Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಶುರುವಾಗಿದೆ ಸೌದೀಕರಣದ ಮತ್ತೊಂದು ಘಟ್ಟ:...

ಶುರುವಾಗಿದೆ ಸೌದೀಕರಣದ ಮತ್ತೊಂದು ಘಟ್ಟ: ಅನಿಶ್ಚಿತತೆಯಲ್ಲಿ ಭಾರತೀಯರು

ನೆರವಿಗೆ ಬರಬೇಕಾಗಿದೆ ಸರಕಾರ

ಎಸ್.ಎ.ರಹಿಮಾನ್ ಮಿತ್ತೂರುಎಸ್.ಎ.ರಹಿಮಾನ್ ಮಿತ್ತೂರು12 Sept 2018 9:19 PM IST
share
ಶುರುವಾಗಿದೆ ಸೌದೀಕರಣದ ಮತ್ತೊಂದು ಘಟ್ಟ: ಅನಿಶ್ಚಿತತೆಯಲ್ಲಿ ಭಾರತೀಯರು

ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವ ಸೌದಿ ಪ್ರಜೆಗಳಿಗಾಗಿ ಅಲ್ಲಿನ ಸರಕಾರವು ಕೆಲವು ವರ್ಷಗಳ ಹಿಂದೆ ಜಾರಿಗೆ ತಂದಿರುವ ನೀತಿಯಾಗಿದೆ ಸೌದೀಕರಣ. ಮೊಬೈಲ್ ಮಾರಾಟ ಮಳಿಗೆ, ಚಿನ್ನದ ಆಭರಣಗಳ ಮಾರಾಟ ಮಳಿಗೆ ಸೇರಿದಂತೆ ಕೆಲವು ಉದ್ಯೋಗ ಕ್ಷೇತ್ರಗಳಲ್ಲಿ ಈಗಾಗಲೇ ಮೊದಲನೇ ಹಂತದ ಸೌದೀಕರಣವು ಹೇರಲ್ಪಪಟ್ಟಿದೆ. ಆದರೆ ಈ ಉದ್ಯೋಗ ಕ್ಷೇತ್ರಗಳಲ್ಲಿ ಯಮನ್ ಪ್ರಜೆಗಳ ಹೆಚ್ಚಿನ ಪ್ರಾಬಲ್ಯ ಇದ್ದುದರಿಂದ ಭಾರತೀಯರ ಮೇಲೆ ಇದು ದೊಡ್ಡ ಮಟ್ಟದ ಪ್ರಭಾವ ಬೀರಿಲ್ಲ ಎಂದೇ ಹೇಳಬಹುದು.

