Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿತ್ತ ಸಚಿವರು ರಾಜೀನಾಮೆ ನೀಡಲು...

ವಿತ್ತ ಸಚಿವರು ರಾಜೀನಾಮೆ ನೀಡಲು ಇನ್ನೇನಾಗಬೇಕು?

ವಾರ್ತಾಭಾರತಿವಾರ್ತಾಭಾರತಿ14 Sept 2018 11:37 PM IST
share
ವಿತ್ತ ಸಚಿವರು ರಾಜೀನಾಮೆ ನೀಡಲು ಇನ್ನೇನಾಗಬೇಕು?

ವಿದೇಶದಲ್ಲಿ ಕುಳಿತೇ, ಕೇಂದ್ರ ಸರಕಾರದ ಮೇಲೆ ವಿಜಯಮಲ್ಯ ಬಾಂಬ್ ಸಿಡಿಸಿದ್ದಾರೆ. ತನ್ನ ಮೂಗಿಗೆ ನೀರು ಹತ್ತಿರವಾಗುತ್ತಿದ್ದಂತೆಯೇ ಮಲ್ಯ ಹೆಗಲ ಮೇಲೆ ಕುಳಿತಿದ್ದ ಜೇಟ್ಲಿಯನ್ನು ಕೆಳಗೆ ತಳ್ಳಿ ಅವರ ಮೇಲೇರಿ ಜೀವ ರಕ್ಷಿಸಿಕೊಳ್ಳುವ ಹವಣಿಕೆಯಲ್ಲಿದ್ದಾರೆ. ಭಾರತ ತೊರೆಯುವ ಮುನ್ನ ತಾನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರನ್ನು ಭೇಟಿಯಾಗಿದ್ದೆ ಹಾಗೂ ತಾನು ವಿವಿಧ ಬ್ಯಾಂಕ್‌ಗಳಿಗೆ ಬಾಕಿಯಿರಿಸಿರುವ 9 ಸಾವಿರಕ್ಕೂ ಅಧಿಕ ಕೋಟಿ ರೂ. ಸಾಲದ ಹಣವನ್ನು ತೀರಿಸುವ ಕೊಡುಗೆಯನ್ನು ನೀಡಿದ್ದಾಗಿಯೂ ಮಾಧ್ಯಮಗಳಿಗೆ ಬಯಲು ಮಾಡಿದ್ದಾರೆ. ಅವರು ಈ ರೀತಿ ಘೋಷಣೆ ಮಾಡುತ್ತಿದ್ದ ಹಾಗೆಯೇ, ವಿತ್ತ ಸಚಿವ ಜೇಟ್ಲಿ ತನ್ನ ಸುದೀರ್ಘ ವೌನವ್ರತವನ್ನು ಮುರಿದಿದ್ದಾರೆ. ತನ್ನನ್ನು ಬರೇ ಸಂಸತ್‌ನ ಆವರಣದಲ್ಲಷ್ಟೇ ಭೇಟಿಯಾಗಿದ್ದರು ಎಂದು ಅವರು ನುಣುಚಿಕೊಳ್ಳುತ್ತಿದ್ದಾರೆ. 

