10 ಲಕ್ಷ ಹಜ್ ಯಾತ್ರಿಕರು ಸೌದಿಯಿಂದ ವಾಪಸ್
ಜಿದ್ದಾ, ಸೆ. 7: ಹಜ್ ನಿರ್ವಹಿಸಿದ ಬಳಿಕ 10 ಲಕ್ಷಕ್ಕೂ ಅಧಿಕ ಯಾತ್ರಿಕರು ಸೌದಿ ಅರೇಬಿಯವನ್ನು ತೊರೆದಿದ್ದಾರೆ ಎಂದು ಸೌದಿ ಅಧಿಕಾರಿಗಳು ಹೇಳಿದ್ದಾರೆ.
ಹಜ್ ಪೂರ್ಣಗೊಂಡು 19 ದಿನಗಳ ಬಳಿಕ, 17,58,722 ವಿದೇಶಿ ಯಾತ್ರಿಕರ ಪೈಕಿ, 10,01,783 ಮಂದಿ ಸೆಪ್ಟಂಬರ್ 6ರ ಸಂಜೆ 4 ಗಂಟೆಯ ವೇಳೆಗೆ ಸೌದಿ ಅರೇಬಿಯದಿಂದ ಹೊರಗೆ ಹೋಗಿದ್ದಾರೆ ಎಂದು ಪಾಸ್ಪೋರ್ಟ್ ಮಹಾ ನಿರ್ದೇಶನಾಲಯ ತಿಳಿಸಿದೆ.
ಹಜ್ನ ಶೃಂಗವೆಂದು ಕರೆಯಲ್ಪಡುವ ‘ಅರಫಾತ್ ಬೆಟ್ಟದ ಮೇಲಿನ ದಿನ’ವನ್ನು ಈ ವರ್ಷ ಆಗಸ್ಟ್ 19ರಂದು ಆಚರಿಸಲಾಗಿತ್ತು.
23 ಲಕ್ಷಕ್ಕೂ ಅಧಿಕ ಯಾತ್ರಿಕರು ಅಂದು ಮಕ್ಕಾ ಹೊರವಲಯದ ಬೆಟ್ಟದಲ್ಲಿ ದಿನವನ್ನು ಕಳೆದಿದ್ದರು.
Next Story