Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಕೊಹ್ಲಿ ಬ್ಯಾಟ್ಸ್ ಮನ್ ಆಗಿ ಗೆದ್ದರೂ...

ಕೊಹ್ಲಿ ಬ್ಯಾಟ್ಸ್ ಮನ್ ಆಗಿ ಗೆದ್ದರೂ ನಾಯಕರಾಗಿ ಸೋತರು

ಐದು ಟೆಸ್ಟ್ ಗಳ ಸರಣಿಯನ್ನು 1-4 ಅಂತರದಲ್ಲಿ ಕೈ ಚೆಲ್ಲಿದ ಟೀಮ್ ಇಂಡಿಯಾ

ವಾರ್ತಾಭಾರತಿವಾರ್ತಾಭಾರತಿ12 Sept 2018 11:54 PM IST
share
ಕೊಹ್ಲಿ ಬ್ಯಾಟ್ಸ್ ಮನ್ ಆಗಿ ಗೆದ್ದರೂ ನಾಯಕರಾಗಿ ಸೋತರು

ಲಂಡನ್, ಸೆ.12: ಇಂಗ್ಲೆಂಡ್ ವಿರುದ್ಧದ ಪ್ರವಾಸ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ಬ್ಯಾಟ್ಸ್ ಮನ್ ಆಗಿ ಯಶಸ್ವಿಯಾದರು. ಆದರೆ ನಾಯಕರಾಗಿ ಅವರು ಸೋಲು ಅನುಭವಿಸಿದರು.

  2014ರ ಪ್ರವಾಸದಲ್ಲಿ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಲಿಲ್ಲ. 5 ಟೆಸ್ಟ್‌ಗಳ 10 ಇನಿಂಗ್ಸ್‌ಗಳಲ್ಲಿ 13.40 ಸರಾಸರಿಯಂತೆ 134 ರನ್ ಗಳಿಸಿದ್ದರು. 2 ಅರ್ಧಶತಕಗಳನ್ನು ದಾಖಲಿಸಿದ್ದರು. ಆದರೆ ಈ ಬಾರಿ ಕೊಹ್ಲಿ ಬ್ಯಾಟಿಂಗ್‌ನಲ್ಲಿ ತಂಡದ ಪರ ಗರಿಷ್ಠ ಕೊಡುಗೆ ನೀಡಿದರು. ಆದರೆ ಸಹ ಆಟಗಾರರ ವೈಫಲ್ಯದಿಂದಾಗಿ ಅವರ ಕೊಡುಗೆ ತಂಡದ ಗೆಲುವಿಗೆ ಸಾಕಾಗಲಿಲ್ಲ. ಐದು ಟೆಸ್ಟ್‌ಗಳ ಸರಣಿಯನ್ನು 1-4 ಅಂತರದಲ್ಲಿ ಟೀಮ್ ಇಂಡಿಯಾ ಕಳೆದುಕೊಂಡಿತು.

ಕೊಹ್ಲಿ ಕಳೆದ ಸರಣಿಯಲ್ಲಿ 593 ರನ್, 2 ಶತಕ ಮತ್ತು 3 ಅರ್ಧಶತಕಗಳನ್ನು ಜಮೆ ಮಾಡಿದರು. ಅವರ ಬಳಿಕ ಗರಿಷ್ಠ ಸ್ಕೋರ್ ದಾಖಲಿಸಿದ ಎರಡನೇ ಭಾರತದ ದಾಂಡಿಗ ಲೋಕೇಶ್ ರಾಹುಲ್ 299ರನ್. ರಾಹುಲ್ ಅಂತಿಮ ಪಂದ್ಯದಲ್ಲಿ ತಂಡದ ಸೋಲು ತಪ್ಪಿಸಲು ಹೋರಾಟ ನಡೆಸಿ 149 ರನ್‌ಗಳ ಕೊಡುಗೆ ನೀಡಿದರು.

