ಬ್ಯಾಗ್ ಗಳಲ್ಲಿ ಪತ್ತೆಯಾದದ್ದು ನವಜಾತ ಶಿಶುಗಳ ಮೃತದೇಹಗಳಲ್ಲ, ವೈದ್ಯಕೀಯ ತ್ಯಾಜ್ಯ
ವೈದ್ಯರಿಂದ ಸ್ಪಷ್ಟನೆ

ಕೊಲ್ಕತ್ತಾ, ಸೆ.2: ಸ್ವಚ್ಛತಾ ಕಾರ್ಯಕ್ರಮವೊಂದರ ಸಂದರ್ಭ ಇಲ್ಲಿ ಸಿಕ್ಕಿರುವುದು ನವಜಾತ ಶಿಶುಗಳ ಮೃತದೇಹಗಳಲ್ಲ, ಬದಲಾಗಿ ವೈದ್ಯಕೀಯ ತ್ಯಾಜ್ಯ ಎಂದು ಇಲ್ಲಿನ ವೈದ್ಯರುಗಳು ಸ್ಪಷ್ಟಪಡಿಸಿದ್ದಾರೆ.
ಸ್ವಚ್ಛತಾ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರಿಗೆ 14 ನವಜಾತ ಶಿಶುಗಳ ಮೃತದೇಹ ಸಿಕ್ಕಿದೆ ಎನ್ನುವ ಸುದ್ದಿ ರಾಷ್ಟ್ರಾದ್ಯಂತ ಸದ್ದು ಮಾಡಿತ್ತು. “ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ ಸುತ್ತಿದ್ದ 14 ಮೃತದೇಹಗಳು ಲಭಿಸಿವೆ” ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಕೊಲ್ಕತ್ತಾ ಮೇಯರ್ ಸೋವನ್ ಚಟರ್ಜಿ ಹೇಳಿದ್ದರು.
ಗರ್ಭಪಾತದ ಜಾಲವೊಂದು ಕಾರ್ಯ ನಿರ್ವಹಿಸುತ್ತಿರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಶಂಕಿಸಿದ್ದರು. ಪ್ಯಾಕೆಟ್ ಗಳನ್ನು ತೆರೆಯದೆ ಪೊಲೀಸರು ಎಂ.ಆರ್. ಬಾಂಗುರ್ ಆಸ್ಪತ್ರೆಗೆ ಅದನ್ನು ಕಳುಹಿಸಿದ್ದರು. ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ ಲಭಿಸಿರುವುದು ಮೆಡಿಕಲ್ ವೇಸ್ಟ್ ಅಥವಾ ವೈದ್ಯಕೀಯ ತ್ಯಾಜ್ಯ ಎಂದು ಸ್ಪಷ್ಟಪಡಿಸಿದ್ದಾರೆ.
Next Story





