿಸಿಕೊಂಡು ಬಳಿಕ ಸಿಲಾಬಿಯಾ ಪಬ್ಲಿಕ್ ಜೈಲಿಗೆ ವರ್ಗಾಯಿಸಲಾಗಿತ್ತು. ಅವರೀಗಲೂ ಅದೇ ಜೈಲಿನಲ್ಲಿದ್ದಾರೆ.

ಇಲ್ಲಿ ಊರಲ್ಲಿ ಕುವೈತ್ಗೆ ತೆರಳಿದ ಗಂಡನ ದೂರವಾಣಿ ಕರೆಯ ನಿರೀಕ್ಷೆಯಲ್ಲಿದ್ದ ಜ್ಯೋತಿ ಅವರಿಗೆ ರಾತ್ರಿ 10ಗಂಟೆಯವರೆಗೂ ಕರೆ ಬಾರದೇ ಕಳವಳ ಗೊಂಡರು. ಪತಿ ಸುರಕ್ಷಿತವಾಗಿ ಕುವೈತ್ ಸೇರಿದ್ದಾರೊ ಇಲ್ಲವೊ ಎಂಬ ಹೆದರಿಕೆಯಲ್ಲಿ ಅವರು ಅಲ್ಲಿನ ಅವರ ಸ್ನೇಹಿತರಿಗೆಲ್ಲಾ ಕರೆ ಮಾಡಿ ವಿಚಾರಿಸಿದರೂ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ.

ಮರುದಿನ ಅಂದರೆ ಜೂ.14ರಂದು ಅವರಿಗೆ ಕುವೈತ್ನ ಜೈಲು ಅಧಿಕಾರಿಗಳಿಂದ ಕರೆ ಬಂದು ಗಂಡನನ್ನು ಬಂಧಿಸಿರುವ ವಿಚಾರ ತಿಳಿಯಿತು. ಆದರೆ ಬಂಧನಕ್ಕೆ ಕಾರಣವನ್ನು ಮಾತ್ರ ತಿಳಿಸಿರಲಿಲ್ಲ. ಜೂ.28ರಂದು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ಜ್ಯೋತಿಗೆ ಕರೆ ಮಾಡಿ, ಶಂಕರ ಪೂಜಾರಿ ಬಿಡುಗಡೆಗೆ ಬೇಕಾದ ಕಾನೂನು ನೆರವನ್ನು ವ್ಯವಸ್ಥೆ ಗೊಳಿಸುವಂತೆ ತಿಳಿಸಿದ್ದು, ಆಗಲೂ ಗಂಡನ ಅಪರಾಧ ಏನು ಎಂಬುದು ಜ್ಯೋತಿಗೆ ಗೊತ್ತಿರಲಿಲ್ಲ ಎಂದು ಡಾ. ಶಾನುಭಾಗ್ ತಿಳಿಸಿದ್ದಾರೆ.

ಕೊನೆಗೂ ಜು. 13ರಂದು ಶಂಕರ ಪೂಜಾರಿ ಕುವೈತ್ನಿಂದ ಪತ್ನಿಗೆ ಕರೆ ಮಾಡಿ ಎಲ್ಲಾ ವಿಷಯ ತಿಳಿಸಿದರು. ತಾನು ಊರಿನಿಂದ ಹೊರಡುವಾಗ ಮುಬಾರಕ್ ಎಂಬವರು ಕುವೈತ್ನಲ್ಲಿರುವ ತನ್ನ ಅತ್ತೆಗೆ ನೀಡಲು ಕೊಟ್ಟಿದ್ದ ಔಷಧದ ಪ್ಯಾಕೆಟ್ ತನ್ನ ಬಂಧನಕ್ಕೆ ಕಾರಣ ಎಂದವರು ತಿಳಿಸಿದ್ದರು. ಶಂಕರ ಪೂಜಾರಿ ಅವರು ಈ ಪಾರ್ಸೆಲ್‌ನ್ನು ಕುವೈತ್ನಲ್ಲಿದ್ದ ಮುಬಾರಕ್ ಅವರ ಅತ್ತೆ ತಸ್ಲೀಮ್ ಫಾತಿಮಾರಿಗೆ ನೀಡಬೇಕಾಗಿತ್ತು.

ಈಗ ಕುವೈತ್ನ ನಿವಾಸಿಯಾಗಿರುವ ತಸ್ಲೀಮಾ ಫಾತಿಮಾ (45)ರ ಉಡುಪಿಯಲ್ಲಿರುವ ಅಳಿಯ ಮುಬಾರಕ್ ಮಾತ್ರೆಗಳ ಪ್ಯಾಕೆಟ್‌ನ್ನು ಅತ್ತೆಗೆ ತಲುಪಿಸಲು ಶಂಕರ ಪೂಜಾರಿಗೆ ಮುಂಬೈಗೆ ತೆರಳುವ ಒಂದು ದಿನ ಮೊದಲಷ್ಟೇ ನೀಡಿದ್ದರು. ಅತ್ತೆಯ ವೈಯಕ್ತಿಕ ಉಪಯೋಗಕ್ಕೆ ಈ ಔಷಧಿಯನ್ನು ಕಳುಹಿಸಲಾಗುತ್ತಿದೆ ಎಂದು ಮುಬಾರಕ್ ಶಂಕರ್‌ಗೆ ತಿಳಿಸಿದ್ದರು.

