ಸಮುದ್ರದಲ್ಲಿ ದೋಣಿ ಮುಳುಗಿ 13 ಸಾವು

ಜಕಾರ್ತ, ಸೆ. 15: ಮಧ್ಯ ಇಂಡೋನೇಶ್ಯದ ಸಮುದ್ರದಲ್ಲಿ ದೋಣಿಯೊಂದಕ್ಕೆ ಬೆಂಕಿ ಹತ್ತಿಕೊಂಡು ಮುಳುಗಿದ್ದು, ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ ಹಾಗೂ 8 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.
ದೋಣಿಯು ಶುಕ್ರವಾರ ಸುಲವೆಸಿ ಪ್ರಾಂತದ ಕರಾವಳಿಯಿಂದ ಸುಮಾರು 150 ಪ್ರಯಾಣಿಕರನ್ನು ಒಯ್ಯುತ್ತಿತ್ತು.
ಆರಂಭದಲ್ಲಿ ರಕ್ಷಣಾ ಕಾರ್ಯಗಳಿಗೆ ಬೃಹತ್ ಅಲೆಗಳು ಅಡ್ಡಿಪಡಿಸಿದವು. ಆದಾಗ್ಯೂ, ಶನಿವಾರ ಮಧ್ಯಾಹ್ನದ ವೇಳೆಗೆ 126 ಮಂದಿಯನ್ನು ರಕ್ಷಿಸಲಾಗಿದೆ.
ಉಳಿದ ಪ್ರಯಾಣಿಕರಿಗಾಗಿ ಶೋಧ ಕಾರ್ಯ ಮುಂದುವರಿಯುತ್ತಿದೆ.
ರಕ್ಷಿಸಲ್ಪಟ್ಟವರಲ್ಲಿ ಹೆಚ್ಚಿನವರು ಜೀವರಕ್ಷಕ ಜಾಕೆಟ್‌ಗಳನ್ನು ಧರಿಸಿದ್ದರು.
17,000ಕ್ಕೂ ಅಧಿಕ ದ್ವೀಪಗಳನ್ನು ಹೊಂದಿರುವ ಇಂಡೋನೇಶ್ಯವು ಸಂಚಾರಕ್ಕಾಗಿ ದೋಣಿಗಳನ್ನು ಹೆಚ್ಚಾಗಿ ಅವಲಂಬಿಸಿದೆ.
Next Story





