ನಂ.1 ಸ್ಥಾನ ಉಳಿಸಿಕೊಂಡ ವಿರಾಟ್ ಕೊಹ್ಲಿ
ಐಸಿಸಿ ಟೆಸ್ಟ್ ಬ್ಯಾಟ್ಸ್ಮನ್ ರ್ಯಾಂಕಿಂಗ್
ದುಬೈ, ಸೆ.3: ಐಸಿಸಿ ಟೆಸ್ಟ್ ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ ಪ್ರಕಟಗೊಂಡಿದ್ದು, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂ.1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಮೊದಲ ಇನಿಂಗ್ಸ್ ನಲ್ಲಿ 48 ರನ್ ಮತ್ತು ಎರಡನೇ ಇನಿಂಗ್ಸ್ನಲ್ಲಿ 58 ರನ್ ಗಳಿಸಿದ್ದ ಕೊಹ್ಲಿ ವೃತ್ತಿ ಬದುಕಿನಲ್ಲಿ ಗರಿಷ್ಠ 937 ಪಾಯಿಂಟ್ಸ್ಗಳನ್ನು ಕಲೆ ಹಾಕಿದ್ದಾರೆ. ಕೊಹ್ಲಿ 8 ಇನಿಂಗ್ಸ್ಗಳಲ್ಲಿ 544 ರನ್ ಕಲೆ ಹಾಕಿದ್ದಾರೆ. ಚೇತೇಶ್ವರ ಪೂಜಾರ ನಾಲ್ಕನೇ ಟೆಸ್ಟ್ನ ಮೊದಲ ಇನಿಂಗ್ಸ್ ನಲ್ಲಿ ಔಟಾಗದೆ 132 ರನ್ ಗಳಿಸಿದ್ದರು. ಅವರು 6ನೇ ಸ್ಥಾನ ಪಡೆದಿದ್ದಾರೆ.
ವೇಗಿ ಮುಹಮ್ಮದ್ ಶಮಿ 3 ಸ್ಥಾನಗಳ ಭಡ್ತಿ ಪಡೆದು ಅಗ್ರ 20 ಬೌಲರ್ಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅವರು 6 ವಿಕೆಟ್ಗಳನ್ನು ಗಿಟ್ಟಿಸಿಕೊಂಡು 19ನೇ ಸ್ಥಾನ ಪಡೆದಿದ್ದಾರೆ. ಇಶಾಂತ್ ಶರ್ಮಾ 25ನೇ ಸ್ಥಾನಕ್ಕೆ ಏರಿದ್ದಾರೆ.
ಜಸ್ಪ್ರೀತ್ ಬುಮ್ರಾ 487 ಪಾಯಿಂಟ್ಸ್ಗಳೊಂದಿಗೆ 37ನೇ ಸ್ಥಾನ ಗಳಿಸಿದ್ದಾರೆ.
Next Story