ಯಂದಿರನ್ 2.0ಗೆ 3 ಸಾವಿರ ತಂತ್ರಜ್ಞರು ಸಾಥ್
ಸುದೀರ್ಘ ನಿರೀಕ್ಷೆಯ ಬಳಿಕ ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ಅಭಿನಯದ 2.0, ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಖಚಿತವಾಗಿದೆ. ನವೆಂಬರ್ 29ರಂದು 2.0 ಜಗತ್ತಿನಾದ್ಯಂತ ಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ. ಬರೋಬ್ಬರಿ 543 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ 2.0, ಭಾರತದ ಅತ್ಯಂತ ಅದ್ದೂರಿ ಚಿತ್ರವೆಂಬ ಹೆಗ್ಗಳಿಕೆಯನ್ನು ಕೂಡಾ ತನ್ನದಾಗಿಸಿಕೊಂಡಿದೆ. 3ಡಿ ತಂತ್ರಜ್ಞಾನದಲ್ಲಿಯೂ ನಿರ್ಮಾಣಗೊಂಡಿರುವ ಈ ಚಿತ್ರ ತಮಿಳು, ಹಿಂದಿ, ತೆಲುಗು, ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.
ಯಂದಿರನ್ ಚಿತ್ರದ ಮುಂದುವರಿದ ಭಾಗವಾದ 2.0ನಲ್ಲಿ ಬಾಲಿವುಡ್ನ ಸೂಪರ್ಸ್ಟಾರ್ ಅಕ್ಷಯ್ ಕುಮಾರ್ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿರುವುದು ಚಿತ್ರದ ಬಗ್ಗೆ ಸಿನೆಮಾಪ್ರೇಮಿಗಳ ತವಕವನ್ನು ಇನ್ನಷ್ಟು ಹೆಚ್ಚಿಸಿದೆ. ಭಾರತೀಯ ಚಿತ್ರರಂಗದಲ್ಲೇ ಅವಿಸ್ಮರಣೀಯವೆನಿಸುವಂತಹ ಚಿತ್ರ ಇದಾಗಬೇಕು ಹಾಗೂ ಚಿತ್ರದ ಪ್ರತಿಯೊಂದು ದೃಶ್ಯವೂ ಮಹತ್ವಾಕಾಂಕ್ಷೆ ಹೊಂದಿರುವ ನಿರ್ದೇಶಕ ಶಂಕರ್, ಜಗತ್ತಿನಾದ್ಯಂತದ 3 ಸಾವಿರಕ್ಕೂ ಅಧಿಕ ತಂತ್ರಜ್ಞರನ್ನು 2.0ಗಾಗಿ ಬಳಸಿಕೊಂಡಿದ್ದಾರೆ.