ಇಂದು ಈ ದೇಶದ ಆರ್ಥಿಕತೆ ಬಿಕ್ಕಟ್ಟನ್ನು ಎದುರಿಸುವಲ್ಲಿ, ಮಲ್ಯ ಮಾತ್ರವಲ್ಲ ಅವರಂತಹ ನೂರಾರು ಬೃಹತ್ ಉದ್ಯಮಿಗಳ ಕೊಡುಗೆಯಿದೆ. ಅವರ ದೆಸೆಯಿಂದಾಗಿಯೇ ಸರಕಾರ ಬ್ಯಾಂಕ್‌ಗಳನ್ನು ರಕ್ಷಿಸಲು ನೋಟು ನಿಷೇಧ ಘೋಷಣೆ ಮಾಡಬೇಕಾಗಿ ಬಂತು. ಮಲ್ಯನಂಥವರು ಮುಳುಗಿಸಿದ ಬ್ಯಾಂಕ್‌ಗಳನ್ನು ರಕ್ಷಿಸಲು, ನೋಟು ನಿಷೇಧದ ಹೆಸರಲ್ಲಿ ಬಡವರ ದುಡ್ಡನ್ನು ಕಿತ್ತು ಬ್ಯಾಂಕಿಗೆ ತುಂಬಿಸಲಾಯಿತು. ಇಂದು ಮಲ್ಯ ತನ್ನನ್ನು ಬಲಿ ಪಶುಮಾಡಲಾಗಿದೆ ಎಂದು ಹೇಳುತ್ತಿರುವುದರಲ್ಲಿ ಯಾವ ಸತ್ಯಾಂಶವೂ ಇಲ್ಲ. ಆದರೆ, ಮಲ್ಯನಂತಹವರು ಈ ದೇಶದ ಕಾನೂನಿನಿಂದ ನುಣುಚಿಕೊಳ್ಳಲು ಸರಕಾರದ ಪಾತ್ರವೇನು ಎನ್ನುವುದು ನಿಧಾನಕ್ಕೆ ಬಹಿರಂಗವಾಗುತ್ತಿದೆ. ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್ ಇತ್ತೀಚೆಗೆ ಕೆಲವು ಅಂಶಗಳನ್ನು ಬಹಿರಂಗಪಡಿಸಿದರು. ಮಲ್ಯನಂತಹ ವಂಚಕ ಉದ್ಯಮಿಗಳ ದೊಡ್ಡ ಪಟ್ಟಿಯನ್ನೇ ಅವರು ಸರಕಾರಕ್ಕೆ ನೀಡಿದ್ದರು. ಆಗಲೇ ಸರಕಾರ ಇವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬಹುದಿತ್ತು. ಕನಿಷ್ಠ ಇವರು ದೇಶ ತೊರೆಯದಂತೆ ಜಾಗರೂಕತೆ ವಹಿಸಬಹುದಿತ್ತು. ರಘುರಾಮ್ ರಾಜನ್ ಬ್ಯಾಂಕುಗಳು ಎದುರಿಸುತ್ತಿರುವ ನಿಷ್ಕ್ರಿಯ ಆಸ್ತಿ (ಎನ್‌ಪಿಎ)ಗಳ ಸಮಸ್ಯೆಯನ್ನು ಒತ್ತಿ ಹೇಳಿದ್ದರು ಹಾಗೂ ಆ ವಿಷಯವಾಗಿ ಪರಿಣಾಮಕಾರಿಯಾದ ಕ್ರಮವನ್ನು ಕೈಗೊಳ್ಳುವ ಅಗತ್ಯವಿದೆಯೆಂದು ಅವರು ಪ್ರತಿಪಾದಿಸಿದ್ದರು.

