Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕುಂದಾಪುರ ಪುರಸಭೆಯಲ್ಲಿ ಬಿಜೆಪಿಗೆ ಬಹುಮತ

ಕುಂದಾಪುರ ಪುರಸಭೆಯಲ್ಲಿ ಬಿಜೆಪಿಗೆ ಬಹುಮತ

ವಾರ್ತಾಭಾರತಿವಾರ್ತಾಭಾರತಿ3 Sept 2018 6:58 PM IST
share

ಕುಂದಾಪುರ, ಸೆ.3: ಕುಂದಾಪುರ ಪುರಸಭೆಯ 23 ಸ್ಥಾನಗಳ ಪೈಕಿ 14 ಸ್ಥಾನಗಳಲ್ಲಿ ಬಿಜೆಪಿ ಜಯಬೇರಿ ಬಾರಿಸುವ ಮೂಲಕ ಸ್ಪಷ್ಟ ಬಹುಮದೊಂದಿಗೆ ಅಧಿಕಾರ ಗದ್ದುಗೆಗೇರಿದೆ.

23 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎಲ್ಲ 23 ಸ್ಥಾನಗಳಿಗೂ, ಸಿಪಿಎಂ ಏಳು, ಜೆಡಿಎಸ್ 3 ಹಾಗೂ ಬಿಎಸ್‌ಪಿ 2 ಹಾಗೂ ಎಂಟು ಸ್ಥಾನಗಳಲ್ಲಿ 10 ಮಂದಿ ಪಕ್ಷೇತರರು ಸ್ಪರ್ಧಿಸಿದ್ದು, ಇದರಲ್ಲಿ ಬಿಜೆಪಿ 14, ಕಾಂಗ್ರೆಸ್ 8, ಒಬ್ಬರು ಪಕ್ಷೇತರ ಅ್ಯರ್ಥಿ ಜಯ ಗಳಿಸಿದ್ದಾರೆ. 2014ರ ಚುನಾವಣೆಯಲ್ಲಿ ಬಿಜೆಪಿ(ಜಯಪ್ರಕಾಶ್ ಹೆಗ್ಡೆ ಬಣ ಸೇರಿ) 12, ಕಾಂಗ್ರೆಸ್ 9 ಹಾಗೂ ಸಿಪಿಎಂ 2 ಸ್ಥಾನಗಳನ್ನು ಹೊಂದಿತ್ತು.

ಬಾರೀ ಕುತೂಹಲ ಮೂಡಿಸಿದ್ದ ಸೆಂಟ್ರಲ್ ವಾರ್ಡಿನಲ್ಲಿ ಬಿಜೆಪಿಯ ಹಿರಿಯ ಧುರೀಣ ಮೋಹನ್‌ದಾಸ್ ಶೆಣೈ ದಾಖಲೆಯ ಸತತ 5ನೇ ಬಾರಿಗೆ ಜಯ ಗಳಿಸಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿ ರಾಜೇಶ್ ಕಾವೇರಿ(216 ಮತ) ಪಕ್ಷೇತರರಾಗಿ ಸ್ಪರ್ಧಿಸಿ ಮೋಹನ್‌ದಾಸ್ ಶೆಣೈ(236) ವಿರುದ್ಧ 20 ಮತಗಳ ಅಂತರದಿಂದ ಸೋಲು ಅನುಭವಿಸಿದರು. ಕಾಂಗ್ರೆಸ್‌ನ ಶಿವಕುಮಾರ್ 138 ಮತಗಳನ್ನು ಪಡೆದರು.

ಕಳೆದ ಬಾರಿ ಎರಡು ಸ್ಥಾನಗಳಲ್ಲಿ ಗೆದ್ದುಕೊಂಡಿದ್ದ ಸಿಪಿಎಂ ಪಕ್ಷ ಈ ಬಾರಿ ಎಲ್ಲ ಸ್ಪರ್ಧಿಸಿದ್ದ ಏಳು ಸ್ಥಾನಗಳಲ್ಲಿಯೂ ಸೋಲು ಕಂಡಿದೆ. 1996ರಲ್ಲಿ ಕುಂದಾ ಪುರ ಸಭೆಯ 9 ಸ್ಥಾನಗಳಲ್ಲಿ ಜಯ ಸಾಧಿಸಿದ್ದ ಸಿಪಿಎಂ ಪಕ್ಷವು ಆಗಿನ ಜನತಾ ಪಕ್ಷದೊಂದಿಗೆ ಸೇರಿ ಅಧಿಕಾರ ನಡೆಸಿತ್ತು. ಕಳೆದ ಬಾರಿ ಮೀಸಲಾತಿಯಿಂದ ಸಿಪಿಎಂನ ಕಲಾವತಿ ಎರಡೂವರೆ ವರ್ಷಗಳ ಕಾಲ ಅಧ್ಯಕ್ಷರಾಗಿ ಆಯ್ಕೆಯಾಗಿ ದ್ದರು.