ವಿರಾಟ್ ಕೊಹ್ಲಿ ಇಂಗ್ಲೆಂಡ್‌ನ ವಾತಾವರಣವನ್ನು ಚೆನ್ನಾಗಿ ಅರಿತುಕೊಂಡಿದ್ದರು. ಆದರೆ ತಂಡದ ಸಹ ಆಟಗಾರರು ಅವರನ್ನು ಅನುಸರಿಸಲಿಲ್ಲ. ತಂಡದ ಆಟಗಾರರಿಗೆ ಕೌಂಟಿ ಚಾಂಪಿಯನ್ ಎಸ್ಸೆಕ್ಸ್ ವಿರುದ್ಧ ನಿಗದಿಯಾಗಿದ್ದ ಏಕೈಕ ಪಂದ್ಯದ ಅವಧಿಯನ್ನು ಕಡಿತಗೊಳಿಸಲಾಗಿತ್ತು. ಈ ಕಾರಣದಿಂದಾಗಿ ವಾತಾವರಣಕ್ಕೆ ಹೊಂದಿಕೊಳ್ಳಲು ಟೀಮ್ ಇಂಡಿಯಾದ ಆಟಗಾರರಿಗೆ ಸಮಸ್ಯೆ ಉಂಟಾಗಿತ್ತು.

  ತಂಡದ ಆಯ್ಕೆಯಲ್ಲಿ ಆಯ್ಕೆ ಸಮಿತಿ ಎಡವಿತ್ತು. ಇದರ ಪರಿಣಾಮವಾಗಿ ಸರಣಿಯಲ್ಲಿ ತಂಡ ಹೀನಾಯ ಸೋಲು ಅನುಭವಿಸಿತು. ಚೇತೇಶ್ವರ ಪೂಜಾರ ಮೊದಲ ಟೆಸ್ಟ್‌ನಲ್ಲಿ ಅವಕಾಶ ಪಡೆಯಲಿಲ್ಲ. ಕೌಂಟಿಯಲ್ಲಿನ ಕಳಪೆ ಫಾರ್ಮ್ ಅವರಿಗೆ ಮೊದಲ ಟೆಸ್ಟ್‌ಗೆ ಅವಕಾಶ ಸಿಗದಂತೆ ಮಾಡಿತು. ಆದರೆ ಮೂರನೇ ಟೆಸ್ಟ್‌ನಲ್ಲಿ ಅರ್ಧಶತಕದೊಂದಿಗೆ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.ನಾಲ್ಕನೇ ಟೆಸ್ಟ್‌ನಲ್ಲಿ ಶತಕ ದಾಖಲಿಸಿದರು. 4 ಟೆಸ್ಟ್‌ಗಳಲ್ಲಿ ಟೆಸ್ಟ್ ತಜ್ಞ ಪೂಜಾರ 278 ರನ್ ದಾಖಲಿಸಿದ್ದರು.