2006-2008ರಲ್ಲೇ ಅಂದರೆ ಯುಪಿಎ ಸರಕಾರದ ಆಡಳಿತಾವಧಿಯಲ್ಲಿಯೇ ಬ್ಯಾಂಕುಗಳು ಕೆಟ್ಟ ಸಾಲದ ಸಮಸ್ಯೆಯಿಂದ ಬಾಧಿತವಾಗಿದ್ದವೆಂದು ರಘುರಾಮ್ ರಾಜನ್ ವ್ಯಕ್ತಪಡಿಸಿದ ಅನಿಸಿಕೆಯಿಂದ ಮೋದಿ ಸರಕಾ ತುಸು ಸಮಾಧಾನಗೊಂಡಿದೆ. ಆದರೆ ರಘುರಾಮ್ ರಾಜನ್ ವ್ಯಕ್ತಪಡಿಸಿರುವ ಇತರ ಅನಿಸಿಕೆಗಳು ನೇರವಾಗಿ ಎನ್‌ಡಿಎ ಸರಕಾರದ ಮೇಲೆ ಮಾಡಿರುವ ದಾಳಿಯಾಗಿದೆ. ಬ್ಯಾಂಕ್‌ಗಳಿಗೆ ಕೋಟ್ಯಂತರ ರೂ. ಸಾಲ ಮರುಪಾವತಿಸದ ಸುಸ್ತಿದಾರರು ಹಾಗೂ ಬ್ಯಾಂಕ್‌ವಂಚನೆ ಹಗರಣಗಳ ಬಗ್ಗೆ ಈಗಿನ ಕೇಂದ್ರ ಸರಕಾರ ವಿಫಲವಾಗಿದೆಯೆಂದು ರಾಜನ್ ತನ್ನ ಪತ್ರದಲ್ಲಿ ನಿರ್ದಿಷ್ಟವಾಗಿ ಬೆಟ್ಟುಮಾಡಿದ್ದಾರೆ.ಕಳೆದ ಕೆಲವು ವರ್ಷಗಳಿಂದ ನಿಷ್ಕ್ರಿಯ ಆಸ್ತಿಗಳ ಸಮಸ್ಯೆಗೆ ಕಡಿವಾಣ ಹಾಕಲು ಶಾಸನವೊಂದನ್ನು ರೂಪಿಸಲು ಹಾಗೂ ಕಾರ್ಯಯೋಜನೆಯೊಂದನ್ನು ರೂಪಿಸುವ ನಿಟ್ಟಿನಲ್ಲಿ ತಾನು ಕಾರ್ಯಪ್ರವೃತ್ತನಾಗಿರುವಂತೆ ಎನ್‌ಡಿಎ ಸರಕಾರ ತೋರ್ಪಡಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಅದು ಜಾರಿಗೆ ತಂದ ಮಸೂದೆಗಳಲ್ಲಿ 2002 ರ ವಿತ್ತೀಯ ಆಸ್ತಿಗಳ ಭದ್ರತೆ ಹಾಗೂ ಪುನಾರಚನೆ ಮತ್ತು ಭದ್ರತಾ ಹಿತಾಸಕ್ತಿ ಅನುಷ್ಠಾನ ಕಾಯ್ದೆ ಹಾಗೂ 1993ರ ಬ್ಯಾಂಕುಗಳು ಹಾಗೂ ಹಣಕಾಸುಸಂಸ್ಥೆಗಳಿಗೆ ಬಾಕಿಯಿರುವ ಸಾಲ ವಸೂಲಾತಿ ಕಾಯ್ದೆ ಗಳಿಗೆ ತಿದ್ದುಪಡಿ ಸೇರಿವೆ. ಈ ಕಾಯ್ದೆಗಳ ಮೂಲಕ ಸಾಲ ವಸೂಲಾತಿ ನ್ಯಾಯಾಧಿಕರಣಗಳನ್ನು ಸ್ಥಾಪಿಸಲಾಗಿದೆ ಹಾಗೂ ದಿವಾಳಿತನ ಹಾಗೂ ಆರ್ಥಿಕ ದುಸ್ಥಿತಿ ಕುರಿತ ಸಂಹಿತೆಯನ್ನು ಜಾರಿಗೆ ತರಲಾಗಿದೆ. ಆದಾಗ್ಯೂ, ಮೊದಲ ಎರಡು ಕಾಯ್ದೆಗಳನ್ನು ಬಳಸಿಕೊಂಡು ಸಾಲವಸೂಲಾತಿ ಮಾಡುವಲ್ಲಿ ಬ್ಯಾಂಕುಗಳು ಕಳಪೆ ಸಾಧನೆಯನ್ನು ತೋರಿವೆ ಎಂದು ರಾಜನ್ ಗಮನಸೆಳೆಯುತ್ತಾರೆ.ಇದಕ್ಕೆ ಕಾರಣವೂ ಸ್ಪಷ್ಟ.  ಬ್ಯಾಂಕುಗಳಿಂದ ದೊಡ್ಡ ಪ್ರಮಾಣದ ಸಾಲ ಪಡೆಯುವ ಉದ್ಯಮಿಗಳು, ಪರೋಕ್ಷವಾಗಿ ಸರಕಾರದೊಂದಿಗೆ ಭಾಗೀದಾರಿಕೆಯನ್ನು ಹೊಂದಿದ್ದಾರೆ.