ತನ್ನ ಬಂಧನದ ಬಳಿಕ ಶಂಕರ ಪೂಜಾರಿ ಮೂರು ಬಾರಿ ಫಾತಿಮಾರನ್ನು ಸಂಪರ್ಕಿಸಿ ಸಹಾಯಕ್ಕೆ ಮೊರೆ ಇಟ್ಟರೂ, ಅವರು ಶಂಕರ್‌ರನ್ನು ಸಮಸ್ಯೆಯಿಂದ ಪಾರು ಮಾಡಲು ಯಾವುದೇ ಪ್ರಯತ್ನ ನಡೆಸಲಿಲ್ಲ ಎಂದು ಡಾ. ಶಾನುಭಾಗ್ ತಿಳಿಸಿದರು.

ಮುಬಾರಕ್ ಹೇಳಿಕೆ:  ಈ ಬಗ್ಗೆ ಈ ತಿಂಗಳ ಕೊನೆ ವಾರದಲ್ಲಿ ಜ್ಯೋತಿ, ಪತಿಯ ಬಿಡುಗಡೆಗೆ ನೆರವಾಗಲು ಸಹಾಯ ಮಾಡುವಂತೆ ಪ್ರತಿಷ್ಠಾನವನ್ನು ಸಂಪರ್ಕಿಸಿ ಮನವಿ ಮಾಡಿದರು. ಉಡುಪಿಯಲ್ಲಿ ಚಾಲಕರಾಗಿರುವ ಮುಬಾರಕ್ ಅವರನ್ನು ಸಂಪರ್ಕಿಸಿ ಮಾತನಾಡಿದಾಗ ತಾನು ಉಡುಪಿಯ ಮೆಡಿಕಲ್ ಶಾಪ್‌ನಿಂದ 210 ಅಲ್ಟ್ರಾಸಿಟ್ ಮಾತ್ರೆಯನ್ನು ಖರೀದಿಸಿ ಶಂಕರ ಪೂಜಾರಿಗೆ ನೀಡಿರುವುದನ್ನು ಒಪ್ಪಿಕೊಂಡರು. ಜೂ.10ರಂದು ಮಾತ್ರೆಯನ್ನು ಖರೀದಿಸಿರುವ ಬಿಲ್‌ನ್ನು ಸಹ ಅವರು ತೋರಿಸಿದರು. ತಾನು ಮಾತ್ರೆಯ ಪ್ಯಾಕೆಟ್‌ನ್ನು ವೈದ್ಯರ ಚೀಟಿ ಹಾಗೂ ಖರೀದಿಸಿದ ಬಿಲ್‌ನೊಂದಿಗೆ ಶಂಕರ ಪೂಜಾರಿಗೆ ನೀಡಿದ್ದಾಗಿ ತಿಳಿಸಿದರು.

ಸಮಸ್ಯೆ ಇರುವುದೇ ಇಲ್ಲಿ ಎಂದ ಡಾ.ಶಾನುಭಾಗ್, ಈ ಔಷಧಿಗಾಗಿ ವೈದ್ಯರು ಚೀಟಿ ನೀಡಿದ್ದು 2015ರ ಎ.9ರಂದು. ಬಳಿಕ ಇದನ್ನು 2018 ಎ.9 ಎಂದು ತಿದ್ದಲಾಗಿತ್ತು. ವೈದ್ಯರು ಚೀಟಿಯಲ್ಲಿ 20 ಮಾತ್ರೆ ಬರೆದಿದ್ದರೆ, ಮೆಡಿಕಲ್ ಶಾಪ್‌ನವರು 210 ಮಾತ್ರೆ ನೀಡಿದ್ದರು.

ಇದೀಗ ಜ್ಯೋತಿ ಹತಾಶರಾಗಿದ್ದಾರೆ. ಘಟನೆ ನಡೆದಿರುವುದು ಕುವೈತ್ನಲ್ಲಾಗಿರುವುದರಿಂದ ಸ್ಥಳೀಯ ಪೊಲೀಸರು ಯಾವುದೇ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಅವರು ಸಾಮಾಜಿಕ ಜಾಲತಾಣಗಳ ನೆರವು ಯಾಚಿಸಿದ್ದಾರೆ.

