ಬೀರೂರು: ಸೆಂಟ್ರಿಂಗ್ ಕುಸಿದು ಇಬ್ಬರ ದುರ್ಮರಣ
ಬೀರೂರು, ಸೆ.5: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಕುಡ್ಲೂರು ಸಮೀಪದ ಕೋರನಹಳ್ಳಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನೂತನವಾಗಿ ನಿರ್ಮಿಸುತ್ತಿದ್ದ ಮನೆಯ ನೀರಿನ ಟ್ಯಾಂಕ್‍ನ ಸೆಂಟ್ರಿಂಗ್ ತೆಗೆಯಲು ಹೋದ ಇಬ್ಬರ ಮೇಲೆ ಸೆಂಟ್ರಿಂಗ್ ಕುಸಿದು ಓರ್ವ ಸ್ಥಳದಲ್ಲಿಯೇ ಮೃತಪಟ್ಟರೆ ಇನ್ನೊಬ್ಬರು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ.
ಕೋರನಹಳ್ಳಿ ಗ್ರಾಮದ ಶೇಖರಪ್ಪ ಎಂಬವರು ನಿರ್ಮಿಸುತ್ತಿದ್ದ ಮನೆಯಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿ ಸೆಂಟ್ರಿಂಗ್ ಹಾಕಲಾಗಿತ್ತು. ಬುಧವಾರ ಸೆಂಟ್ರಿಂಗ್ ತೆಗೆಯಲು ಇಳಿದ ಗಾರೆ ಕಾರ್ಮಿಕರಾದ ತರೀಕೆರೆಯ ಕೋಡಿಕ್ಯಾಂಪ್ ಗ್ರಾಮ ವಿಜಯನಗರ ಬಡಾವಣೆ ನಿವಾಸಿ ಸೈಯದ್ ಖಾಸಿಂ ಎಂಬವರ ಮಗ ಸೈಯದ್ ಅತಾವುಲ್ಲಾ(23) ಮತ್ತು ಶಬೀರ್ ಅಹ್ಮದ್ ಮಗ ಆರಿಫ್ ಪಾಶ (35) ಮೃತಪಟ್ಟವರು ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಬೀರೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ತನಿಖೆ ನಡೆಸಿದ್ದಾರೆ.
Next Story