ಭಾರತದ ವೇಗದ ಬೌಲರ್ ಆರ್ಪಿ ಸಿಂಗ್ ನಿವೃತ್ತಿ
ಹೊಸದಿಲ್ಲಿ, ಸೆ.5: ಭಾರತದ ವೇಗದ ಬೌಲರ್ ರುದ್ರಪ್ರತಾಪ್ ಸಿಂಗ್(ಆರ್ಪಿ ಸಿಂಗ್)ಮಂಗಳವಾರ ಕ್ರಿಕೆಟ್ನಿಂದ ದೂರ ಸರಿದಿದ್ದಾರೆ.
32ರ ಹರೆಯದ ಸಿಂಗ್ ಟ್ವಿಟರ್ನ ಮೂಲಕ ತನ್ನ ನಿವೃತ್ತಿ ನಿರ್ಧಾರವನ್ನು ಘೋಷಿಸಿದ್ದಾರೆ.
‘‘ಸುಮಾರು 13 ವರ್ಷಗಳ ಹಿಂದೆ 2005ರ ಸೆ.5 ರಂದು ನಾನು ಮೊದಲ ಬಾರಿ ಭಾರತ ಕ್ರಿಕೆಟ್ ತಂಡದ ಜೆರ್ಸಿಯನ್ನು ಧರಿಸಿದ್ದೆ. ಅದೊಂದು ನನ್ನ ಜೀವನದ ಮರೆಯಲಾರದ ಕ್ಷಣವಾಗಿತ್ತು’’ ಎಂದು ಟ್ವಿಟರ್ ಖಾತೆಯಲ್ಲಿ ಸಿಂಗ್ ಬರೆದಿದ್ದಾರೆ.
ಆರು ವರ್ಷಗಳ ಕಾಲ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಿಂಚಿದ್ದ ಸಿಂಗ್ ಎಲ್ಲ 3 ಮಾದರಿಯ ಕ್ರಿಕೆಟ್ನಲ್ಲಿ ಒಟ್ಟು 82 ಪಂದ್ಯಗಳನ್ನು ಆಡಿದ್ದು 100ಕ್ಕೂ ಅಧಿಕ ವಿಕೆಟ್ ಪಡೆದಿದ್ದಾರೆ.
2007ರ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ವಿಜೇತ ತಂಡದ ಸದಸ್ಯರಲ್ಲಿ ಸಿಂಗ್ ಕೂಡ ಒಬ್ಬರಾಗಿದ್ದರು. ಅದೇ ವರ್ಷ ಪರ್ತ್ನಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ ತಂಡ ಟೆಸ್ಟ್ ಪಂದ್ಯ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು.
Next Story