ನಾಳೆ ಪಾಕ್ ಅಧ್ಯಕ್ಷೀಯ ಚುನಾವಣೆ: ಪಿಟಿಐ ಬೆಂಬಲಿತ ಅಭ್ಯರ್ಥಿ ಫಝಲುರ್ರಹ್ಮಾನ್ ಗೆಲುವಿನ ಸಾಧ್ಯತೆ ನಿಚ್ಚಳ

ಇಸ್ಲಾಮಾಬಾದ್,ಸೆ3: ಪಾಕಿಸ್ತಾನದ ಅಧ್ಯಕ್ಷೀಯ ಚುನಾವಣೆಯು ಮಂಗಳವಾರ ನಡೆಯಲಿದೆ. ಪಾಕಿಸ್ತಾನದ ವಿವಿಧ ಶಾಸನಸಭೆಗಳ ಸದಸ್ಯರು ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ. ಪ್ರತಿಪಕ್ಷಗಳು ಜಂಟಿಯಾಗಿ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಲು ವಿಫಲರಾಗಿರುವುದರಿಂದ ಆಡಳಿತಾರೂಢ ಪಾಕಿಸ್ತಾನ್ ತೆೆಹ್ರಿಕೆ ಇನ್ಸಾಫ್ (ಪಿಟಿಐ)ನ ಅಭ್ಯರ್ಥಿ ಅರೀಫ್ ಅವಿ, ಚುನಾವಣೆಯಲ್ಲಿ ಗೆಲುವು ಸಾಧ್ಯತೆಗಳು ದಟ್ಟವಾಗಿವೆ.
ಪಾಕಿಸ್ತಾನದ ಚುನಾವಣಾ ಆಯೋಗವು, ಚುನಾವಣೆಗೆ ಬೇಕಾದ ಎಲ್ಲಾ ಸಿದ್ಥತೆಗಳನ್ನು ಪೂರ್ಣಗೊಳಿಸಿದೆ. ಪಾಕಿಸ್ತಾನದ ಸಂಸತ್ ಆಗಿರುವ ರಾಷ್ಟ್ರೀಯ ಅಸೆಂಬ್ಲಿಯ ಜೊತೆಗೆ ದೇಶದ ನಾಲ್ಕು ಪ್ರಾಂತೀಯ ಅಸೆಂಬ್ಲಿಗಳ ಸದಸ್ಯರು ರಾಷ್ಟ್ರಾಧ್ಯಕ್ಷರ ಆಯ್ಕೆಗಾಗಿ ಮತಚಲಾಯಿಸಲಿದ್ದಾರೆ.
ಪಾಕಿಸ್ತಾನದ ನಿರ್ಗಮನ ಅಧ್ಯಕ್ಷ ಸರ್ದಾರ್ ರಝಾ ಖಾನ್ ಅವರ ಅಧಿಕಾರಾವಧಿ ಸೆಪ್ಟೆಂಬರ್ 8ಕ್ಕೆ ಮುಕ್ತಾಯಗೊಳ್ಳಲಿದೆ. ಎರಡನೆ ಬಾರಿಗೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಅವರು ನಿರಾಕರಿಸಿದ್ದರು. ಆಡಳಿತಾರೂಢ ಪಿಟಿಐನ ಆರೀಫ್ ಅಲ್ವಿ, ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಚೌಧರಿ ಐತಾಝ್ ಅಹ್ಸಾನ್ ಹಾಗೂ ಜಮಾತೆ ಉಲೇಮಾದ ವರಿಷ್ಠ ಮೌಲಾನಾ ಫಝಲುರ್ರಹ್ಮಾನ್ ಕಣದಲ್ಲಿದ್ದಾರೆ. ಫಝಲುರ್ರಹ್ಮಾನ್ ವೃತ್ತಿಯಲ್ಲಿ ದಂತವೈದ್ಯರಾಗಿದ್ದು, ರಾಜಕಾರಣಕ್ಕೆ ಧುಮುಕಿರುವ ಅಲ್ವಿ ಪ್ರಧಾನಿ ಇಮ್ರಾನ್ ಖಾನ್ ಅವರ ರಾಜಕೀಯ ಬದುಕಿನುದ್ದಕ್ಕೂ ಅವರ ಕಟ್ಟಾಬೆಂಬಲಿಗರು.
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಹಾಗೂ ಖೈಬರ್ ಪಖ್ತೂನ್ ಖಾವಾ ಹಾಗೂ ಪಂಜಾಬ್ ಪ್ರಾಂತದ ಅಸೆಂಬ್ಲಿಗಳಲ್ಲಿ ಪಿಟಿಐಗೆ ಬಹುಮತವಿದೆ ಮತ್ತು ಬಲೂಚಿಸ್ತಾನದಲ್ಲಿ ಅಲ್ಲಿನ ಆಡಳಿತಾರೂಢ ಪಕ್ಷದ ಬೆಂಬಲ ದೊರೆತಿರುವುದರಿಂದ ಅಲ್ವಿ ಗೆಲುವು ಬಹುತೇಕ ನಿಚ್ಚಳವಾಗಿದೆ.ಆದರೆ ಪಾಕ್ ಸೆನೆಟ್‌ನಲ್ಲಿ ಪ್ರತಿಪಕ್ಷಗಳು ಬಹುಮತವನ್ನು ಹೊಂದಿವೆ.







