ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿ ಪಿ. ಚಿದಂಬರಂ ನಿಯೋಜನೆ

ಹೊಸದಿಲ್ಲಿ, ಸೆ. 15: ಮುಂಬರುವ ಲೋಕಸಭಾ ಚುನಾವಣೆಗೆ ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ಪಿ. ಚಿದಂಬರಂ, ಸಹಕಾರ ಸಮಿತಿ ಅಧ್ಯಕ್ಷರನ್ನಾಗಿ ಎ.ಕೆ. ಆ್ಯಂಟನಿ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಆನಂದ್ ಶರ್ಮಾ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿಯೋಜಿಸಿದ್ದಾರೆ ಎಂದು ಕಾಂಗ್ರೆಸ್‌ನ ಮೂಲಗಳು ತಿಳಿಸಿವೆ.
ಪ್ರಣಾಳಿಕೆ ಸಮಿತಿ ಸಂಚಾಲಕರನ್ನಾಗಿ ರಾಜೀವ್ ಗೌಡ, ಸಹಕಾರ ಸಮಿತಿಯ ಸಂಚಾಲಕರನ್ನಾಗಿ ಜೈರಾಮ್ ರಮೇಶ್, ಪ್ರಚಾರ ಸಮಿತಿಯ ಸಂಚಾಲಕರನ್ನಾಗಿ ಪವನ್ ಖೇರಾ ಅವರನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಧಿಕೃತವಾಗಿ ಶೀಘ್ರ ಪ್ರಕಟನೆ ನೀಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
Next Story





