ವಿಟ್ಲ- ಕುಕ್ಕುತ್ತಡ್ಕ ನಿವಾಸಿ ಸೌದಿಯಲ್ಲಿ ಹೃದಯಾಘಾತದಿಂದ ಮೃತ್ಯು

ಬಂಟ್ವಾಳ, ಆ.31: ವಿಟ್ಲ ಸಮೀಪದ ಕುಕ್ಕುತ್ತಡ್ಕ ನಿವಾಸಿ ಮಹಮೂದ್ (55) ಅವರು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಶುಕ್ರವಾರ ಸಂಜೆ ಹೃದಯಾಘಾತದಿಂದ ನಿಧನರಾದರು.
ಕುಕ್ಕುತ್ತಡ್ಕ ಮೋನು ಬ್ಯಾರಿ ಅವರ ಪುತ್ರನಾಗಿರುವ ಮಹಮೂದ್ ಕಳೆದ 30 ವರ್ಷಗಳಿಂದ ಗಲ್ಫ್ ನಲ್ಲಿ ಉದ್ಯೋಗದಲ್ಲಿದ್ದರು. ಇತ್ತೀಚೆಗಷ್ಟೇ ಊರಿಗೆ ರಜೆಯಲ್ಲಿ ಆಗಮಿಸಿದ್ದ ಅವರು ಮತ್ತೆ ಸೌದಿಗೆ ತೆರಳಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Next Story





