ಅಕ್ಕರಂಗಡಿ: ಅಂಗನವಾಡಿ ಟೀಚರ್ ಚಿಕಿತ್ಸೆಗಾಗಿ ಮಸೀದಿಯಲ್ಲಿ ಧನ ಸಂಗ್ರಹ

ಬಂಟ್ವಾಳ, ಸೆ. 14: ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ಪಾಣೆಮಂಗಳೂರಿನ ಅಕ್ಕರಂಗಡಿಯ ಅಂಗನವಾಡಿ ಟೀಚರ್ ಚಿಕಿತ್ಸೆಗಾಗಿ ಊರಿನ ಯುವಕರು ಶುಕ್ರವಾರದ ಜುಮಾ ನಮಾಝ್ ನಂತರ ಅಕ್ಕರಂಗಡಿ ಮಸೀದಿಯ ವಠಾರದಲ್ಲಿ ನಿಧಿ ಸಂಗ್ರಹ ಮಾಡುವ ಮೂಲಕ ಸೌಹಾರ್ದ ಮೆರೆದಿದ್ದಾರೆ.
ಪಾಣೆಮಂಗಳೂರಿನ ಅಕ್ಕರಂಗಡಿಯ ಅಂಗನವಾಡಿ ಟೀಚರ್ ಆಗಿ ಸೇವೆ ಸಲ್ಲಿಸುತ್ತಿರುವ ಶಶಿಕಲಾ ಅವರು, ಕಳೆದ ಕೆಲವು ದಿನಗಳಿಂದ ಕ್ಯಾನ್ಸರ್ ರೋಗಕ್ಕೆ ಒಳಗಾಗಿದ್ದಾರೆ. ಅಲ್ಲದೆ, ಚಿಕಿತ್ಸೆಗೆ ಆರ್ಥಿಕವಾಗಿ ದುರ್ಬಲರಾಗಿದ್ದು,. ಈಕೆಯ ಪತಿಯು ಕೂಡ ಅನಾರೋಗ್ಯ ಪೀಡಿತರಾಗಿರುವ ಕಾರಣ ಕುಟುಂಬ ಇನ್ನಷ್ಟು ಸಂಕಷ್ಟದಲ್ಲಿ ಕೂಡಿತ್ತು. ಇದನ್ನು ಮನಗಂಡ ಅಕ್ಕರಂಗಡಿ ಊರಿನ ಯುವಕರು ಈ ಬಗ್ಗೆ ಸ್ಪಂದಿಸಿ, ಶುಕ್ರವಾರದ ಜುಮಾ ನಮಾಝ್ ನಂತರ ಮಸೀದಿಯ ವಠಾರ, ಮನೆಮನೆಗೆ ಭೇಟಿ ನೀಡಿ, ನೆಹರು ನಗರ ಫಿಟ್ನೆಸ್ ಮಲ್ಟಿ ಜಿಮ್ ಸಂಸ್ಥೆಯು ಕೈ ಜೋಡಿಸಿ ಒಟ್ಟು 25 ಸಾವಿರ ರೂ. ಸಂಗ್ರಹ ಮಾಡಿದ್ದಾರೆ. ಯುವಕರ ಈ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸಹಾಯಕ್ಕೆ ಮನವಿ: ಹೆಚ್ಚಿನ ಚಿಕಿತ್ಸೆಗಾಗಿ ದಾನಿಗಳು ಆರ್ಥಿಕ ಸಹಾಯ ಮಾಡಬೇಕಾಗಿ ಸಾರ್ವಜನಿಕರಲ್ಲಿ ಪುರಸಭಾ ಸದಸ್ಯ ಇದ್ರೀಸ್ ಪಿ.ಜೆ. ಮನವಿ ಮಾಡಿಕೊಂಡಿದ್ದು, ಸಹಾಯ ಮಾಡಲು ಇಚ್ಛಿಸುವವರು ಮೊ. ಸಂಖ್ಯೆ 9964245951, 9632300361 ನ್ನು ಸಂಪರ್ಕಿಸಬದಾಗಿದೆ.