ಸರಕಾರ ಕ್ರಮ ತೆಗೆದುಕೊಂಡಂತೆ ನಟಿಸುತ್ತಲೇ, ಪರೋಕ್ಷವಾಗಿ ಇವರ ರಕ್ಷಣೆಗೆ ನಿಲ್ಲುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಇದೀಗ ಮಲ್ಯ ಮಾಡಿರುವ ಆರೋಪ, ಆ ಸತ್ಯವನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ. ರಾಜನ್ ಹೇಳಿಕೆ ಹೊರ ಬಿದ್ದ ಕೆಲವೇ ದಿನಗಳಲ್ಲಿ ಮಲ್ಯ, ತಾನೂ ವಿದೇಶ ತೊರೆಯುವ ಮೊದಲು ಸರಕಾರವನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದನ್ನು ಘೋಷಿಸಿದ್ದಾರೆ. ಭಾಗಶಃ ಇದನ್ನು ವಿತ್ತ ಸಚಿವರು ಒಪ್ಪಿದ್ದಾರೆ ಕೂಡ. ಆದರೆ ಈ ದೇಶದ ಆರ್ಥಿಕ ತುರ್ತುಪರಿಸ್ಥಿತಿಗೆ ಪರೋಕ್ಷವಾಗಿ ವಿತ್ತ ಸಚಿವರೇ ಕಾರಣ ಎನ್ನುವ ದೊಡ್ಡದೊಂದು ಕಳಂಕ ಸರಕಾರದ ಮೇಲೆ ಎರಗಿದ ಬಳಿಕವೂ, ವಿತ್ತ ಸಚಿವರು ರಾಜೀನಾಮೆ ನೀಡಿಲ್ಲ ಎನ್ನುವುದು ಸದ್ಯದ ಸಂವೇದನಾರಹಿತ ಆಡಳಿತದ ಗತಿಯನ್ನು ತಿಳಿಸುತ್ತದೆ. ಹಾಲಿ ವ್ಯವಸ್ಥೆಯು ಒಬ್ಬನೇ ಒಬ್ಬ ಉನ್ನತಮಟ್ಟದ ವಂಚಕನ ವಿರುದ್ಧ ಪ್ರಕರಣ ದಾಖಲಿಸುವಲ್ಲಿ ವಿಫಲವಾಗಿದೆ. ಗಣ್ಯ ವ್ಯಕ್ತಿಗಳು ಶಾಮೀಲಾಗಿರುವ ಸಾಲ ಸುಸ್ತಿ ಪ್ರಕರಣಗಳ ಪಟ್ಟಿಯನ್ನು ತಾನು ಪ್ರಧಾನಿ ಕಚೇರಿಗೆ ಕಳುಹಿಸಿರುವುದನ್ನು ಕೂಡಾ ರಾಜನ್ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕನಿಷ್ಠ ಒಂದಿಬ್ಬರು ಸುಸ್ತಿದಾರರ ವಿರುದ್ಧ ಮೊಕದ್ದಮೆ ದಾಖಲಿಸಲು ಆರ್‌ಬಿಐ ಸಮನ್ವಯದೊಂದಿಗೆ ಕೆಲಸ ಮಾಡಲು ಸಿದ್ಧವೆಂದು ಕೂಡಾ ಅವರು ಪತ್ರದಲ್ಲಿ ಬರೆದಿದ್ದರಂತೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿರುವುದು ತನ್ನ ಅರಿವಿಗೆ ಬಂದಿಲ್ಲವೆಂದು ರಾಜನ್ ಗಮನಸೆಳೆದಿದ್ದಾರೆ.ರಾಜನ್ ಅವರು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಿದ ಸುಸ್ತಿದಾರರ ಪಟ್ಟಿಯಲ್ಲಿ ವಿದೇಶಕ್ಕೆ ಪರಾರಿಯಾಗಿರುವ ನೀರವ್ ಮೋದಿ ಹಾಗೂ ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಅವರ ಹೆಸರುಗಳು ಕೂಡಾ ಇತ್ತೆಂದು ಪ್ರತಿಪಕ್ಷಗಳು ಆಪಾದಿಸಿವೆ.