ಆದರೆ ಇದೀಗ ಸೆಪ್ಟೆಂಬರ್ 11ರಿಂದ ಅಂದರೆ ಅರಬಿಕ್ ಹೊಸ ವರ್ಷದ ದಿನದಿಂದ ಭಾರತೀಯರು ಹೆಚ್ಚಾಗಿ ಉದ್ಯೋಗದಲ್ಲಿರುವ ಪ್ರಮುಖ 12 ವಲಯಗಳನ್ನು ಸೌದೀಕರಣದ ವ್ಯಾಪ್ತಿಗೆ ತರಲಾಗಿದೆ. ಇದರಿಂದಾಗಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಭಾರತೀಯರ ಅದರಲ್ಲೂ ಕರಾವಳಿಗರ ಸ್ಥಿತಿ ಡೋಲಾಯಮಾನವಾಗಿದೆ. ಎರಡನೇ ಘಟ್ಟದ ಸೌದೀಕರಣದಲ್ಲಿ ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್ಸ್, ಕಾರು ಹಾಗೂ ಮೋಟಾರ್ ಬೈಕ್ ಶೋರೂಂಗಳು, ರೆಡಿಮೇಡ್ ಬಟ್ಟೆಗಳ ಮಾರಾಟ ಮಳಿಗೆಗಳು, ಪೀಠೋಪಕರಣಗಳ ಅಂಗಡಿಗಳು, ಕೈಗಡಿಯಾರಗಳು, ಕನ್ನಡಕಗಳು, ವೈದ್ಯಕೀಯ ಸಲಕರಣೆಗಳು ಮತ್ತು ಸಾಧನಗಳು, ಕಟ್ಟಡ ಸಾಮಗ್ರಿಗಳು, ಕಾರ್ಪೆಟ್ ಗಳು, ಮಿಠಾಯಿ ತಯಾರಿ ಹಾಗೂ ಮಾರಾಟ ವಲಯಗಳನ್ನು ಸೌದೀಕರಣಗೊಳಿಸಲಾಗಿದೆ. ಈ ಉದ್ಯೋಗಗಳ ಪೈಕಿ ಪೀಠೋಪಕರಣದ ಅಂಗಡಿಗಳು, ಕೈಗಡಿಯಾರಗಳು, ಎಲೆಕ್ಟ್ರಿಕ್ , ಎಲೆಕ್ಟ್ರಾನಿಕ್ಸ್ ಮತ್ತು  ಮಿಠಾಯಿ ಅಂಗಡಿಗಳಲ್ಲಿ ಕರಾವಳಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ಉದ್ಯೋಗ ಈಗ ಅನಿಶ್ಚಿತತೆಯಲ್ಲಿದೆ. ಇವುಗಳನ್ನು ಬಿಟ್ಟು ಬೇರೆ ಉದ್ಯೋಗಗಳನ್ನು ಮಾಡೋಣವೆಂದರೆ ಅಲ್ಲಿಯೂ ಕೂಡ ಕಠಿಣ ಕಾರ್ಮಿಕ ನೀತಿಯ ಅನುಭವಗಳು. ಸ್ವ-ಉದ್ಯೋಗ ಬಿಟ್ಟು ಕಂಪೆನಿಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳೋಣವೆಂದರೆ, ಕಂಪನಿಗಳೂ ಕೂಡ ನಷ್ಟದಿಂದಾಗಿ ತನ್ನ ಉದ್ಯೋಗಿಗಳನ್ನು ಕಡಿತಗೊಳಿಸುತ್ತಿವೆ. ಸೌದಿ ಅರೇಬಿಯಾದ ಪ್ರವಾಸಿಗಳ ಪಾಲಿಗೆ ಹೇಳುವುದಾದರೆ ಈಗ ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡ ಅನುಭವ.

ಸೌದೀಕರಣದ ಎರಡನೇ ಹಂತದ ಪ್ರಥಮ ದಿನವಾದ ನಿನ್ನೆ ವಾಣಿಜ್ಯ ನಗರಗಳಾದ ರಿಯಾದ್, ಜಿದ್ದಾ ಹಾಗೂ ದಮ್ಮಾಮ್ ಗಳಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಬಿಕೋ ಎನ್ನುತ್ತಿದ್ದವು. ಸೂಪರ್ ಮಾರ್ಕೆಟ್, ಹೋಟೆಲ್ ಹಾಗೂ ಸೌದೀಕರಣಕ್ಕೆ ಒಳಪಡದ ಇನ್ನಿತರ ಮಳಿಗೆಗಳು ತೆರೆದಿದ್ದವಾದರೂ, ಗ್ರಾಹಕರಿಲ್ಲದೇ ಸ್ತಬ್ಧವಾಗಿದ್ದವು.

ಕಳೆದ ಒಂದು ವರ್ಷದಲ್ಲಿ ಸೌದಿ ಅರೇಬಿಯಾದ ಕಾನೂನು ನೀತಿ ಎಷ್ಟೊಂದು ವೇಗವಾಗಿ ಬದಲಾವಣೆಯನ್ನು ಕಂಡಿದೆಯೆಂದರೆ ಒಂದೆರಡು ವರ್ಷಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ಭಾರತೀಯರು ಈ ರೀತಿಯ ಪರಿಸ್ಥಿತಿ ತಮಗೆ ಬಂದೊದಗಬಹುದೆಂದು ಕನಸಿನಲ್ಲೂ ಗ್ರಹಿಸಿದವರಲ್ಲ. ಇದರಿಂದಾಗಿ ವಿದೇಶಿಗರು ಯಾವುದೇ ಹಣವನ್ನು ಭವಿಷ್ಯಕ್ಕಾಗಿ ಉಳಿತಾಯ ಮಾಡದೇ ಖಾಲಿಯಾಗಿದ್ದಾರೆ. ಈ ಪರಿಸ್ಥಿತಿಯಲ್ಲಿ ಸೌದಿ ಅರೇಬಿಯಾದಲ್ಲಿ ನಿಲ್ಲುವಂತೆಯೂ ಇಲ್ಲ, ಖಾಲಿ ಕೈಯಲ್ಲಿ ಸ್ವದೇಶಕ್ಕೆ ಮರಳುವಂತೆಯೂ ಇಲ್ಲ ಎಂಬ ಪರಿಸ್ಥಿತಿ ಇವರದ್ದಾಗಿದೆ. ಕದ್ದು ಮುಚ್ಚಿ ತಮ್ಮ ಪರವಾನಿಗೆಯಲ್ಲಿ ನಮೂದಿಸದ ಕೆಲಸವನ್ನು ಮಾಡಿದರೆ 10,000 ರಿಯಾಲ್ ನಿಂದ 40,000 ರಿಯಾಲ್ ವರೆಗೆ (ಸುಮಾರು 1,90,000 ರೂ.ಗಳಿಂದ 7,60,000 ರೂ.ಗಳವರೆಗೆ) ದಂಡ ತೆರಬೇಕಾಗುತ್ತದೆ. ಮಾತ್ರವಲ್ಲ ನಂತರ ಗಡಿಪಾರು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

