ಎಲ್ಲ ಮಾದರಿಯ ಕ್ರಿಕೆಟಿಗೆ ಬದ್ರಿನಾಥ್ ವಿದಾಯ

ಚೆನ್ನೈ,ಸೆ.1: ಭಾರತದ ಮಾಜಿ ಕ್ರಿಕೆಟಿಗ ಸುಬ್ರಹ್ಮಣ್ಯಂ ಬದ್ರಿನಾಥ್ ಶನಿವಾರ ಎಲ್ಲ 3 ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ.
ತಮಿಳುನಾಡಿನ ಮಧ್ಯಮ ಕ್ರಮಾಂಕದ ದಾಂಡಿಗ ಬದ್ರಿನಾಥ್ ಭಾರತದ ಪರ 2 ಟೆಸ್ಟ್,7 ಏಕದಿನ ಹಾಗೂ ಏಕೈಕ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನಾಡಿದ್ದರು. ಇತ್ತೀಚೆಗೆ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಕರೈಕುಡಿ ಕಾಲೈ ತಂಡಕ್ಕೆ ಕೋಚ್ ಆಗಿದ್ದ ಬದ್ರಿನಾಥ್ ದಶಕಗಳ ಕಾಲ ರಾಜ್ಯ ರಣಜಿ ತಂಡದ ಪ್ರಮುಖ ಆಟಗಾರರಾಗಿದ್ದರು. ವಿದರ್ಭ ಹಾಗೂ ಹೈದರಾಬಾದ್ ರಣಜಿ ತಂಡವನ್ನೂ ಪ್ರತಿನಿಧಿಸಿದ್ದ ಬದ್ರಿನಾಥ್ 145 ಪ್ರಥಮ ದರ್ಜೆ ಪಂದ್ಯಗಳಲ್ಲಿ 10,245 ರನ್ ಗಳಿಸಿದ್ದಾರೆ. ಇದರಲ್ಲಿ 32 ಶತಕಗಳಿವೆ.
Next Story





