ರಶ್ಯ ನಂಟು ತನಿಖೆ: ಸಹಕರಿಸಲು ಒಪ್ಪಿಕೊಂಡ ಟ್ರಂಪ್ ಮಾಜಿ ಮ್ಯಾನೇಜರ್

ವಾಶಿಂಗ್ಟನ್, ಸೆ. 15: 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿದೆ ಎನ್ನಲಾದ ಆರೋಪಗಳ ಬಗ್ಗೆ ವಿಶೇಷ ವಕೀಲ ರಾಬರ್ಟ್ ಮುಲ್ಲರ್ ನಡೆಸುತ್ತಿರುವ ತನಿಖೆಯಲ್ಲಿ ಸಹಕರಿಸಲು ಡೊನಾಲ್ಡ್ ಟ್ರಂಪ್ ಪ್ರಚಾರ ತಂಡದ ಮಾಜಿ ಅಧ್ಯಕ್ಷ ಪೌಲ್ ಮ್ಯಾನಫೋರ್ಟ್ ಒಪ್ಪಿಕೊಂಡಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ಶುಕ್ರವಾರ ಹೇಳಿದ್ದಾರೆ.
ವರ್ಜೀನಿಯ ರಾಜ್ಯದ ಫೆಡರಲ್ ನ್ಯಾಯಾಲಯವೊಂದರಲ್ಲಿ, 69 ವರ್ಷದ ಮ್ಯಾನಫೋರ್ಟ್ ವಿರುದ್ಧ ಈಗಾಗಲೇ ಬ್ಯಾಂಕ್ ವಂಚನೆ, ತೆರಿಗೆ ವಂಚನೆ ಮತ್ತು ಹಣಕಾಸು ಅವ್ಯವಹಾರಗಳಿಗೆ ಸಂಬಂಧಿಸಿದ ಮೊಕದ್ದಮೆ ನಡೆಯುತ್ತಿದೆ.
ಅವರ ವಿರುದ್ಧದ ಮೊಕದ್ದಮೆಗಳು ಸಾಬೀತಾದರೆ, 8ರಿಂದ 12 ವರ್ಷಗಳ ನಡುವಿನ ಜೈಲು ಶಿಕ್ಷೆಯನ್ನು ಅವರು ಎದುರುನೋಡುತ್ತಿದ್ದಾರೆ.
Next Story





