Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಶಿರಾಡಿ ಘಾಟ್ ಸಮಸ್ಯೆ ಪರಿಹಾರಕ್ಕೆ ಪೇಸ್...

ಶಿರಾಡಿ ಘಾಟ್ ಸಮಸ್ಯೆ ಪರಿಹಾರಕ್ಕೆ ಪೇಸ್ ವರದಿ: ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲು ಸಲಹೆ

ವಾರ್ತಾಭಾರತಿವಾರ್ತಾಭಾರತಿ30 Aug 2018 11:28 PM IST
share

ಪುತ್ತೂರು, ಆ. 30: ಶಿರಾಡಿ ಘಾಟ್ ರಸ್ತೆಯ ಈಗಿನ ಸ್ಥಿತಿಯ ಕುರಿತು ಸ್ವ ವೀಕ್ಷಣೆ ನಡೆಸಿ ಸಮಸ್ಯೆಗಳ ಪರಿಹಾರಗಳಿಗಾಗಿ ಹಲವಾರು ಮಾರ್ಗಸೂಚಿಗಳನ್ನು ವರದಿ ರೂಪದಲ್ಲಿ ತಯಾರಿಸಿ ಸಂಬಂಧಿಸಿದವರಿಗೆ ಸಲಹೆ ನೀಡಿರುವ ಪುತ್ತೂರಿನ ಅಸೋಸಿಯೇಟ್ಸ್ ಆಫ್ ಸಿವಿಲ್ ಎಂಜಿನಿಯರ್(ಪೇಸ್) ತಂಡ ಶಿರಾಡಿ ಘಾಟ್ ರಸ್ತೆಯಲ್ಲಿ ರಸ್ತೆ ಸುರಕ್ಷತಾ ಪಡೆ ನಿಯೋಜಿಸಿ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ಜನಪ್ರತಿನಿಧಿ ಗಳಿಗೆ ಸಲಹೆ ನೀಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಶಂಕರ್ ಭಟ್ ಕೆ ತಿಳಿಸಿದ್ದಾರೆ. 

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಸೋಸಿಯೇಟ್ಸ್ ಆಫ್ ಸಿವಿಲ್ ಎಂಜಿನಿಯರ್ ಸಂಸ್ಥೆಯ ಅಧ್ಯಕ್ಷ ಶಂಕರ್ ಭಟ್.ಕೆ. ಅವರು ಆ.27ರಂದು ನಮ್ಮ ಸಂಸ್ಥೆಯ 12 ಮಂದಿ ಎಂಜಿನಿಯರ್ ಗಳ ತಂಡ ಗುಂಡ್ಯ , ಶಿರಾಡಿ ಪರಿಸರದಲ್ಲಿ ವಾಸಿಸುತ್ತಿರುವ ಜನರ ವಿನಂತಿಯ ಮೇರೆಗೆ ಶಾಸಕಿ ತೇಜಸ್ವಿನಿ ರಮೇಶ್ ಅವರೊಂದಿಗೆ ಶಿರಾಡಿ ಘಾಟ್ ರಸ್ತೆಯನ್ನು ವೀಕ್ಷಣೆ ನಡೆಸಿದೆ. ಗುಡ್ಡ, ಮಣ್ಣು ಕುಸಿತಗೊಂಡ ಸ್ಥಳಗಳಿಗೆ ಭೇಟಿ ನೀಡಿ, ಅದನ್ನು ತಡೆಯುವ ನಿಟ್ಟಿನಲ್ಲಿ ಕೆಲವೊಂದು ಪರಿಹಾರ ಸೂತ್ರಗಳನ್ನು ಕಂಡು ಕೊಂಡಿದೆ ಎಂದರು. 

ನದಿಯ ಬದಿಗೆ ತಾಗಿಕೊಂಡಿರುವ ರಸ್ತೆಯ ಸುಮಾರು 12 ಭಾಗಗಳಲ್ಲಿ ಭೂ ಕುಸಿತ ಕಂಡು ಬಂದಿದ್ದು, ಆ ಭಾಗದಲ್ಲಿ ಘನ ವಾಹನ ಸಂಚಾರ ನಡೆದಲ್ಲಿ ಅನಾಹುತಗಳಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಈ ಭಾಗದಲ್ಲಿ 12 ಕಡೆಗಗಳಲ್ಲೂ ಮತ್ತು ಗುಡ್ಡ ಕುಸಿತ ಜಾಗದಲ್ಲಿ ಬೈಪಾಸ್ ರಸ್ತೆಗಳನ್ನು ನಿರ್ಮಿಸಿ ಅಲ್ಲಿ ರಸ್ತೆ ಸರುಕ್ಷತಾ ಗಸ್ತು ಪಡೆ ನಿಯೋಜಿಸಬೇಕು. ಬಳಿಕ ಲಘ ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡಬಹುದು ಎಂದು ಅವರು ತಿಳಿಸಿದರು. 

ರಸ್ತೆ ಬದಿಯ ಬಸಿಕಾಲುವೆಗಳು ಸಮರ್ಪಕವಾಗಿಲ್ಲ. ಪ್ರಸ್ತುತ ಇರುವ ಬಸಿ ಕಾಲುವೆಗಳು ಮಳೆ ನೀರು ಹಾಗೂ ಒರತೆ ನೀರನ್ನು ಒಯ್ಯಲು ಬೇಕಾದಷ್ಟು ಪಾತ್ರವನ್ನು ಹೊಂದಿರುವುದಿಲ್ಲ. ಇದರಿಂದಾಗಿ ಗುಡ್ಡೆ ಬದಿಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಮೋರಿಗಳಿಂದ ನೀರು ಹೊರ ಹೋಗುವ ಹೆಚ್ಚಿನ ಕಡೆ ಎಲ್ಲಾ ಕಡೆ ಮಣ್ಣು ಕರಗಿದೆ ಎಂದು ಹೇಳಿದರು. 

