ಪತ್ರಕರ್ತರ ಸಹಕಾರ ಸಂಘದ ನಿರ್ದೇಶಕರಾಗಿ ಕೆ.ರಾಘವೇಂದ್ರ ಆಯ್ಕೆ

ಬೆಂಗಳೂರು, ಸೆ. 2: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ರವಿವಾರ ನಡೆದ ಚುನಾವಣೆಯಲ್ಲಿ ಕೆ.ರಾಘವೇಂದ್ರ, ಶಿವಮಾರ್ ಎಂ.ಡಿ. (ಬೆಳ್ಳಿತಟ್ಟೆ), ಎ.ಎಂ.ಸುರೇಶ್, ಯತಿರಾಜು, ಶಿವಣ್ಣ, ಸಚ್ಚಿದಾನಂದ ಕುರುಗುಂದ, ಮೋಹನ್‌ಕುಮಾರ್ ಸೇರಿದಂತೆ ಒಟ್ಟು 13 ಮಂದಿ ಆಯ್ಕೆಯಾಗಿದ್ದಾರೆ.
ರಾಜೇಂದ್ರ ಕುಮಾರ್(ಎಸ್ಸಿ), ಎಚ್.ಅನಿತಾ(ಎಸ್ಟಿ), ಮುಂಜಾನೆ ಸತ್ಯ(ಒಬಿಸಿ), ಎಸ್.ಲಕ್ಷ್ಮಿನಾರಾಯಣ(ಒಬಿಸಿ) ಸುಮನಾ ಲಕ್ಷ್ಮೀಶ ಹಾಗೂ ವನಿತಾ(ಮಹಿಳಾ ಮೀಸಲು) ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಕಟಿಸಿದ್ದಾರೆ.
Next Story





