ಹನೂರು: ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಹನೂರು,ಸೆ.15: ತಾಲೂಕಿನ ಮಾರ್ಟಳ್ಳಿ ಜಿಪಂ ವ್ಯಾಪ್ತಿಯ ಸುಳ್ವಾಡಿ, ಮಾರ್ಟಳ್ಳಿ, ಅಂತೋಣಿಯರ್‍ಕೊಯ್ಲು ಒಡರದೂಡ್ಡಿ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯ ಪ್ರಾರಂಭದಲ್ಲಿ ವಿಸ್ತರಣಾಧಿಕಾರಿ ವೆಂಕಟೇಶ್ 2017-18 ರ ಆದಾಯ ಖರ್ಚನ್ನು ಮಂಡಿಸಿ, ಪ್ರಸ್ತುತ್ತ ವರ್ಷದ ವ್ಯವಹಾರಗಳ ರೂಪುರೇಷೆ ಮತ್ತು ಮುಂದಿನ ವರ್ಷದ ಬಜೆಟ್‍ನ್ನು ಮಂಡಿಸಿದರು.
ನಂತರ ಚಾಮುಲ್ ಅದ್ಯಕ್ಷ ಸಿ.ಎನ್ ಗುರುಮಲ್ಲಪ್ಪ ಮಾತನಾಡಿ, ಸಹಕಾರ ಸಂಘಗಳು ಸದಾ ರೈತರ ಶ್ರೇಯೋಬಿವೃದ್ದಿಗೆ ಶ್ರಮಿಸುತ್ತಿದ್ದು, ರೈತರು ಗುಣ ಮಟ್ಟದ ಹಾಲು ಪೂರೈಸುವುದರ ಮೂಲಕ ಸಹಕಾರ ಸಂಘಗಳು ಲಾಭಧಾಯವಾಗಿರುವಂತೆ ನೋಡಿಕೊಳ್ಳಬೇಕು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಹೆಚ್ಚಿನ ಬೆಲೆ ನೀಡಿ ರೈತರಿಂದ ಹಾಲು ಖರೀದಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಟೆಟ್ರಾ ಪ್ಯಾಕೆಟ್ ಗಳಲ್ಲಿ ಹಾಲು ಮಾರಾಟ ಮಾಡಲು ಕುದೇರಿನಲ್ಲಿ ಯಂತ್ರೋಪಕರಣಗಳನ್ನು ಜೋಡಿಸಲಾಗುತ್ತಿದೆ. ಈಗ ಕೇವಲ 30 ಸಾವಿರ ಲೀಟರ್ ಮಾತ್ರ ಮಾರಾಟವಾಗುತ್ತಿದೆ ಎಂದು ತಿಳಿಸಿದರು. ಸದ್ಯಕ್ಕೆ 2 ರಿಂದ 2.5 ಲಕ್ಷ ಲೀಟರ್ ಹಾಲಿನ ಪುಡಿ ಮಾಡಿಸಿ ಮಾರಾಟ ಮಾಡಲಾಗುತ್ತಿದೆ. ಹಸುಗಳಿಗೆ ತಪ್ಪದೇ ಜೀವ ವಿಮೆ ಮಾಡಿಸಿ ಹಾಗು ರೈತರಿಗಾಗಿ ರೈತ ಕಲ್ಯಾಣ ಟ್ರಸ್ಟ್ ನಡಿ 1 ಲಕ್ಷದ ವರೆಗೆ ಜೀವ ವಿಮೆ ಸೌಲಭ್ಯವಿದ್ದು, ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭ ಚಾಮುಲ್‍ನ ನಿರ್ದೇಶಕ ನಂಜುಂಡಸ್ವಾಮಿ, ಉಪವ್ಯವಸ್ಥಾಪಕ ಶರತ್ ವಿಸ್ತರಣಾಧಿಕಾರಿ ವೆಂಕಟೇಶ್, ಅಧ್ಯಕ್ಷರುಗಳಾದ ಪಿ.ಆರೋಗ್ಯಸ್ವಾಮಿ, ಆಲ್ಪರ್ಟ್ ಮನೋಹರ್, ಕಾರ್ಯದರ್ಶಿಗಳಾದ ಸೊಸೈರಾಜ್, ಕವಿತಬೇಬಿನಾಮೇರಿ, ಆರುಳಾನಂದ, ಸೇಸುರಾಜ್, ಗರ್ಗೆಸ್ ಹಾಗು ಮುಖಂಡ ಆಗಸ್ಟೀನ್ ಇದ್ದರು.