ಕುಂದಾಪುರ ಪುರಸಭೆಯ ಫಲಿತಾಂಶ

1.ಫೆರ್ರಿ ವಾರ್ಡ್: ಅಬ್ಬು ಮಹಮ್ಮದ್(ಕಾಂಗ್ರೆಸ್)-415, ಕೆ.ಪುಷ್ಪಾ ಶೇಟ್ (ಬಿಜೆಪಿ)- 235, 2.ಮದ್ದುಗುಡ್ಡೆ ವಾರ್ಡ್: ರಾಘವೇಂದ್ರ ಖಾರ್ವಿ(ಬಿ)- 354, ಸತೀಶ್ ಮೇಸ್ತ(ಪಕ್ಷೇತರ)-202, 3.ಈಸ್ಟ್‌ಬ್ಲಾಕ್ ವಾರ್ಡ್: ಪ್ರಭಾವತಿ ಜೆ.ಶೆಟ್ಟಿ(ಕಾ)-413, ಸುಜಾತಾ ಶೆಟ್ಟಿ(ಬಿ)-386, 4. ಖಾರ್ವಿಕೇರಿ ವಾರ್ಡ್: ಚಂದ್ರಶೇಖರ್ ಖಾರ್ವಿ(ಕಾ)- 443, ವಸಂತಿ ಮೋಹನ ಸಾರಂಗ(ಬಿ) -208, 5.ಬಹದ್ದೂರ್‌ಶಾ ವಾರ್ಡ್: ಸಂದೀಪ ಖಾರ್ವಿ(ಬಿ)- 385, ಸದಾನಂದ ಖಾರ್ವಿ(ಕಾ)-178, 6.ಚಿಕ್ಕನ್‌ಸಾಲ್ ವಾರ್ಡ್: ಸಂತೋಷ್ ಶೆಟ್ಟಿ(ಬಿ)- 392, ಜಾಕೋಬ್ ಡಿಸೋಜ(ಕಾ)-311, 7.ಮೀನು ಮಾರುಕಟ್ಟೆ ವಾರ್ಡ್: ಶ್ರೀಧರ ಶೇರೆಗಾರ್(ಕಾ)-421, ನಾಗರಾಜ ಕಾಮಧೇನು(ಬಿ)- 412, 8. ಚಿಕ್ಕನ್‌ಸಾಲ್ ಬಲಬದಿ ವಾರ್ಡ್: ಕೆ.ಜಿ.ನಿತ್ಯಾನಂದ(ಕಾ)-424, ದಿವಾಕರ ಪೂಜಾರಿ ಕಡ್ಗಿ(ಬಿ)-406, 9.ಸರಕಾರಿ ಆಸ್ಪತ್ರೆ ವಾರ್ಡ್: ಪಿ.ದೇವಕಿ ಸಣ್ಣಯ್ಯ(ಕಾ)- 294, ಧನಲಕ್ಷ್ಮೀ ಪ್ರಕಾಶ್(ಬಿ)-261, 10.ಚರ್ಚ್ ರೋಡ್ ವಾರ್ಡ್: ಪ್ರಭಾಕರ(ಬಿ)-389, ಗಣೇಶ್(ಕಾ)-196, 11.ಸೆಂಟ್ರಲ್ ವಾರ್ಡ್: ಕೆ.ಮೋಹನದಾಸ ಶೆಣೈ(ಬಿ)-236, ರಾಜೇಶ್ ಕಾವೇರಿ (ಪಕ್ಷೇತರ) -216, ಕೆ.ಶಿವಕುಮಾರ್(ಕಾ)-138, 12.ವೆಸ್ಟ್‌ಬ್ಲಾಕ್ ವಾರ್ಡ್: ಅಶ್ವಿನಿ ಪ್ರದೀಪ್(ಬಿ)-364, ಸುಜಾತಾ ಶೇರೆಗಾರ್(ಕಾ)-305, 13.ಮಂಗಳೂರು ಟೈಲ್ಸ್ ಫ್ಯಾಕ್ಟರಿ ವಾರ್ಡ್: ಶ್ವೇತಾ ಸಂತೋಷ್(ಬಿ)-373, ಮಾಣಿ ಪ್ರಮೀಳಾ (ಸಿಪಿಎಂ)-244, ಕೋಡಿ ದಕ್ಷಿಣ ವಾರ್ಡ್: ಅಶ್ಪಕ್(ಕಾ)-398, ಮಹಮ್ಮದ್ ರಿಯಾಜ್ ಸಾಹೇಬ್(ಪಕ್ಷೇತರ)-297, ಜ್ಯೋತಿ ಗಣೇಶ್ ಮೊಗವೀರ (ಬಿ)- 55, 15.ಕೋಡಿ ಮಧ್ಯ ವಾರ್ಡ್: ಕಮಲ ಮಂಜುನಾಥ್ ಪೂಜಾರಿ(ಪ)- 334, ಪುಷ್ಪಾಮೊಗವೀರ(ಕಾ)-279, ಸಂಗೀತಾ ಅಶೋಕ್ ಪೂಜಾರಿ(ಬಿ)- 232, 16.ಕೋಡಿ ಉತ್ತರ ವಾರ್ಡ್: ಲಕ್ಷ್ಮೀಬಾಯಿ(ಕಾ)-398, ಗುಣರತ್ನಾ (ಬಿ)-281, 17.ಟಿಟಿ ವಾರ್ಡ್: ವೀಣಾ ಭಾಸ್ಕರ ಮೆಂಡನ್(ಬಿ)-443, ರವಿಕಲಾ ಗಣೇಶ್ ಶೇರೆಗಾರ್(ಕಾ)-315, ಶೈಲೆಟ್ ಡಿಸೋಜ(ಜೆಡಿಎಸ್) -97, 18.ನಾನಾ ಸಾಹೇಬ್ ವಾರ್ಡ್: ರೋಹಿಣಿ ಉದಯ ಕುಮಾರ್(ಬಿ) -431, ಲಲಿತಾ ಎಸ್.(ಸಿಪಿಎಂ)-146, ಜ್ಯೋತಿ ಡಿ.ನಾಯ್ಕ (ಕಾ)-104, 19.ಜೆಎಲ್‌ಬಿ ವಾರ್ಡ್: ವಿ.ಶ್ರೀಕಾಂತ(ಬಿ)-439, ವಿ.ಎಂ.ನಾರಾಯಣ (ಸಿಪಿಎಂ)-290, ಲಕ್ಷ್ಮೀಕಾಂತ(ಕಾ)-38, ರಮೇಶ್(ಜೆಡಿಎಸ್)-36, 20. ಕುಂದೇಶ್ವರ ವಾರ್ಡ್: ಗಿರೀಶ್ ದೇವಾಡಿಗ(ಬಿ)-436, ಎಚ್.ನರಸಿಂಹ (ಸಿಪಿಎಂ)-179, ಅರುಣ್ ಶೇಟ್(ಕಾ)-28, 21.ಹುಂಚಾರುಬೆಟ್ಟು ವಾರ್ಡ್: ಶೇಖರ ಪೂಜಾರಿ(ಬಿ)-422, ಮಂಜುನಾಥ ಶೋಗನ್ (ಸಿಪಿಎಂ) -249, ವಿಶ್ವನಾಥ ಪೂಜಾರಿ(ಕಾ)-240, 22.ಶಾಂತಿನಿಕೇತನ ವಾರ್ಡ್: ವನಿತಾ ಎಸ್.ಬಿಲ್ಲವ(ಬಿ)-362, ಉಷಾ ಗಣೇಶ್ ಪೂಜಾರಿ(ಸಿಪಿಎಂ) -321, ಗೌರಿ ದೇವಾಡಿಗ(ಕಾ)-118, ಕಲ್ಲಾಗರ ವಾರ್ಡ್: ಪ್ರೇಮಲತಾ ರಮೇಶ್ ಪೂಜಾರಿ(ಬಿ)-327, ಆರತಿ(ಸಿಪಿಎಂ)-268.

