ಅಸ್ಸಾಂನಲ್ಲಿ ಲಘು ಭೂಕಂಪ, ಪಶ್ಚಿಮಬಂಗಾಳದಲ್ಲಿ ನಡುಕ
ಹೊಸದಿಲ್ಲಿ, ಸೆ.12: ಅಸ್ಸಾಂನಲ್ಲಿ ಬುಧವಾರ ಬೆಳಗ್ಗೆ 10:20ರ ಸುಮಾರಿಗೆ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪನದ ಪ್ರಮಾಣ 5.5ರಷ್ಟು ಕಂಡುಬಂದಿದೆ.
ಇದೇ ವೇಳೆ ಪಶ್ಚಿಮಬಂಗಾಳ, ಬಿಹಾರ ಹಾಗೂ ಬಾಂಗ್ಲಾದೇಶದಲ್ಲೂ ಭೂಕಂಪನದ ಅನುಭವವಾಗಿದೆ.
ಸುಮಾರು 10 ಸೆಕೆಂಡ್ಗಳ ಕಾಲ ಭೂಮಿ ನಡುಗಿತ್ತು ಎಂದು ಗುವಾಹಟಿಯಲ್ಲಿ ಸ್ಥಳೀಯರು ತಿಳಿಸಿದ್ದಾರೆ.
ಭೂಕಂಪನದಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಇಂದು ಬೆಳಗ್ಗೆ ಜಮ್ಮು-ಕಾಶ್ಮೀರ ಹಾಗೂ ಹರ್ಯಾಣದಲ್ಲಿ ಲಘು ಭೂಕಂಪವಾಗಿರುವ ಬಗ್ಗೆ ವರದಿಯಾಗಿತ್ತು. ಹರ್ಯಾಣದಲ್ಲಿ ಬೆಳಗ್ಗೆ 5:43ಕ್ಕೆ ಸಂಭವಿಸಿದ ಭೂಕಂಪನದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 3.1ರಷ್ಟಿತ್ತು. ಜಮ್ಮುವಿನಲ್ಲಿ ಬೆಳಗ್ಗೆ 5:15ಕ್ಕೆ ಸಂಭವಿಸಿದ ಭೂಕಂಪನದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 4.6ರಷ್ಟಿತ್ತು.
Next Story