ನಿಧಿ ಸಂಗ್ರಹಣಾ ಜಾಥದಲ್ಲಿ 5.27 ಲಕ್ಷ ರೂ. ಸಂಗ್ರಹ

ಉಡುಪಿ, ಸೆ.4: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ಇಂದು ನಡೆದ ಜಿನೇವಾ ಒಪ್ಪಂದ ದಿನಾಚರಣೆ ಹಾಗೂ ನಿಧಿ ಸಂಗ್ರಹಣಾ ಜಾಥಾ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಒಟ್ಟು 5,27,927 ರೂ. ಸಂಗ್ರಹವಾಯಿತು.
ಉಡುಪಿ ಪರಿಸರದ ಸುಮಾರು 15 ಕಾಲೇಜುಗಳ ವಿದ್ಯಾರ್ಥಿಗಳು ಈ ಜಾಥಾದಲ್ಲಿ ಭಾಗವಹಿಸಿದ್ದರು. ಪಿಪಿಸಿ ಸಂಧ್ಯಾ ಕಾಲೇಜು, ಮಾಧವ ಪೈ ಸ್ಮಾರಕ ಕಾಲೇಜು ಮಣಿಪಾಲ, ತೆಂಕನಿಡಿಯೂರು ಸರಕಾರಿ ಪದವಿ ಕಾಲೇಜು, ಎಂಜಿಎಂ ಕಾಲೇಜು, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಉಡುಪಿ, ಸರಕಾರಿ ಪದವಿ ಕಾಲೇಜು ಹಿರಿಯಡ್ಕ, ಡಾ.ರುಕ್ಮಿಣಿ ಶೆಡ್ತಿ ಸ್ಮಾರಕ ಕಾಲೇಜು ಬಾರಕೂರು, ವೈಕುಂಠ ಬಾಳಿಗಾ ಸ್ಮಾರಕ ಕಾನೂನು ಕಾಲೇಜು, ಶ್ರೀಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಂಟಕಲ್, ಸೈಂಟ್ ಮೆರೀಸ್ ಕಾಲೇಜು ಶಿರ್ವ, ಧನ್ವಂತರಿ ಕಾಲೇಜು ಆಫ್ ನರ್ಸಿಂಗ್, ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ, ಸೈಂಟ್ ಮೆರೀಸ್ ಸಿರೀಯನ್ ಕಾಲೇಜು ಬ್ರಹ್ಮಾವರ ಈ ಜಾಥಾದಲ್ಲಿ ಭಾಗವಹಿಸಿ ನಿಧಿ ಸಂಗ್ರಹಣಾ ಕಾರ್ಯದಲ್ಲಿ ಸಕ್ರೀಯವಾಗಿ ಪಾಲ್ಗೊಂಡರು.
ಅಜ್ಜರಕಾಡು ಮೈದಾನದಲ್ಲಿ ಚಾಲನೆ ಪಡೆದ ಜಾಥಾ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮುಕ್ತಾಯ ಗೊಂಡಿತು. ಜಾಥಾದಲ್ಲಿ ಒಟ್ಟು 5,27,927 ರೂ. ಸಂಗ್ರಹವಾಯಿತು. ಕಾಲೇಜಿನ ಅಧಿಕೃತ ಪ್ರತಿನಿಧಿಗಳ ಸಮ್ಮುಖದಲ್ಲಿ ಸೀಲ್ಡ್ ಬಾಕ್ಸ್‌ನ್ನು ತೆರೆದು ಸಂಗ್ರಹಿತ ಹಣದ ಲೆಕ್ಕ ಮಾಡಲಾಯಿತು.
ಅಜ್ಜರಕಾಡು ಮೈದಾನದಲ್ಲಿ ಚಾಲನೆ ಪಡೆದ ಜಾಥಾ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮುಕ್ತಾಯ ಗೊಂಡಿತು. ಜಾಥಾದಲ್ಲಿ ಒಟ್ಟು 5,27,927 ರೂ. ಸಂಗ್ರಹವಾಯಿತು. ಕಾಲೇಜಿನ ಅಧಿಕೃತ ಪ್ರತಿನಿಧಿಗಳ ಸಮ್ಮುಖದಲ್ಲಿ ಸೀಲ್ಡ್ ಬಾಕ್ಸ್‌ನ್ನು ತೆರೆದು ಸಂಗ್ರಹಿತ ಹಣದ ಲೆಕ್ಕ ಮಾಡಲಾಯಿತು. ನಿಧಿ ಸಂಗಹಣಾ ಜಾಥಾದಲ್ಲಿ ಪಾಲ್ಗೊಂಡ ಕಾಲೇಜುಗಳ ಪೈಕಿ ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಗರಿಷ್ಠ 1,66.653 ರೂ. ಮೊತ್ತದ ನಿಧಿ ಸಂಗ್ರಹಿಸಿ ಪ್ರಥಮ ಬಹುಮಾನಕ್ಕೆ ಆಯ್ಕೆಯಾದರು. ಮಣಿಪಾಲದ ಮಾಧವ ಪೈ ಸ್ಮಾರಕ ಕಾಲೇಜು ವಿದ್ಯಾರ್ಥಿ ಗಳು 1,12,231 ರೂ., ಬಾರಕೂರು ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು 54,516ರೂ.ನಿಧಿ ಸಂಗ್ರಹಿಸಿ ಎರಡನೇ ಮತ್ತು ಮೂರನೇ ಬಹುಮಾನಕ್ಕೆ ಅರ್ಹತೆ ಪಡೆದರು.
ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಜಿನೇವಾ ಒಪ್ಪಂದ ದಿನಾಚರಣೆ ಮತ್ತು ನಿಧಿ ಸಂಗ್ರಹಣಾ ಜಾಥಾದ ಸಮಾರೋಪ ಸಮಾರಂಭ ನಡೆಯಿತು. ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶವನ್ನು ನೀಡಿದರು. ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಪದಾಧಿಕಾರಿಗಳಾದ ಬಸ್ರೂರು ರಾಜೀವ್ ಶೆಟ್ಟಿ, ಡಾ.ಉಮೇಶ್ ಪ್ರಭು, ಡಾ.ಅಶೋಕ್ ಕುಮಾರ್ ವೈ.ಜಿ., ಟಿ.ಚಂದ್ರಶೇಖರ್, ಬಾಲಕೃಷ್ಣ ಶೆಟ್ಟಿ ಕೆ. ಮೊದಲಾದವರು ಉಪಸ್ಥಿತರಿದ್ದರು.







