ಮಂಗಳೂರು: ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿ ನಾಪತ್ತೆ

ಮಂಗಳೂರು, ಸೆ.1: ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಜನಾರ್ದನ ಗೌಡ ಹುಲಿಕೆರೆ ಗುತ್ತಿಗಾರು (60) ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದ ಜನಾರ್ದನ ಆ.25ರಂದು ಹಲ್ಲುನೋವಿನ ಚಿಕಿತ್ಸೆಗಾಗಿ ವೆನ್‌ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಆ.28ರಂದು ರಾತ್ರಿ 12:15ಕ್ಕೆ ಪತ್ನಿ ಜಯಂತಿ ಅವರಿಗೆ ಎಚ್ಚರವಾಗಿದೆ. ಆಗ ಪತಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಚಹರೆ: ನಾಪತ್ತೆಯಾದ ವ್ಯಕ್ತಿ 5.6 ಇಂಚು ಎತ್ತರವಿದ್ದು, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆ (0824-2220518) ಅಥವಾ ನಾಪತ್ತೆಯಾದ ವ್ಯಕ್ತಿಯ ಪುತ್ರ ಗೋವರ್ಧನ್(9481345155) ಅವರನ್ನು ಸಂಪರ್ಕಿಸಬಹುದಾಗಿದೆ.
Next Story





