ಸಲಿಂಗಕಾಮಕ್ಕೆ ಸುಪ್ರೀಂ ಸಮ್ಮತಿ: ಸಲಿಂಗಿಗಳಿಂದ ಸಂಭ್ರಮಾಚರಣೆ
ಬೆಂಗಳೂರು, ಸೆ.6: ಸಲಿಂಗಕಾಮಕ್ಕೆ ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿರುವ ಹಿನ್ನೆಲೆಯಲ್ಲಿ ನಗರದ ಪುರಭವನದ ಮುಂಭಾಗ ಸಲಿಂಗಿಗಳು ಸಂಭ್ರಮಾಚರಣೆ ನಡೆಸಿದರು.
ಕಲಂ 377ಕ್ಕೆ ಯಾವುದೆ ತರ್ಕವಿಲ್ಲ. ಸಹಮತದ ಲೈಂಗಿಕ ಕ್ರಿಯೆ ಅಪರಾಧವಲ್ಲವೆಂದು ಸುಪ್ರೀಂ ಕೋರ್ಟ್ನಿಂದ ತೀರ್ಪು ಹೊರ ಬೀಳುತ್ತಿದ್ದಂತೆ, ಅದಾಗಲೆ ನಗರದ ಪುರಭವನದ ಮುಂಭಾಗ ಜಮಾಯಿಸಿದ್ದ ಸಲಿಂಗಿಗಳು, ಚಪ್ಪಾಳೆ, ಹರ್ಷೋದ್ಘಾರ ಮಾಡುವ ಮೂಲಕ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.
ಕಳೆದ 20 ವರ್ಷಗಳಿಂದ ಕಲಂ 377 ವಿರುದ್ಧ ಹೋರಾಟ ಮಾಡಿದ್ದೆವು. ಇವತ್ತು ಸುಪ್ರೀಂ ಕೋರ್ಟ್ ನಮಗೆ ನ್ಯಾಯ ಕೊಡುವ ಮೂಲಕ ದೇಶದ ಸಮಾನವಾಗಿ ಬದುಕುವ ಹಕ್ಕನ್ನು ಖಾತ್ರಿ ಪಡಿಸಿದೆ. ಸುಪ್ರೀಂ ಕೋರ್ಟ್ಗೆ ದೇಶದ ಸಲಿಂಗಿ ಸಮುದಾಯದ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದ ಸಲಿಂಗಿಯೊಬ್ಬರು ತಿಳಿಸಿದ್ದಾರೆ.
Next Story