ಹನೂರು: ಗಾಳಿ ಮಳೆಗೆ ಉರುಳಿದ ಮರ; ಎಮ್ಮೆ ಸಾವು
![ಹನೂರು: ಗಾಳಿ ಮಳೆಗೆ ಉರುಳಿದ ಮರ; ಎಮ್ಮೆ ಸಾವು ಹನೂರು: ಗಾಳಿ ಮಳೆಗೆ ಉರುಳಿದ ಮರ; ಎಮ್ಮೆ ಸಾವು](/images/placeholder.jpg)
ಹನೂರು,ಸೆ.10: ಗಾಳಿ ಮಳೆ ಅಬ್ಬರಕ್ಕೆ ಮರ ಉರುಳಿದ ಪರಿಣಾಮ ಎಮ್ಮೆಯೊಂದು ಸಾವನ್ನಪ್ಪಿ ಮತ್ತೊಂದು ಎಮ್ಮೆಗೆ ಗಂಭೀರ ಗಾಯವಾಗಿರುವ ಘಟನೆ ಹನೂರು ಸಮೀಪದ ಹಲಗಾಪುರ ಗ್ರಾಮದಲ್ಲಿ ನಡೆದಿದೆ.
ಘಟನೆ ವಿವರ: ಹಲಗಾಪುರ ಗ್ರಾಮದ ಕುರುಬರಬೀದಿಯಲ್ಲಿ ನಾಗರಾಜು ಎಂಬವರಿಗೆ ಸೇರಿದ ಎರಡು ಎಮ್ಮೆಗಳನ್ನು ಮರದ ಹತ್ತಿರ ಕಟ್ಟಿಹಾಕಲಾಗಿತ್ತು. ಮದ್ಯಾಹ್ನದ ನಂತರ ಸುರಿದ ಭಾರೀ ಗಾಳಿ ಮಳೆಯ ಅಬ್ಬರಕ್ಕೆ ಮರ ಉರುಳಿದ ಪರಿಣಾಮ ಒಂದು ಎಮ್ಮೆ ಸ್ಥಳದಲ್ಲಿ ಸಾವನ್ನಪ್ಪಿ, ಮತ್ತೊಂದು ಎಮ್ಮೆಗೆ ಗಂಭೀರ ಗಾಯಗಳಾಗಿದೆ.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ನೆರವು ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Next Story