ಹೊನ್ನಾಳಿ: ಬಾಲಕನ ಮೇಲೆ ಬೀದಿ ನಾಯಿ ದಾಳಿ
ಹೊನ್ನಾಳಿ,ಸೆ.11: ತಾಲೂಕಿನ ಸಾಸ್ವೆಹಳ್ಳಿ ಹೋಬಳಿ ಚನ್ನಮುಂಭಾಪುರ ಗ್ರಾಮದಲ್ಲಿ ನಾಲ್ಕು ವರ್ಷದ ಮಗುವಿಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನರೇಂದ್ರ(4) ಎಂಬ ಬಾಲಕ ಆಟವಾಡುವ ಸಂದರ್ಭ ನಾಯಿ ದಿಢೀರ್ ದಾಳಿ ನಡೆಸಿ ಬಾಲಕನ ಗಲ್ಲ ಕಚ್ಚಿ ತೀವ್ರ ಗಾಯಗೊಳಿಸಿದ್ದು, ಬಾಲಕ ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗ್ರಾಪಂ ಪಿಡಿಒ, ಕಾರ್ಯದರ್ಶಿ ಇದುವರೆಗೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸೋಮವಾರ ಬಾಲಕನ ತಂದೆ ರಾಜು ಹೊನ್ನಾಳಿ ತಹಸೀಲ್ದಾರ್ ತುಷಾರ್. ಬಿ. ಹೊಸೂರ್ ಅವರಿಗೆ ದೂರು ನೀಡಿದ್ದಾರೆ. ನಾಯಿ ಕಡಿತಕ್ಕೆ ಒಳಗಾದ ಬಾಲಕ ಗ್ರಾಪಂ ಸದಸ್ಯೆ ಕುಸುಮ ಅವರ ಮಗನಾಗಿದ್ದಾನೆ.
Next Story