ದಾವಣಗೆರೆ: ಪ್ರಸಾದ ಸೇವಿಸಿ 200 ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ದಾವಣಗೆರೆ,ಸೆ.8: ಪ್ರಸಾದ ಸೇವಿಸಿ 200 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಬಿಳಿಚೋಡಿನಲ್ಲಿ ನಡೆದಿದೆ ಎನ್ನಲಾಗಿದೆ.
ಇಂದು ಬಿಳಿಚೋಡು ಆಂಜನೇಯ ಸ್ವಾಮಿ ಪರ್ವ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪ್ರಸಾದ ಸೇವಿಸಿದ ಹಲವರಿಗೆ ವಾಂತಿ ಬೇಧಿ ಉಂಟಾಗಿದೆ ಎನ್ನಲಾಗಿದೆ. ಮಹಿಳೆಯರು ಮತ್ತು 60 ರಷ್ಟು ಮಕ್ಕಳು ವಾಂತಿ ಮಾಡಿದ್ದು, ಅಸ್ವಸ್ಥರಿಗೆ ಬಿಳಿಚೋಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಅಸ್ವಸ್ಥರಾದವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಹತ್ತಕ್ಕೂ ಹೆಚ್ಚು ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಸ್ಥಳಕ್ಕೆ ಡಿಎಚ್ ಓ ತ್ರಿಪುಲಾಂಭ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Next Story