ರಸ್ತೆ ಬದಿಯ ಬಸಿಕಾಲುವೆಗಳ ಪಾತ್ರ ದೊಡ್ಡದು ಮಾಡುವುದು. ಬಸಿ ಕಾಲುವೆಯ ತಳಭಾಗದಲ್ಲಿ ಒರತೆ ನೀರು ಹಾದು ಹೋಗಲು ಸಮರ್ಪಕವಾದ ತೂತುಗಳನ್ನು ಒದಗಿಸುವುದು. ರಸ್ತೆ ಬದಿಯ ಭೂ ಕುಸಿತವಾದ ಸ್ಥಳದಲ್ಲಿ  ತಡೆಗೋಡೆ ನಿರ್ಮಾಣ ಕಷ್ಟಕರವಾಗಿರುವುದರಿಂದ ಸದ್ರಿ ಪ್ರದೇಶಗಳಲ್ಲಿ ಇನ್ನೊಂದು ಬದಿಯನ್ನು ಅಗಲಗೊಳಿಸಬೇಕು. ಭೂ ಕುಸಿತ ತಡೆಯಲು ಕೆಲವು ಅವಶ್ಯವಿದ್ದ ಕಡೆಗಳಲ್ಲಿ ವೈಜ್ಞಾನಿಕವಾಗಿ ಗುಡ್ಡವನ್ನು ಕತ್ತರಿಸುವುದು. ಭೂ ಕುಸಿತ ಉಂಟಾದ ರಸ್ತೆಯ ಅರ್ಧಭಾಗದಲ್ಲಿ ವಾಹನ ಸಂಚರಿಸಿದರೆ ಅನಾಹುತಗಳಾಗುವ ಸಂಭವವಿವುದರಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸುವುದು. ರಸ್ತೆಗಳ ಬದಿಗೆ ಸೇಫ್ ಗಾರ್ಡ್ ವಾಲ್ ಅಳವಡಿಸುವುದು. ಎಲ್ಲಾ ಸೇಫ್ ಗಾರ್ಡ್ ವಾಲ್ ಮಧ್ಯೆ ಇರುವ ಎಲ್ಲಾ ಪ್ರದೇಶದಲ್ಲಿ ನೀರು ಇಂಗಿ ಹೋಗದಂತೆ ಉತ್ತಮವಾದ ಸದೃಢವಾದ ಇಂಟರ್‍ಲಾಕ್ ಅಳವಡಿಸುವುದು ಮತ್ತು ಯಾವುದೇ ರಸ್ತೆಗಳ ನಕಾಶೆ ಮತ್ತು ಡಿಸೈನ್ ತಯಾರಿಸುವಾಗ ಸದ್ರಿ ಪ್ರದೇಶಗಳ ಹತ್ತಿರದಲ್ಲಿರುವ ನುರಿತ ಸಿವಿಲ್ ಎಂಜಿನಿಯರ್ ಗಳಿಂದ ಅಭಿಪ್ರಾಯ ಮತ್ತು ಸಲಹೆ ಸಂಗ್ರಹಿಸಬೇಕು ಎಂಬ ವಿವಿಧ ಸಲಹೆಗಳನ್ನೊಳಗೊಂಡ ಪರಿಹಾರ ಸೂತ್ರಗಳನ್ನು ಸಿದ್ಧಪಡಿಸಲಾಗಿದೆ ಎಂದರು.

ಈ ಸಲಹೆಗಳನ್ನು ರಾಜ್ಯದ ಮುಖ್ಯಮಂತ್ರಿ, ಕೇಂದ್ರ ರಾಷ್ಟ್ರೀಯ ಹೆದ್ದಾರಿ ಸಚಿವರು, ರಾಜ್ಯ ಹೆದ್ದಾರಿ ಸಚಿವರು, ಉಸ್ತುವಾರಿ ಸಚಿವರು, ದ.ಕ. ಮತ್ತು ಹಾಸನ ಜಿಲ್ಲಾಧಿಕಾರಿಗಳು ಸೇರಿದಂತೆ ಈ ಭಾಗದ ಶಾಸಕರುಗಳು ಹಾಗೂ ಉಪವಿಭಾಗಾಧಿಕಾರಿಗಳಿಗೆ ರಾವಾನಿಸಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಆನಂದ್ ಕುಮಾರ್ ಎಸ್.ಕೆ, ಕಾರ್ಯದರ್ಶಿ ಅರ್ಜುನ್ ಎಸ್,ಕೆ, ಉಪಾಧ್ಯಕ್ಷ ಕಿಶೋರ್ ಕುಮಾರ್, ಮಾಜಿ ಅಧ್ಯಕ್ಷ ಸತ್ಯನಾರಾಯಣ ಭಟ್, ಜತೆ ಕಾರ್ಯದರ್ಶಿ ಶಿವಪ್ರಸಾದ್, ಸದಸ್ಯ ವಸಂತ್ ಭಟ್ ಉಪಸ್ಥಿತರಿದ್ದರು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X