ಎರಡನೇ ಇನಿಂಗ್ಸ್ ನಲ್ಲಿ ಭಾರತದ ಮೂರು ವಿಕೆಟ್‌ಗಳು ಕ್ಷಿಪ್ರ ಪತನ
ಟೀಮ್ ಇಂಡಿಯಾದ ಗೆಲುವಿಗೆ 245 ರನ್‌ಗಳ ಗುರಿ

ಸೌಥ್‌ಹ್ಯಾಂಪ್ಟನ್, ಸೆ.2: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಕ್ರಿಕೆಟ್ ಟೆಸ್ಟ್‌ನಲ್ಲಿ ಗೆಲುವಿಗೆ ಎರಡನೇ ಇನಿಂಗ್ಸ್‌ನಲ್ಲಿ 245 ರನ್‌ಗಳ ಸವಾಲನ್ನು ಪಡೆದಿರುವ ಭಾರತ 8.3 ಓವರ್‌ಗಳಲ್ಲಿ 22 ರನ್ ಸೇರಿಸುವಷ್ಟರಲ್ಲಿ 3ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿದೆ.
ಆರಂಭಿಕ ದಾಂಡಿಗ ಲೋಕೇಶ್ ರಾಹುಲ್(0) ,ಚೇತೇಶ್ವರ ಪೂಜಾರ(5) ಮತ್ತು ಶಿಖರ್ ಧವನ್ (17) ಔಟಾದರು. ಟೆಸ್ಟ್‌ನ ನಾಲ್ಕನೇ ದಿನವಾಗಿರುವ ರವಿವಾರ ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ 96.1 ಓವರ್‌ಗಳಲ್ಲಿ 271 ರನ್‌ಗಳಿಗೆ ಆಲೌಟಾಗಿದೆ. ಮೂರನೇ ದಿನದಾಟದಂತ್ಯಕ್ಕೆ 91.5 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 260 ರನ್ ಗಳಿಸಿತ್ತು. ಈ ಮೊತ್ತಕ್ಕೆ 11 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ.
ಸ್ಟುವರ್ಟ್ ಬ್ರಾಡ್(0) ಖಾತೆ ತೆರೆಯದೆ ಶಮಿಗೆ ವಿಕೆಟ್ ಒಪ್ಪಿಸಿದ್ದಾರೆ. ಸ್ಯಾಮ್ ಕರನ್ 46 ರನ್ ಗಳಿಸಿ ರನೌಟಾದರು. ಕರನ್ ಶನಿವಾರ ದಿನದಾಟದಂತ್ಯಕ್ಕೆ 37 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು. ಜೇಮ್ಸ್ ಆ್ಯಂಡರ್ಸನ್ ಔಟಾಗದೆ 1 ರನ್ ಗಳಿಸಿದ್ದಾರೆ.
ಭಾರತದ ಪರ ಮುಹಮ್ಮದ್ ಶಮಿ 57ಕ್ಕೆ 4, ಇಶಾಂತ್ ಶರ್ಮಾ 36ಕ್ಕೆ 2, ರವಿಚಂದ್ರನ್ ಅಶ್ವಿನ್ ಮತ್ತು ಜಸ್‌ಪ್ರೀತ್ ಬುಮ್ರಾ ತಲಾ 1 ವಿಕೆಟ್ ಪಡೆದರು.







