ಇಂಡಿಯಾ ಫ್ರೆಟರ್ನಿಟಿ ಫೋರಂ ಕರ್ನಾಟಕ ಪೂರ್ವ ಪ್ರಾಂತ್ಯದಿಂದ ಹಜ್ ಸ್ವಯಂ ಸೇವಕರಿಗೆ ಗೌರವ ಆತಿಥ್ಯ
ದಮ್ಮಾಮ್, ಸೆ. 10: ಸೌದಿ ಅರೇಬಿಯಾದ ಅನಿವಾಸಿ ಭಾರತೀಯ ಸಂಘಟನೆ ಇಂಡಿಯಾ ಫ್ರೆಟರ್ನಿಟಿ ಫೋರಂ ಹಜ್ಜಾಜ್ ಗಳ ಸೇವೆಗೈದ ಸ್ವಯಂ ಸೇವಕರನ್ನು ಗೌರವಿಸುವ ಸಲುವಾಗಿ ಜುಬೈಲ್ ನ ರೋಯಲ್ ಡೈನ್ ರೆಸ್ಟೋರೆಂಟ್ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಐಎಫ್ಎಫ್ ಕರ್ನಾಟಕ ಚಾಪ್ಟರ್ ಪೂರ್ವ ಪ್ರಾಂತೀಯ ಅಧ್ಯಕ್ಷ ಅತಾವುಲ್ಲಾ ಉಚ್ಚಿಲ ಅತಿಥಿಗಳನ್ನು ಮತ್ತು ಸ್ವಯಂ ಸೇವಕರನ್ನು ಸ್ವಾಗತಿಸುವ ಮೂಲಕ ಚಾಲನೆ ನೀಡಿದರು.
ಇಂಡಿಯಾ ಫ್ರೆಟರ್ನಿಟಿ ಫೋರಂ ಹಜ್ಜ್ ಸ್ವಯಂ ಸೇವಕರ ಸೇವೆಯ ಸಾಕ್ಷ್ಯ ಚಿತ್ರವನ್ನು ನೆರೆದಿದ್ದ ಸಭಿಕರಿಗೆ ಪ್ರದರ್ಶಿಸಲಾಯಿತು.
ಮುಖ್ಯ ಅತಿಥಿ ಯಾಗಿದ್ದ ಮೆಹರಾಜ್ ಗುಲ್ಬರ್ಗ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸ್ವಯಂ ಸೇವಕರ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಜ್ಜಾಜ್ ಗಳ ಸೇವೆಗೈದ ಸ್ವಯಂ ಸೇವಕರು ತಮ್ಮ ಅನುಭವಗಳನ್ನು ಸಭಿಕರೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇಂಡಿಯನ್ ಸೋಶಿಯಲ್ ಫೋರಂ ರಾಜ್ಯ ಕಾರ್ಯದರ್ಶಿಯಾದ ಮುಹಮ್ಮದ್ ಸಲಾಹುದ್ದೀನ್, ಕಾರ್ಕಳ ಅಸೊಶಿಯೇಶನ್ ಸೌದಿ ಅರೇಬಿಯಾದ ಮುಹಮ್ಮದ್ ಜುನೈದ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಇಂಡಿಯಾ ಫ್ರೆಟರ್ನಿಟಿ ಫೋರಂ ಪೂರ್ವ ಪ್ರಾಂತೀಯ ಕೇಂದ್ರ ಸಮಿತಿಯ ಅಧ್ಯಕ್ಷ ಇಮ್ತಿಯಾಝ್ ಸುರತ್ಕಲ್ ಅಧ್ಯಕ್ಷೀಯ ಭಾಷಣವನ್ನು ಮಾಡಿದರು.
ಕಾರ್ಯಕ್ರಮವನ್ನು ಅನ್ವರ್ ಮಠ ನಿರೂಪಿಸಿದರು ಮತ್ತು ನೌಫಲ್ ಬಂದರ್ ವಂದಿಸಿದರು.