Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಶಿಕ್ಷಣದ ಜೊತೆ ಮಕ್ಕಳಲ್ಲಿ ಸಾಂಸ್ಕ್ರತಿಕ...

ಶಿಕ್ಷಣದ ಜೊತೆ ಮಕ್ಕಳಲ್ಲಿ ಸಾಂಸ್ಕ್ರತಿಕ ಪ್ರಜ್ಞೆ ಬೆಳೆಸಬೇಕು: ಸುಜಾತಾ ಕೃಷ್ಣಪ್ಪ

ವಾರ್ತಾಭಾರತಿವಾರ್ತಾಭಾರತಿ2 Sept 2018 6:19 PM IST
share
ಶಿಕ್ಷಣದ ಜೊತೆ ಮಕ್ಕಳಲ್ಲಿ ಸಾಂಸ್ಕ್ರತಿಕ ಪ್ರಜ್ಞೆ ಬೆಳೆಸಬೇಕು: ಸುಜಾತಾ ಕೃಷ್ಣಪ್ಪ

ಕೊಪ್ಪ, ಸೆ.2: ಮಕ್ಕಳಲ್ಲಿ ನಾಡು, ನುಡಿ, ರಾಷ್ಟ್ರದ ಬಗ್ಗೆ ಗೌರವದ ಭಾವನೆ ಬರಬೇಕಾದರೆ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ತಿಳಿಸಿದರು.

ಪಟ್ಟಣದ ಪುರಭವನದಲ್ಲಿ ರವಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೋಮಾರಿಗಳನ್ನಾಗಿಸುವ ಟಿ.ವಿ. ಮೊಬೈಲ್ ವೀಕ್ಷಣೆಯಿಂದ ಮಕ್ಕಳನ್ನು ದೂರ ಇಡಬೇಕು. ಮಕ್ಕಳನ್ನು ಶಿಕ್ಷಣಕ್ಕೆ ಸೀಮಿತಗೊಳಿಸದೇ ನಮ್ಮ ನಾಡಿನ ಶ್ರೀಮಂತ ಸಂಸ್ಕ್ರತಿಯ ತಿಳುವಳಿಕೆ ಮೂಡಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕೆ ಜಸಂತಾ ಅನಿಲ್‍ ಕುಮಾರ್ ಮಾತನಾಡಿ, ಮಕ್ಕಳ ಸುಪ್ತ ಸಾಂಸ್ಕ್ರತಿಕ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ. ಇಲ್ಲಿ ಹಬ್ಬದ ವಾತಾರವಣವನ್ನು ಕಾಣುತ್ತಿದ್ದೇನೆ. ತೀರ್ಪುಗಾರರು ಯಾವುದೇ ತಾರತಮ್ಯ ಮಾಡದೇ ನಿಷ್ಪಕ್ಷಪಾತ ತೀರ್ಪು ನೀಡುವ ಮೂಲಕ ನೈಜ ಪ್ರತಿಭೆಯನ್ನು ಹೊರತರುವ ಕೆಲಸ ಮಾಡಬೇಕು ಎಂದರು.

ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಂತಿ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ದಿವ್ಯ ದಿನೇಶ್, ಪಟ್ಟಣ ಪಂಚಾಯತ್ ಅಧ್ಯಕ್ಷೆ ಡಿ.ಪಿ. ಅನುಸೂಯ ಕೃಷ್ಣಮೂರ್ತಿ, ತಾಲೂಕು ಪಂ., ಪಟ್ಟಣ ಪಂ. ಸದಸ್ಯರು, ಬಿಇಒ ಕೆ. ಗಣಪತಿ, ಶಿಕ್ಷಕರ ವಿವಿಧ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಲೂಕಿನ 180ಕ್ಕೂ ಹೆಚ್ಚು ಶಾಲಾ ಕಾಲೇಜುಗಳ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದರು. ಎಲ್‍ಪಿಎಸ್ ವಿಭಾಗದಲ್ಲಿ 18, ಎಚ್‍ಪಿಎಸ್ ವಿಭಾಗದಲ್ಲಿ 19 ಮತ್ತು ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ 25 ಸ್ಪರ್ಧೆಗಳು ಒಳಗೊಂಡಂತೆ ಒಟ್ಟು 62 ವಿವಿಧ ಸ್ಪರ್ಧೆಗಳು ನಡೆದವು. ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾದವರ ವಿವರ ಈ ರೀತಿ ಇದೆ. 

