3 ಮಹಾನಗರ ಪಾಲಿಕೆಗಳ ಪೈಕಿ 2ರಲ್ಲಿ ಅತಂತ್ರ, 1 ಬಿಜೆಪಿ ತೆಕ್ಕೆಗೆ
105 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟ
ಬೆಂಗಳೂರು, ಸೆ.3: ರಾಜ್ಯದಲ್ಲಿ ನಡೆದಿರುವ 105 ನಗರ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, 3 ಮಹಾನಗರ ಪಾಲಿಕೆಗಳ ಪೈಕಿ ಶಿವಮೊಗ್ಗದಲ್ಲಿ ಬಿಜೆಪಿ ಬಹುಮತ ಗಳಿಸಿದೆ. ಮೈಸೂರು ಮತ್ತು ತುಮಕೂರು ಮಹಾನಗರಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತವಿಲ್ಲದೆ ಅತಂತ್ರ ಫಲಿತಾಂಶ ದಾಖಲಾಗಿವೆ.
20 ಪಟ್ಟಣ ಪಂಚಾಯತುಗಳ ಫೈಕಿ 7ರಲ್ಲಿ ಕಾಂಗ್ರೆಸ್, 7ರಲ್ಲಿ ಬಿಜೆಪಿ, 2ರಲ್ಲಿ ಜೆಡಿಎಸ್ ಬಹುಮತ ಗಳಿಸಿದೆ. 4ರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
29 ನಗರಸಭೆಗಳಲ್ಲಿ ಬಿಜೆಪಿ 10ರಲ್ಲಿ, ಕಾಂಗ್ರೆಸ್ 5 , ಜೆಡಿಎಸ್ 3ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಿದೆ.11ರಲ್ಲಿ ಅತಂತ್ರ ಫಲಿತಾಂಶ ಬಂದಿದೆ.
53 ಪುರಸಭೆಗಳ ಪೈಕಿ 19 ಕಾಂಗ್ರೆಸ್ ಮಡಿಲಿಗೆ ಜಾರಿವೆ. 12ರಲ್ಲಿ ಬಿಜೆಪಿ, 8ರಲ್ಲಿ ಬಿಜೆಪಿ ಬಹುಮತ ಗಳಿಸಿವೆ. 14ಪುರಸಭೆಗಳಲ್ಲಿ ಅತಂತ್ರ ಫಲಿತಾಂಶ ದಾಖಲಾಗಿವೆ
ವಿವಿಧ ಪಕ್ಷಗಳ ತೆಕ್ಕೆಗೆ ಜಾರಿದ ಸ್ಥಳೀಯಾಡಳಿತ ಸಂಸ್ಥೆಗೆಳು
ಸ್ಥಳೀಯಾಡಳಿತ ಸಂಸ್ಥೆಗಳು ಒಟ್ಟು ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಅತಂತ್ರ
ಮಹಾನಗರಪಾಲಿಕೆ 3 0 1 0 2
ಪಟ್ಟಣ ಪಂಚಾಯತು 20 7 7 2 4
ನಗರಸಭೆ 29 5 10 3 11
ಪುರಸಭೆ 53 19 12 8 14
,,,,,,,,,,,,,,,,,,,,,,,
ವಿವಿಧ ಪಕ್ಷಗಳು ಗಳಿಸಿದ ಸ್ಥಾನಗಳು
ಒಟ್ಟು ಸ್ಥಾನಗಳು ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪಕ್ಷೇತರ
ಮಹಾನಗರಪಾಲಿಕೆ 135 36 54 30 15
ಪಟ್ಟಣ ಪಂಚಾಯತು 358 141 129 29 59
ನಗರಸಭೆ 926 294 355 107 170
ಪುರಸಭೆ 1247 532 389 211 115