Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ತಾಳಿಕೋಟೆಯ ಕದನದಲ್ಲಿ-ಮನಸ್ಸಿನ ತಾಕಲಾಟ

ತಾಳಿಕೋಟೆಯ ಕದನದಲ್ಲಿ-ಮನಸ್ಸಿನ ತಾಕಲಾಟ

ಈ ಹೊತ್ತಿನ ಹೊತ್ತಿಗೆ

ವಾರ್ತಾಭಾರತಿವಾರ್ತಾಭಾರತಿ3 Sept 2018 12:03 AM IST
share
ತಾಳಿಕೋಟೆಯ ಕದನದಲ್ಲಿ-ಮನಸ್ಸಿನ ತಾಕಲಾಟ

ಕನ್ನಡದಲ್ಲಿ ಜನಪ್ರಿಯ ಕಾದಂಬರಿಗಳ ಕೊರತೆಯನ್ನು ನೀಗಿಸುವ ಪ್ರಯತ್ನವನ್ನು ‘ತಾಳಿಕೋಟೆಯ ಕದನದಲ್ಲಿ’ ಕೃತಿಯ ಮೂಲಕ ಕಾದಂಬರಿಕಾರ ವಿಠಲ್ ಶೆಣೈ ಮಾಡುತ್ತಾರೆ. ಮನಶ್ಶಾಸ್ತ್ರೀಯ ಹಿನ್ನೆಲೆಯಿಂದ ರೂಪುಗೊಂಡಿರುವ ಕಥಾವಸ್ತುವನ್ನು ಈ ಕಾದಂಬರಿ ಒಳಗೊಂಡಿದೆ. ಸಾಧಾರಣವಾಗಿ ಮನಶ್ಶಾಸ್ತ್ರೀಯ ಹಿನ್ನೆಲೆಯಿರುವ ಸಿನೆಮಾಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಸ್ಕಿಜೋಫ್ರೇನಿಯ, ಅಲ್‌ಝೈಮರ್‌ನಂತಹ ಕಾಯಿಲೆಗಳನ್ನು ಇಟ್ಟುಕೊಂಡು ಥ್ರಿಲ್ಲರ್ ಸಿನೆಮಾಗಳು ಹಲವು ಬಂದಿವೆ. ಸಿನೆಮಾಗಳಲ್ಲಿ ಮಾನಶ್ಶಾಸ್ತ್ರೀಯ ವಿಷಯಗಳನ್ನು ಅತ್ಯಂತ ಸರಳೀಕರಣಗೊಳಿಸಲಾಗುತ್ತದೆ. ಕತೆಗೆ ಪೂರಕವಾಗಿ ಅದು ತೀರಾ ನಾಟಕೀಯವಾಗಿಯೂ ಇರುತ್ತದೆ. ವಾಸ್ತವದಲ್ಲಿ ಮನಶ್ಶಾಸ್ತ್ರೀಯ ವಿಷಯಗಳು ಅಷ್ಟು ಸರಳವಾಗಿರುವುದಿಲ್ಲ.