ಎಲ್‍ಪಿಎಸ್ ವಿಭಾಗ: ಕನ್ನಡ ಕಂಠಪಾಟ-ನಿಖಿತ, ಇಂಗ್ಲೀಷ್ ಕಂಠಪಾಠ-ಎಸ್.ಎಸ್. ಧನ್ವಿತ್, ಉರ್ದು ಕಂಠಪಾಠ-ಅಲ್‍ಮಾಜ್, ಧಾರ್ಮಿಕ ಪಠಣ-ಫಾತಿಮಾ ಸುನೈನಾ, ಛದ್ಮವೇಷ-ಶರಣ್ಯ, ಅಭಿನಯಗೀತೆ-ಹಂಸ, ಕ್ಲೇ ಮಾಡೆಲಿಂಗ್-ರಮೇಶ್, ಚಿತ್ರಕಲೆ-ದಿಶಾ ಜಿ. ಶೆಟ್ಟಿ, ಭಕ್ತಿಗೀತೆ-ಬಿ.ಪಿ. ಸೌರಭ್, ಕಥೆ ಹೇಳುವುದು-ಶೀತಲ್ ಎಸ್. ಗೌಡ, ಆಶುಭಾಷಣ-ಎನ್.ಎಸ್. ಸಹನ, ಲಘು ಸಂಗೀತ-ಪ್ರಜ್ಞಾ, ದೇಶಭಕ್ತಿಗೀತೆ-ಸ್ಪಂದನ ಮತ್ತು ತಂಡ, ಕವ್ವಾಲಿ-ಬಿ.ಸಿ. ಸೌರಭ್ ಮತ್ತು ತಂಡ, ಜಾನಪದ ನೃತ್ಯ-ಶ್ರೇಯಸ್ ಮತ್ತು ತಂಡ, ಕೋಲಾಟ-ಅನನ್ಯ ಮತ್ತು ತಂಡ, ರಸಪ್ರಶ್ನೆ-ವಿದಾತ್ರಿ ಜಿ. ದೇವರಾಜ್.

ಎಚ್‍ಪಿಎಸ್ ವಿಭಾಗ: ಕನ್ನಡ ಕಂಠಪಾಟ-ಅನಘ, ಇಂಗ್ಲೀಷ್ ಕಂಠಪಾಠ-ಅನ್ಮೋಲ್ ಡಿಸೋಜ, ಹಿಂದಿ ಕಂಠಪಾಠ-ಸಾನಿಯಾ, ಉರ್ದು ಕಂಠಪಾಠ-ಆಲಿಯಾ ಕೌಸರ್, ಧಾರ್ಮಿಕ ಪಠಣ(ಸಂಸ್ಕ್ರತ)-ಎಸ್.ಎಸ್. ಯಜ್ಞೇಶ್ವರ್, ಧಾರ್ಮಿಕ ಪಠಣ(ಅರೇಬಿಕ್)-ಬಿ.ಎಸ್. ಹರ್ಷದ್, ಛದ್ಮವೇಷ-ಎಚ್.ವಿ. ವಿಕಾಸ್, ಅಭಿನಯಗೀತೆ-ಡಿ.ಕೆ. ವೈಭವಿ, ಕ್ಲೇ ಮಾಡೆಲಿಂಗ್-ಸನ್ವಿತ್, ಚಿತ್ರಕಲೆ-ಡಿ. ಮಯೂರ್, ಭಕ್ತಿಗೀತೆ-ಯಜ್ಞೇಶ್ವರ್, ಕಥೆ ಹೇಳುವುದು-ಆಶ್ರಿತ್, ಆಶುಭಾಷಣ-ಎಸ್.ಆರ್. ಅನಘ, ಲಘು ಸಂಗೀತ-ಕೆ.ಎಸ್. ಶ್ರಾವಣಿ, ದೇಶ ಭಕ್ತಿಗೀತೆ-ಆತ್ಮೀಯ, ಗೌರಿ ಮತ್ತು ತಂಡ, ಕವಾಲಿ-ನಿಕಿತಾ ಆರ್. ರಾವ್ ಮತ್ತು ತಂಡ, ಜಾನಪದ ನೃತ್ಯ-ಕೀರ್ತನ್ ಮತ್ತು ತಂಡ, ಕೋಲಾಟ-ಲೋಹಿತ್ ಮತ್ತು ತಂಡ, ರಸಪ್ರಶ್ನೆ-ತಿಲಕ್ ಮತ್ತು ತಂಡ.

ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜು ವಿಭಾಗ: ಕನ್ನಡ ಭಾಷಣ-ಎನ್.ವಿ. ಭಾರ್ಗವಿ, ಇಂಗ್ಲೀಷ್ ಭಾಷಣ-ಮಾನ್ಯಶ್ರೀ, ಹಿಂದಿ ಭಾಷಣ-ಕೆ.ಎಂ. ಸಮೃದ್ಧಿ, ಸಂಸ್ಕ್ರತ ಭಾಷಣ-ಬಿ.ಕೆ. ಕೃಪಾ, ಉರ್ದು ಭಾಷಣ-ರುಖೈರಾ, ತಮಿಳು ಭಾಷಣ-ಕೆ.ಎಸ್. ಶ್ರೇಯಾ, ತುಳು ಭಾಷಣ-ಬಿ.ಸಿ. ಸುಚಾಂಕ್ಷ, ಕೊಂಕಣಿ ಭಾಷಣ-ಶರಲ್ ಸ್ಟೇಪಿ ಫರ್ನಾಂಡೀಸ್, ಮರಾಠಿ ಭಾಷಣ-ವೈ.ಅದಿತ್ಯ, ಧಾರ್ಮಿಕ ಪಠಣ(ಸಂಸ್ಕ್ರತ)-ಎಚ್.ಆರ್. ಶರದಿ, ಧಾರ್ಮಿಕ ಪಠಣ(ಅರೇಬಿಕ್)-ರುಖಯಾಹುದಾ, ಜಾನಪದ ಗೀತೆ-ವಿ.ಪಿ. ಪೂಜಾ, ಭಾವಗೀತೆ-ಪೃಥ್ವಿ, ಭರತನಾಟ್ಯ-ಚಂದನ, ಛದ್ಮವೇಷ-ಚಿತ್ರಪೂರ್ಣಿಮಾ, ಆಶುಭಾಷಣ-ಎಚ್.ಎಸ್. ತೇಜಸ್, ಮಿಮಿಕ್ರಿ-ಜಿ.ಆರ್. ರಾಜಿತ್, ಚರ್ಚಾಸ್ಪರ್ಧೆ-ರೇಷ್ಮಾ, ರಂಗೋಲಿ-ಎಸ್.ಎಸ್. ಸಾನ್ವಿ, ಗಝಲ್-ಪ್ರಥ್ವಿ, ನೃತ್ಯ-ಎಚ್.ಕೆ. ಸ್ವಾತಿ ಮತ್ತು ತಂಡ, ಸಂಗೀತ-ಬಿ.ಎಸ್. ಕಿರಣ್ ಕುಮಾರ್, ನಾಟಕ-ಸ.ಪ್ರೌಢಶಾಲೆ ಭಂಡಿಗಡಿ, ದೃಶ್ಯಕಲೆ-ಶಮಿತಾ ಮತ್ತು ತಂಡ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X