ಗ್ರಾಮೀಣ, ನಗರ ಪ್ರದೇಶಗಳ ವಸತಿ ರಹಿತರಿಗೆ ಸ್ಪಂದನ- ವಸತಿ ಸಹಾಯವಾಣಿ
ಬೆಂಗಳೂರು, ಆ.31: ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ ಕುರಿತು ಮಾಹಿತಿ, ದೂರುಗಳಿದ್ದಲ್ಲಿ ಸ್ವೀಕರಿಸಿ ಪರಿಹರಿಸುವ ಸಲುವಾಗಿ ಸ್ಪಂದನ ವಸತಿ ಸಹಾಯವಾಣಿ ಆರಂಭಿಸಲಾಗಿದೆ.
ಅದೇ ರೀತಿ, ಜಿಲ್ಲೆ, ತಾಲೂಕು, ಗ್ರಾಮಪಂಚಾಯತ್, ಗ್ರಾಮಗಳಿಂದ ನಿಗಮಕ್ಕೆ ಬರುವ ಕರೆಗಳನ್ನು ಸ್ವೀಕರಿಸಲು 16 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ವಾಸಿಸುವ ವಸತಿ ರಹಿತರಿಗೆ ಸರಕಾರದಿಂದ ವಸತಿ ಮತ್ತು ನಿವೇಶನವನ್ನು ನೀಡುತ್ತಿದ್ದು, ಇಂದಿರಾ ಮನೆ ಎಂಬ ಮೊಬೈಲ್ ಆ್ಯಪ್ ಮೂಲಕ ಭೌತಿಕ ಪ್ರಗತಿಯನ್ನು ಆನ್ ಲೈನ್‌ನಲ್ಲಿ ಪಡೆದು ಪರಿಶೀಲಿಸಿ ನೇರವಾಗಿ ಆಧಾರ್ ಸಂಖ್ಯೆ ಆಧಾರದ ಮೇಲೆ ಫಲಾನುಭವಿಗಳ ಖಾತೆಗೆ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ.
ಫಲಾನುಭವಿಗಳಿಗೆ ನೆರವಾಗಲು, ಮನೆ ನಿರ್ಮಾಣದ ಸಮಸ್ಯೆಗಳನ್ನು ನಿವಾರಿಸಲು ಹಾಗೂ ಇಂದಿರಾ ಮನೆ ಆ್ಯಪ್ ಉಪಯೋಗಿಸುವ ಮಾಹಿತಿಗಳನ್ನು ಸೇರಿದಂತೆ ವಸತಿ ಯೋಜನೆಗೆ ಸಂಬಂಧಿಸಿದ ಮಾಹಿತಿ ಪಡೆಯಲು ದೂರವಾಣಿ ಸಂಖ್ಯೆ: 080-23118888 ಅನ್ನು ಸಂರ್ಪಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





