ಯುವತಿಯ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು, ಸೆ.8: ಹಣಕ್ಕಾಗಿ ಯುವತಿಯನ್ನು ಅರೆನಗ್ನಗೊಳಿಸಿ ಕೊಲೆಗೈದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ನಗರದ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಗೌರಿಬಿದನೂರು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಗುಡಿಬಂಡೆ ತಾಲೂಕಿನ ಪೋಲಂಪಲ್ಲಿಯ ಕ್ಯಾಬ್ ಚಾಲಕ ಮಂಜುನಾಥ್(25) ಮತ್ತು ಗಣೇಶ್ ರೆಡ್ಡಿ(28) ಬಂಧಿತ ಆರೋಪಿಗಳಾಗಿದ್ದಾರೆ. ಮನಿ ಟ್ರಾನ್ಸ್‌ಫರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಹರಳೂರು ನಾಗೇನಹಳ್ಳಿಯ ಭಾಗ್ಯಶ್ರೀ(22) ಯುವತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದರು.
ಕಳೆದ ಸೆ.2ರಂದು ಭಾಗ್ಯಶ್ರೀ ತನ್ನ ಕಚೇರಿಯಿಂದ 5 ಲಕ್ಷ ರೂ.ಗಳನ್ನು ದೇವನಹಳ್ಳಿಯ ಕಚೇರಿಗೆ ತೆಗೆದುಕೊಂಡು ಹೋಗುವಾಗ ಕಾರಿನಲ್ಲಿ ಬಂದ ಆರೋಪಿಗಳು ಕನ್ನಮಂಗಲಪಾಳ್ಯದಿಂದ ದೇವನಹಳ್ಳಿ ಬಳಿ ಡ್ರಾಪ್ ಮಾಡುವುದಾಗಿ ಕರೆದೊಯ್ದು ಕೊಲೆ ಮಾಡಿ ಬಳಿಕ ಗೌರಿಬಿದನೂರು-ಗುಡಿಬಂಡೆ ಮಾರ್ಗದ ಸುಬ್ಬನಹಳ್ಳಿ ಬಳಿಯ ಮೋರಿಗೆ ಕೆಳಗೆ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
Next Story