ಪಕ್ಷೇತರ ಅ್ಯರ್ಥಿಗೆ ಗೆಲುವು
ಕೋಡಿ ಮಧ್ಯ ವಾರ್ಡ್‌ನಿಂದ ಪಕ್ಷೇತರ ಅ್ಯರ್ಥಿಯಾಗಿ ಸ್ಪರ್ಧಿಸಿದ್ದ್ದ ಕಮಲ ಮಂಜುನಾಥ ಪೂಜಾರಿ ಜಯ ಗಳಿಸುವ ಮೂಲಕ ಕುಂದಾಪುರ ಪುರಸಭೆಯಲ್ಲಿ ಮೊದಲ ಬಾರಿಗೆ ಪಕ್ಷೇತರ ಅ್ಯರ್ಥಿಯೊಬ್ಬರು ಗೆಲುವು ಸಾಧಿಸಿದಂತಾಗಿದೆ. ಇವರು ಬಿಜೆಪಿಯಲ್ಲಿ ಟಿಕೆಟು ಸಿಗದ ಾರಣ ಪಕ್ಷೇತರರಾಗಿ ಸ್ಪರ್ಧಿಸಿದ್ದರು.
  ಈ ಬಾರಿಯ ಚುನಾವಣೆ ಸಂದರ್ಭ ಸಿಪಿಎಂ ಪಕ್ಷವನ್ನು ತ್ಯಜಿಸಿ ಬಿಜೆಪಿ ಪಕ್ಷದಿಂದ ಕೋಡಿ ಉತ್ತರ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದ ಮಾಜಿ ಪುರಸಭೆ ಅಧ್ಯಕ್ಷೆ ಗುಣರತ್ನ ಕಾಂಗ್ರೆಸ್‌ನ ಲಕ್ಷ್ಮೀಬಾಯಿ ವಿರುದ್ಧ 117 ಮತಗಳ ಅಂತರದಲ್ಲಿ ಪರಾಜಿತರಾದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X