ಲಕ್ಷಾಂತರ ರೂ. ಮೌಲ್ಯದ ತಾಳೆಎಣ್ಣೆಯೊಂದಿಗೆ ಚಾಲಕ ಪರಾರಿ
ಮಂಗಳೂರು, ಆ. 30: ಬೈಕಂಪಾಡಿಯಲ್ಲಿರುವ ರುಚಿ ಸೋಯ ಇಂಡಸ್ಟ್ರಿಯಿಂದ ಲಕ್ಷಾಂತರ ರೂ. ಮೌಲ್ಯದ ತಾಳೆಎಣ್ಣೆಯೊಂದಿಗೆ ಚಾಲಕ ಪರಾರಿಯಾದ ಘಟನೆ ನಡೆದಿದೆ.
ಆರೋಪಿ ಚಾಲಕನನ್ನು ಅನಿಲ್‌ಕುಮಾರ್ ಎಂದು ಗುರುತಿಸಲಾಗಿದೆ.
ಆ.28ರಂದು ವಾಹನ ಚಾಲಕ ಅನಿಲ್‌ಕುಮಾರ್ ಬೈಕಂಪಾಡಿಯಲ್ಲಿರುವ ರುಚಿ ಸೋಯ ಇಂಡಸ್ಟ್ರಿಯಿಂದ ಸುಮಾರು 7,50,000 ಮೌಲ್ಯದ 1,050 ಬಾಕ್ಸ್ ತಾಳೆಎಣ್ಣೆಯನ್ನು ಕೊಂಡೊಯ್ದಿದ್ದಾನೆ. ಆದರೆ ಆರೋಪಿ ಚಾಲಕ ಸೊತ್ತನ್ನು ಬೆಂಗಳೂರಿಗೆ ಕೊಂಡೊಯ್ಯದೆ ಲಾರಿಯೊಂದಿಗೆ ಸೊತ್ತನ್ನು ಕಳವುಗೈದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
Next Story





