ಏಶ್ಯಾಕಪ್‌ಗೆ ಪಾಕ್ ತಂಡ ಪ್ರಕಟ: ಹಫೀಝ್, ವಸೀಂಗೆ ಸ್ಥಾನವಿಲ್ಲ
ಲಾಹೋರ್, ಸೆ.4: ಎಡಗೈ ಆಲ್‌ರೌಂಡರ್‌ಗಳಾದ ಮುಹಮ್ಮದ್ ಹಫೀಝ್ ಹಾಗೂ ಇಮಾದ್ ವಸೀಂ ಮುಂದಿನ ವಾರ ದುಬೈ ಹಾಗೂ ಅಬುಧಾಬಿಯಲ್ಲಿ ಆರಂಭವಾಗಲಿರುವ ಏಶ್ಯಾಕಪ್‌ಗೆ ಪಾಕ್ ತಂಡ ಪ್ರಕಟಿಸಿರುವ 16 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿಲ್ಲ.
‘‘ಎರಡು ದೇಶೀಯ ಏಕದಿನ ಟೂರ್ನಿಗಳಲ್ಲಿ 1,200ಕ್ಕೂ ಅಧಿಕ ರನ್ ಗಳಿಸಿರುವ ಎಡಗೈ ಆರಂಭಿಕ ಆಟಗಾರ ಶಾನ್ ಮಸೂದ್‌ಗೆ ಪಾಕ್ ಏಕದಿನ ತಂಡದಲ್ಲಿ ಮೊದಲ ಬಾರಿ ಅವಕಾಶ ನೀಡಲಾಗಿದೆ’’ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಇಂಝಾಮಾಮ್ ವುಲ್‌ಹಕ್ ಹೇಳಿದ್ದಾರೆ.
28ರ ಹರೆಯದ ಮಸೂದ್ ಪಾಕ್ ಪರ ಈ ತನಕ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಸರ್ಫರಾಝ್ ಅಹ್ಮದ್ ಪಾಕ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಸೆ.16 ರಂದು ವೈಲ್ಡ್‌ಕಾರ್ಡ್ ಪ್ರವೇಶ ಪಡೆಯುವ ತಂಡವನ್ನು ಎದುರಿಸುವ ಮೂಲಕ ಪಾಕ್ ಏಶ್ಯಾಕಪ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. 19 ರಂದು ಸಾಂಪ್ರದಾಯಿಕ ಎದುರಾಳಿ ಭಾರತವನ್ನು ಎದುರಿಸಲಿದೆ. 37ರ ಹರೆಯದ ಹಫೀಝ್ ಜುಲೈನಲ್ಲಿ ಝಿಂಬಾಬ್ವೆ ವಿರುದ್ಧ ಸರಣಿಗೆ ಆಯ್ಕೆಯಾಗಿದ್ದರು. ಆದರೆ, ಒಂದೂ ಪಂದ್ಯವನ್ನು ಆಡಿರಲಿಲ್ಲ.





