ಉಡುಪಿ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಕೊಡಗಿನ ನೆರೆ ಸಂತ್ರಸ್ತರಿಗೆ ಸಹಾಯ

ಉಡುಪಿ, ಸೆ. 4: ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಕೊಡಗಿನ ನೆರೆ ಸಂತ್ರಸ್ತರಿಗೆ ನೀಡುವ ಸಲುವಾಗಿ ದೇವರ ಪ್ರಸಾದ, ಲಾಡು, ಚಕ್ಕುಲಿ, ಬಟ್ಟೆ ಮತ್ತು ಅಗತ್ಯ ವಸ್ತುಗಳ್ಳುಳ್ಳ ವಾಹನಕ್ಕೆ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಮಂಗಳವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಸಚ್ಚಿದಾನಂದ ರಾವ್ ಪಡುಬಿದ್ರಿ, ಸುರೇಶ ರಾವ್ ಮುಂಬೈ, ವಿಜಯ ಕುಂದರ್ ಕಡೆಕಾರ್, ಮಠದ ಚಿಣ್ಣರ ಸಂತರ್ಪಣೆ ಕಾರ್ಯದರ್ಶಿ ಶ್ರೀನಿವಾಸ್ ರಾವ್, ಮಠದ ಪಿಆರ್‌ಓ ಶ್ರೀಶ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.
Next Story