 ಇಲ್ಲಿ ಕಾದಂಬರಿಕಾರರು ತಮ್ಮ ಕತೆಯನ್ನು ಹೇಳಲು ಎರಡು ತಂತ್ರಗಳನ್ನು ಬಳಸಿಕೊಂಡಿದ್ದಾರೆ. ಒಂದು ಇತಿಹಾಸ. ಇನ್ನೊಂದು ವಾಸ್ತವ. ಕಾದಂಬರಿಯ ಮುನ್ನುಡಿಯಲ್ಲಿ ಹೇಳುವಂತೆ , ಮಾನವನ ಚರಿತ್ರೆಗೂ ಆತನ ಮೆದುಳಿಗೂ ನೇರ ಸಂಬಂಧವಿದೆ. ಚರಿತ್ರೆಯಷ್ಟೇ ಅವನ ಮೆದುಳು, ಮನಸ್ಸು, ಸಂಕೀರ್ಣವಾದದ್ದು, ಕೌತುಕವಾದದ್ದು. ಸೂಕ್ಷ್ಮವಾದದ್ದು. ಇದು ಕದಡಿದಾಗ ವರ್ತಮಾನವೂ ಕದಡತೊಡಗುತ್ತದೆ. ಇಲ್ಲಿ ಕಾದಂಬರಿಕಾರನನ್ನು ಸೆಳೆದಿರುವುದು ಹಂಪಿಯ ಇತಿಹಾಸ. ವಿಜಯನಗರದ ಕಾಲಘಟ್ಟ ಕಾದಂಬರಿಕಾರನನ್ನು ರೋಮಾಂಚನಗೊಳಿಸಿದೆ. ಕಾದಂಬರಿಕಾರರು, ತಾಳಿಕೋಟೆ ಕದನದ ಇತಿಹಾಸವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿದ್ದಾರೆ. ಸಾಧಾರಣವಾಗಿ, ಜನಪ್ರಿಯ ದಾಟಿಯಲ್ಲಿ ಇಂದು ತಾಳಿಕೋಟೆ ಕದನವನ್ನು ವೈಭವೀಕರಿಸಿದಂತೆಯೇ ಲೇಖಕರೂ ವೈಭವೀಕರಿಸುತ್ತಾರೆ. ಸಂತೆಯಲ್ಲಿ ವಜ್ರ ವೈಢೂರ್ಯಗಳನ್ನು ಮಾರುವ ಇತಿಹಾಸ ಲೇಖಕರನ್ನೂ ರೋಮಾಂಚನಗೊಳಿಸಿದೆ. ಈ ನಿಟ್ಟಿನಲ್ಲಿ, ಇತಿಹಾಸ ಮತ್ತು ವಾಸ್ತವಗಳೆರಡನ್ನೂ ಜೊತೆಗಿಟ್ಟು ಬರೆದಿದ್ದಾರೆ.
ಸ್ಕಿಜೋಫ್ರೀನಿಯಾದಿಂದ ನರಳುವ ಕಥಾನಾಯಕನ ಕಾಯಿಲೆಯನ್ನು ಹೋಗಲಾಡಿಸಲು ವಿಜಯನಗರದ ಚರಿತ್ರೆಯ ತುಣುಕುಗಳನ್ನು, ಪಾತ್ರಗಳನ್ನು ವಾಸ್ತವಕ್ಕೆ ತರಲು ಲೇಖಕರು ಪ್ರಯತ್ನಿಸಿರುವುದು ಒಂದು ವಿಭಿನ್ನ ಪ್ರಯತ್ನವೇ ಸರಿ. ಆದರೆ, ಮನಶ್ಶಾಸ್ತ್ರವನ್ನು ಸಿನಿಮೀಯ ದಾಟಿಯಲ್ಲಿ ಅರ್ಥೈಸಿಕೊಂಡು ಅವರು ಕಾಯಿಲೆಯನ್ನು ಚರ್ಚಿಸಿದ್ದಾರೆ. ಇತಿಹಾಸ ಮತ್ತು ವರ್ತಮಾನಗಳ ನಡುವೆ ತಾಕಲಾಟಗಳನ್ನು ಈ ಕಾದಂಬರಿಯಲ್ಲಿ ಕಾಣಬಹುದು. ಇತಿಹಾಸವನ್ನು ಹಿನ್ನೆಲೆಯಾಗಿಟ್ಟುಕೊಂಡು ಬರೆದ ಒಂದು ಮನಶ್ಶಾಸ್ತ್ರೀಯ ಕಾದಂಬರಿ ಎಂದು ಸರಳವಾಗಿ ಇದನ್ನು ಗುರುತಿಸಬಹುದು. ಇತಿಹಾಸವನ್ನು ರಂಜನಾತ್ಮಕವಾಗಿ ಸ್ವೀಕರಿಸುವರಿಗೆ ಈ ಕಾದಂಬರಿ ಇಷ್ಟವಾಗಬಹುದು.
ಟೋಟಲ್ ಕನ್ನಡ, ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. 160 ಪುಟಗಳ ಈ ಕಾದಂಬರಿಯ ಮುಖಬೆಲೆ 150 ರೂಪಾಯಿ. ಆಸಕ್ತರು 98459 04451 ದೂರವಾಣಿಯನ್ನು ಸಂಪರ್ಕಿಸಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X