ದಕ್ಷಿಣ ಆಫ್ರಿಕ ತಂಡಕ್ಕೆ ಡೇಲ್ ಸ್ಟೇಯ್ನ್ ವಾಪಸ್
ಜೋಹಾನ್ಸ್‌ಬರ್ಗ್, ಸೆ.14: ಹಿರಿಯ ಬೌಲರ್ ಡೇಲ್ ಸ್ಟೇಯ್ನ್ ಸುಮಾರು ಎರಡು ವರ್ಷಗಳ ಬಳಿಕ ದಕ್ಷಿಣ ಆಫ್ರಿಕದ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ವಾಪಸಾಗಿದ್ದಾರೆ. ಸ್ಟೇಯ್ನಾ ಝಿಂಬಾಬ್ವೆ ವಿರುದ್ಧ ಈ ತಿಂಗಳು ಸ್ವದೇಶದಲ್ಲಿ ನಡೆಯಲಿರುವ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಭುಜ ಹಾಗೂ ಮೊಣಕಾಲು ನೋವಿನಿಂದಾಗಿ 35ರ ಹರೆಯದ ವೇಗದ ಬೌಲರ್ ಸ್ಟೇಯ್ನಾ ದೀರ್ಘ ಸಮಯದಿಂದ ಸಕ್ರಿಯ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದರು. ಭುಜನೋವಿನ ಸಮಸ್ಯೆಯಿಂದಾಗಿ ಸ್ಟೇಯ್ನೆ 2016ರಿಂದ 2018ರ ತನಕ ಟೆಸ್ಟ್ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಈ ವರ್ಷಾರಂಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಾಪಸಾಗಿದ್ದ ಸ್ಟೇಯ್ನಿ ಮೊಣಕಾಲು ಗಾಯದ ಸಮಸ್ಯೆಗೆ ಒಳಗಾಗಿದ್ದರು. ಸ್ಟೇಯ್ನೆ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಿದ್ದರು. 2016ರ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಕೊನೆಯ ಬಾರಿ ಏಕದಿನ ಪಂದ್ಯವನ್ನಾಡಿದ್ದಾರೆ. ನಾಯಕ ಎಫ್‌ಡು ಪ್ಲೆಸಿಸ್ ಶುಕ್ರವಾರ ತಂಡವನ್ನು ಪ್ರಕಟಿಸಿದರು. ಭುಜ ಶಸ್ತ್ರಚಿಕಿತ್ಸಗೆ ಒಳಗಾಗಿರುವ ಸ್ಟೇಯ್ನೆ ಫಿಟ್‌ನೆಸ್ ಟೆಸ್ಟ್‌ನಲ್ಲಿ ಪಾಸಾದ ಬಳಿಕ ಸರಣಿಯಲ್ಲಿ ಭಾಗವಹಿಸುವ ಬಗ್ಗೆ ಖಚಿತವಾಗಲಿದೆ.