ಸಮಸ್ಯೆ ಬಗೆಹರಿಸಲು ಮುಬಾರಕ್ ಮೇಲೆ ಒತ್ತಡ ಬಲವಾದಾಗ, ಆತ ಸಂತ್ರಸ್ಥೆಗೆ ಸಹಾಯ ಮಾಡುವ ಪ್ರಯತ್ನದಲ್ಲಿ ಇನ್ನಷ್ಟು ಎಡವಟ್ಟು ಮಾಡಿದ್ದಾರೆ ಎಂದು ಡಾ. ರವೀಂದ್ರನಾಥ್ ತಿಳಿಸಿದರು.

ಮಾತ್ರೆಗೆ ಇತ್ತೀಚಿನ ವೈದ್ಯರ ಚೀಟಿ ಪಡೆಯುವ ಪ್ರಯತ್ನ ನಡೆಸಿದ ಮುಬಾರಕ್, ಇದಕ್ಕಾಗಿ ಮೊದಲು ಪರೀಕ್ಷಿಸಿ ಮಾತ್ರೆ ಬರೆದ ಕೆಎಂಸಿ ಆಸ್ಪತ್ರೆಗೆ ತೆರಳಿದರು. ಅವರು ರೋಗಿಯನ್ನು ವೈಯಕ್ತಿಕವಾಗಿ ಪರೀಕ್ಷಿಸದೇ ಔಷಧಿ ಬರೆದು ಕೊಡಲು ಸಾಧ್ಯವಿಲ್ಲ ಎಂದು ಬಿಟ್ಟರು. ಬಳಿಕ ಮುಬಾರಕ್ ಉಡುಪಿಯ ನರ್ಸಿಂಗ್ ಹೋಮ್‌ನ ವೈದ್ಯರನ್ನು ಸಂಪರ್ಕಿಸಿ ವಿನಂತಿಸಿಕೊಂಡಾಗ ಮೊದಲು ನಿರಾಕರಿಸಿದ ವೈದ್ಯರು, ಬಳಿಕ ಮಾನವೀಯ ನೆಲೆಯಲ್ಲಿ 2018 ಜೂ.9 ತಾರೀಕಿಗೆ ಹೊಸ ಚೀಟಿ ಬರೆದು ಕೊಟ್ಟರು. ಇದನ್ನು ಸಾಮಾಜಿಕ ಕಾರ್ಯಕರ್ತರು ಉತ್ಸಾಹದಿಂದ ಕುವೈತ್ ಸರಕಾರದ ಅಧಿಕಾರಿಗಳಿಗೆ ತಲುಪಿಸಿದರು. ಇದು ಮತ್ತೊಂದು ಹೊಸ ಸಮಸ್ಯೆಯನ್ನು ಸೃಷ್ಟಿಸಿತು.

ಕುವೈತ್ನಲ್ಲಿರುವ ರೋಗಿಯೊಬ್ಬರನ್ನು ದೈಹಿಕವಾಗಿ ಪರೀಕ್ಷಿಸದೇ ಭಾರತದ ವೈದ್ಯರು ನೀಡಿದ ಔಷಧಿ ಚೀಟಿಯನ್ನು ಕುವೈತ್ ಪೊಲೀಸರು ಮಾನ್ಯ ಮಾಡುವುದು ಹೇಗೆ. ಏಕೆಂದರೆ ಚೀಟಿ ನೀಡಿದ ದಿನದಂದು ರೋಗಿ ಕುವೈತ್ನಲ್ಲಿರುವ ದಾಖಲೆ ಇರುವ ಕಾರಣ ಇದು ಸಮಸ್ಯೆ ಸೃಷ್ಟಿಸಿದೆ ಎಂದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವೆಬ್‌ಸೈಟ್ ಪ್ರಕಾರ, ಶಂಕರ ಪೂಜಾರಿ ಅವರನ್ನು ಮಾದಕ ದ್ರವ್ಯದ ವಸ್ತುವನ್ನು ಹೊಂದಿದ ಆರೋಪದ ಮೇಲೆ ಕುವೈತ್ನ ಜೈಲಿನಲ್ಲಿಡಲಾಗಿದೆ. ಅವರ ಕುಟುಂಬಕ್ಕೆ ಮುಂದಿನ ಕ್ರಮದ ಬಗ್ಗೆ ತಿಳಿಸಲಾಗಿದೆ. ಇನ್ನು ವಿದೇಶಾಂಗ ವ್ಯವಹಾರ ಇಲಾಖೆ ಹಾಗೂ ಕೇಂದ್ರ ಸರಕಾರ ಮಾತ್ರ ಮುಗ್ದ, ನಿರಪರಾಧಿ ಶಂಕರ ಪೂಜಾರಿಗೆ ಕಾನೂನು ನೆರವು ನೀಡಿ ಜೈಲಿನಿಂದ ಹೊರಗೆ ಕರೆ ತರಲು ಸಾಧ್ಯ ಎಂದು ಡಾ. ರವೀಂದ್ರನಾಥ ಶಾನುಭಾಗ್ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X