        ಕೊಹ್ಲಿ ಅವರು ಹಾರ್ದಿಕ್ ಪಾಂಡ್ಯರನ್ನು ಅತಿಯಾಗಿ ಅವಲಂಬಿಸಿದ್ದರು. ಆದರೆ ಅವರ ಯೋಜನೆ ಫಲ ನೀಡಲಿಲ್ಲ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪಾಂಡ್ಯ ಅವರ ಆಲ್‌ರೌಂಡರ್ ಸಾಮರ್ಥ್ಯವನ್ನು ಪ್ರಶ್ನಿಸುವಂತಿಲ್ಲ. ಆದರೆ ಟೆಸ್ಟ್‌ನಲ್ಲಿ ಅವರಿಗೆ ಮಿಂಚಲು ಸಾಧ್ಯವಾಗಲಿಲ್ಲ. 4 ಟೆಸ್ಟ್‌ಗಳಲ್ಲಿ 164 ರನ್, 1 ಅರ್ಧ ಶತಕ ದಾಖಲಿಸಿದ್ದಾರೆ. 3ನೇ ಟೆಸ್ಟ್‌ನಲ್ಲಿ ಅರ್ಧಶತಕ ಮತ್ತು 5 ವಿಕೆಟ್‌ಗಳ ಗೊಂಚಲು ಪಡೆದಿರುವುದು ಅವರ ದೊಡ್ಡ ಸಾಧನೆಯಾಗಿದೆ. ಭಾರತದ 6ನೇ ಕ್ರಮಾಂಕದ ದಾಂಡಿಗ ಪಾಂಡ್ಯ ವೈಫಲ್ಯ ಅನುಭವಿಸಿದರು. ಆದರೆ ಇಂಗ್ಲೆಂಡ್ ತಂಡದ ಪರ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುವ ಸ್ಯಾಮ್ ಕರನ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಎರಡು ಟೆಸ್ಟ್‌ಗಳಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲ ಟೆಸ್ಟ್ ಮತ್ತು ನಾಲ್ಕನೇ ಟೆಸ್ಟ್ ನಲ್ಲಿ ಕರನ್ ತಂಡದ ಗೆಲುವಿಗೆ ಉತ್ತಮ ಕೊಡುಗೆ ನೀಡಿದರು.

  ಶಿಖರ್ ಧವನ್ ಉಪಖಂಡದ ಹೊರಗೆ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ಎಡವಿದರು. ಆರಂಭಿಕ ದಾಂಡಿಗರಾದ ಧವನ್ ಮತ್ತು ರಾಹುಲ್‌ಗೆ ಕೊನೆಯ ಅವಕಾಶ ನೀಡಲಾಗಿತ್ತು. ಆದರೆ ಈ ಪೈಕಿ ಧವನ್ ತನ್ನ ವೈಫಲ್ಯವನ್ನು ಮುಂದುವರಿಸಿದರು. ಅವರು 8 ಇನಿಂಗ್ಸ್ ಗಳಲ್ಲಿ 162 ರನ್ ದಾಖಲಿಸಿದರು. ಇದೀಗ ಅವರಿಗೆ ಟೆಸ್ಟ್‌ನಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿ ಆವರಿಸಿದೆ. ಯುವ ದಾಂಡಿಗರಾದ ಪ್ರಥ್ವಿ ಶಾ ಮತ್ತು ಮಾಯಾಂಕ್ ಅಗರ್‌ವಾಲ್ ಅವರು ಧವನ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ವಿರಾಟ್ ಕೊಹ್ಲಿಗೆ ಅದೃಷ್ಟ ಕೈಕೊಟ್ಟಿತು. ಐದು ಟೆಸ್ಟ್ ಗಳಲ್ಲೂ ಟಾಸ್‌ನಲ್ಲಿ ಸೋತರು. ಪಿಚ್‌ನ ಸ್ಥಿತಿಗತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವಿದರು. ಬೌಲರ್‌ಗಳನ್ನು ದಾಳಿಗಿಳಿಸುವ ವಿಚಾರದಲ್ಲಿ ಕೈ ಸುಟ್ಟುಕೊಂಡರು. ಬೌಲರ್‌ಗಳಾದ ಇಶಾಂತ್ ಶರ್ಮ(18) ಗರಿಷ್ಠ ವಿಕೆಟ್ ಗಳಿಸಿದರು. ಜಸ್‌ಪ್ರೀತ್ ಬುಮ್ರಾ 16 ವಿಕೆಟ್ ಮತ್ತು ಮುಹಮ್ಮದ್ ಶಮಿ 14 ವಿಕೆಟ್‌ಗಳನ್ನು ಪಡೆದರು.

ಹನುಮ ವಿಹಾರಿ ಆಡಿದ ಮೊದಲ ಪಂದ್ಯದಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 56 ರನ್ ಮತ್ತು 3 ವಿಕೆಟ್ ಕಬಳಿಸಿದ್ದಾರೆ.

