ಕ್ಲೀವ್ಲ್ಯಾಂಡ್ ನೈಟ್ಕ್ಲಬ್ನಲ್ಲಿ ಗುಂಡು ಹಾರಾಟ: 1 ಸಾವು
ಕ್ಲೀವ್ಲ್ಯಾಂಡ್, ಸೆ. 2: ಅಮೆರಿಕದ ಕ್ಲೀವ್ಲ್ಯಾಂಡ್ನ ನೈಟ್ಕ್ಲಬ್ ಒಂದರಲ್ಲಿ ಶನಿವಾರ ನಡೆದ ಗಂಡು ಹಾರಾಟದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ ಹಾಗೂ ಏಳು ಮಂದಿ ಗಾಯಗೊಂಡಿದ್ದಾರೆ.
ಶನಿವಾರ ಮುಂಜಾನೆ ಸುಮಾರು ಒಂದು ಗಂಟೆಗೆ ಕ್ಲಬ್ಗೆ ಹೋದ ಪೊಲೀಸರು ಬಾರ್ನ ಹಿಂಭಾಗದಲ್ಲಿ ಬಿದ್ದಿದ್ದ ಮಹಿಳೆಯನ್ನು ಕಂಡರು. ಅವರ ತಲೆಯಲ್ಲಿ ಗುಂಡಿನ ಗಾಯವಿತ್ತು. ಬಳಿಕ ಆ ಮಹಿಳೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಕ್ಲೀವ್ಲ್ಯಾಂಡ್ ಪೊಲೀಸ್ ವಕ್ತಾರರು ತಿಳಿಸಿದರು.
ಕ್ಲಬ್ನ ಒಳಗಡೆ ಆರಂಭಗೊಂಡ ಜಗಳವು ಗುಂಡು ಹಾರಾಟದಲ್ಲಿ ಕೊನೆಗೊಂಡಿತು. ಗಾಯಗೊಂಡ 7 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Next Story