ಬಾಸ್ಕೆಟ್ ಬಾಲ್ ಪಂದ್ಯಾವಳಿ: ದಾವಣಗೆರೆ ವಿ.ವಿ. ವಿದ್ಯಾರ್ಥಿಗಳ ತಂಡ ಚಾಂಪಿಯನ್
ದಾವಣಗೆರೆ,ಸೆ.4: ದಾವಣಗೆರೆಯ ಬಾಪೂಜಿ ಹೈಟೆಕ್ ಕಾಲೇಜು ಆಶ್ರಯದಲ್ಲಿ ಇತ್ತೀಚೆಗೆ ನಡೆದ 2018-19 ನೇ ಸಾಲಿನ ಅಂತರ್ ಕಾಲೇಜು ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಶಿವಗಂಗೋತ್ರಿ ದಾವಣಗೆರೆ ವಿ.ವಿ. ವಿದ್ಯಾರ್ಥಿಗಳ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕುಲಪತಿ ಪ್ರೊ.ಎಸ್.ವಿ. ಹಲಸೆ, ಕುಲಸಚಿವ ಪ್ರೊ. ಪಿ.ಕಣ್ಣನ್, ಕ್ರೀಡಾ ನಿರ್ದೇಶಕ ಎಂ.ಎಸ್. ರಾಜ್‍ಕುಮಾರ್ ಅವರು, ಕ್ರೀಡಾಪಟುಗಳಾದ ಜಿ.ವಿ. ರಂಜಿತ್‍ಕುಮಾರ್, ಎಸ್. ನಾಗೇಶ್, ವೈ.ಎಲ್. ಪ್ರಸನ್ನ, ಹೆಚ್.ಶಶಿಧರ್, ಜೆ.ಮಂಜುನಾಥ, ಎಸ್. ಕಾರ್ತಿಕ, ಟಿ.ಪ್ರಭು, ಜಿ. ಶೀತಲ್ ನಾಯಕ್, ಮತ್ತು ಗಿರೀಶ್ ಅವರಿಗೆ ಅಭಿನಂದಿಸಿದ್ದಾರೆ.
Next Story