 ಅಂತಿಮ ಟೆಸ್ಟ್‌ನಲ್ಲಿ ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ (149) ಮತ್ತು ಯುವ ವಿಕೆಟ್ ಕೀಪರ್ ರಿಷಭ್ ಪಂತ್ (114)ಅವರು ಗಮನಾರ್ಹ ಪ್ರದರ್ಶನ ನೀಡಿದರು. ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಲು ಹೋರಾಟ ನಡೆಸಿದರು. ಇಬ್ಬರೂ ಶತಕಗಳ ಕೊಡುಗೆ ನೀಡಿದರು. ರಾಹುಲ್ ಸತತ ವೈಫಲ್ಯದ ಬಳಿಕ ಕೊನೆಯ ಟೆಸ್ಟ್‌ನಲ್ಲಿ ಶತಕ ದಾಖಲಿಸಿದರು. 2016 ಡಿಸೆಂಬರ್‌ನಲ್ಲಿ ರಾಹುಲ್ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ಶತಕ (199)ದಾಖಸಿದ್ದರು. ಆ ಬಳಿಕ ಅವರಿಗೆ ಶತಕ ದಾಖಲಿಸಲು ಸಾಧ್ಯವಾಗಲಿಲ್ಲ.

►ಪಂತ್ ಚೊಚ್ಚಲ ಶತಕ : ರಿಷಭ್ ಪಂತ್ ಅಂತಿಮ ಟೆಸ್ಟ್‌ನಲ್ಲಿ ಶತಕ ದಾಖಲಿಸುವ ಮೂಲಕ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡರು.

ಓವಲ್‌ನಲ್ಲಿ ಮೂರನೇ ಟೆಸ್ಟ್ ಆಡಿದ ಉತ್ತರಾಖಂಡ್‌ನ 20ರ ಹರೆಯದ ಪಂತ್ 117ಎಸೆತಗಳಲ್ಲಿ, 14 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ ಶತಕ ಪೂರ್ಣಗೊಳಿಸಿದರು. ರಿಷಭ್ ಪಂತ್ 114ರನ್(146ಎ, 15ಬೌ,4ಸಿ) ಗಳಿಸಿ ಔಟಾದರು. ರಾಹುಲ್ ಓವಲ್‌ನಲ್ಲಿ ತನ್ನ 29ನೇ ಟೆಸ್ಟ್ ನಲ್ಲಿ 118 ಎಸೆತಗಳಲ್ಲಿ 16 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 5ನೇ ಶತಕ ದಾಖಲಿಸಿದರು. ಮೊದಲ ಇನಿಂಗ್ಸ್‌ನಲ್ಲಿ ರಾಹುಲ್ 37 ರನ್ ಗಳಿಸಿ ಔಟಾಗಿದ್ದರು.

ರಾಹುಲ್ ಮತ್ತು ಪಂತ್ 6ನೇ ವಿಕೆಟ್‌ಗೆ 204 ರನ್‌ಗಳ ಜೊತೆಯಾಟ ನಿಡಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಲು ಹೋರಾಟ ನಡೆಸಿದರೂ ಅವರ ಪ್ರಯತ್ನ ಫಲ ನೀಡಲಿಲ್ಲ. ಕೊನೆಯ ಹಂತದಲ್ಲಿ ದಾಂಡಿಗರ ಹೋರಾಟದಿಂದ ಭಾರತ ತಂಡಕ್ಕೆ ದೊಡ್ಡ ಸೋಲು ತಪ್ಪಿತು. ಆದರೆ ಗೆಲುವು ಸಾಧ್ಯವಾಗಲಿಲ್ಲ. ಸರಣಿಯಲ್ಲಿ 2-3 ಸಾಧನೆಯ ಕೊಹ್ಲಿ ಕನಸು ನನಸಾಗಲಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X