ಹಿಂದೆ ಸೌದಿ ಅರೇಬಿಯಾದ ಕಾರ್ಮಿಕ ನೀತಿಯು ಕಠಿಣವಾಗಿದ್ದರೂ ಅದು ಸಮರ್ಪಕವಾಗಿ ಕಾರ್ಯರೂಪಕ್ಕೆ ಬರುತ್ತಿರಲಿಲ್ಲ. ಆದರೆ ನೂತನ ರಾಜಕುಮಾರರ ಅಧಿಕಾರವಧಿಯಲ್ಲಿ ಎಲ್ಲಾ ಕಾರ್ಮಿಕ ನೀತಿಯನ್ನೂ ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ತರಲಾಗುತ್ತದೆ. ಇದು ವಿದೇಶಿಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸೌದಿ ಅರೇಬಿಯಾವನ್ನು ಸಂಪೂರ್ಣ ಸೌದೀಕರಣ ಹಾಗೂ ಪ್ರವಾಸಿ ತಾಣವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ‘ವಿಷನ್ 2030’ ಎಂಬ ಘೋಷಣೆಯೊಂದಿಗೆ ತನ್ನ ಕಾರ್ಮಿಕ ನೀತಿಯಲ್ಲಿ ವ್ಯಾಪಕ ತಿದ್ದುಪಡಿಗಳನ್ನು ಮಾಡುತ್ತಿದ್ದು, ಈ ಕಾನೂನಿಂದಾಗಿ ಸಣ್ಣಪುಟ್ಟ ಅಂಗಡಿ ಮುಂಗಟ್ಟುಗಳು ತಮ್ಮ ಪರವಾನಿಗೆಯನ್ನು ನವೀಕರಿಸಲು ಕಷ್ಟವಾಗಬಹುದು. ಅತ್ತ ಸ್ವದ್ಯೋಗವೂ ಇಲ್ಲ, ಇತ್ತ ಕಂಪನಿಗಳಲ್ಲಿ ಕೆಲಸವೂ ಇಲ್ಲ ಎಂಬ ಒತ್ತಡದ ನಡುವೆ ಕರಾವಳಿಗರು ತವರೂರಿಗೆ ಮರಳಲ್ಲದೇ ಬೇರೆ ಆಯ್ಕೆ ಇಲ್ಲದಾಗಿದೆ.

ಹೀಗೆ ಸೌದೀಕರಣದ ಹಿನ್ನೆಲೆಯಲ್ಲಿ ತವರಿಗೆ ಮರಳುತ್ತಿರುವವರ ನೋಂದಣಿಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣಿ ಕೇಂದ್ರ ತೆರೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಹೇಳಿದ್ದಾರೆ. ಬರಿಗೈಯಲ್ಲಿ ಮರಳುವ ಕರಾವಳಿಯ ಜನರ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಹೆಚ್ಚಿನ ಮುತುವರ್ಜಿಯನ್ನು ವಹಿಸಿ ಇವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಡಬೇಕಾಗಿದೆ.

share
ಎಸ್.ಎ.ರಹಿಮಾನ್ ಮಿತ್ತೂರು
ಎಸ್.ಎ.ರಹಿಮಾನ್ ಮಿತ್ತೂರು
Next Story
X