ಹಾಲಿ ಎನ್‌ಡಿಎ ಸರಕಾರದ ಆಡಳಿತದಲ್ಲಿ ಲಂಚ ನೀಡಿಕೆಯಿಂದ ಹಿಡಿದು ಸಾಲ ಸುಸ್ತಿವರೆಗಿನ ವಿವಿಧ ಕಾರಣಗಳಿಗಾಗಿ ದೇಶದಿಂದ ಪರಾರಿಯಾಗುವುದು ಶತಕೋಟ್ಯಧಿಪತಿಗಳಿಗೆ ಸುಲಭವಾಗಿಬಿಟ್ಟಿದೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಮಲ್ಯರ ನಿರ್ಗಮನವಂತೂ ‘ನೆರವಿನೊಂದಿಗೆ ನಡೆದ ಪಲಾಯನ’ವೆಂದು ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರು ಬಣ್ಣಿಸಿದ್ದರು. ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿ ಅವರು ವಿವಿಧ ತನಿಖಾ ಸಂಸ್ಥೆಗಳ ಮೂಗಿನಡಿಯಲ್ಲೇ ದೇಶ ಬಿಟ್ಟು ಪರಾರಿಯಾಗಿದ್ದರು. ಐಪಿಎಲ್‌ನ ಮಾಜಿ ವರಿಷ್ಠ ಲಲಿತ್ ಮೋದಿಗೆ ವಿದೇಶ ಪ್ರಯಾಣದ ದಾಖಲೆಪತ್ರಗಳನ್ನು ದೊರಕಿಸಿಕೊಡುವುದಕ್ಕೆ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಅವರು ‘ಮಾನವೀಯ ನೆಲೆ’ಯಲ್ಲಿ ಖುದ್ದಾಗಿ ಸಹಾಯ ಮಾಡಿದ್ದರೆನ್ನಲಾಗಿದೆ. ವಿದೇಶಕ್ಕೆ ಈಗಾಗಲೇ ಪರಾರಿಯಾಗಿರುವ ಸುಸ್ತಿದಾರರು, ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಹೆಡ್‌ಲೈನ್ ಸುದ್ದಿಯಾಗುತ್ತಿದ್ದಾರೆ. ಆದರೆ ಇನ್ನೂ ಭಾರೀ ಸಂಖ್ಯೆಯ ಸುಸ್ತಿದಾರರು ದೇಶದೊಳಗೆನೇ ಇದ್ದಾರೆ. ಒಬ್ಬ ಮಲ್ಯ ಪರಾರಿಗೆ ತಾನು ನೇರ ಹೊಣೆಗಾರನಲ್ಲವೆಂದು ಕೇಂದ್ರ ಸರಕಾರವು ಹೇಳಿಕೊಂಡರೂ, ಉಳಿದವರ ವಿಷಯದಲ್ಲಿ ತಾನು ಉದಾರತೆಯಿಂದ ವರ್ತಿಸುತ್ತಿರುವ ಬಗ್ಗೆ ಅದು ಯಾವ ರೀತಿಯ ವಿವರಣೆ ನೀಡಲು ಸಾಧ್ಯ?.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X