ಫೆಲೆಸ್ತೀನಿಯರ ಆಕ್ರೋಶ
ಫೆಲೆಸ್ತೀನ್‌ನ ಗಾಝಾಪಟ್ಟಿಯಲ್ಲಿ ಇಸ್ರೇಲ್‌ನೊಂದಿಗಿನ ಗಡಿಭಾಗದಲ್ಲಿ ಶನಿವಾರ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರಲ್ಲದೆ, ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದ ಫೆಲೆಸ್ತೀನಿಯರ ಮೇಲೆ ಇಸ್ರೇಲ್ ಸೈನಿಕರು ಹಾರಿಸಿದ ಗುಂಡಿಗೆ ಮೂವರು ಫೆಲೆಸ್ತೀನಿಯರು ಬಲಿಯಾಗಿದ್ದಾರೆ ಹಾಗೂ ಕನಿಷ್ಠ 30 ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟ ಫೆಲೆಸ್ತೀನಿಯರಲ್ಲಿ ಓರ್ವ 14 ವರ್ಷದ ಬಾಲಕ ಸೇರಿದ್ದಾನೆ. ಇದರೊಂದಿಗೆ ಮಾರ್ಚ್ 30ರಂದು ಆರಂಭವಾದ ಸರಣಿ ಪ್ರತಿಭಟನೆಗಳಲ್ಲಿ ಮೃತಪಟ್ಟ ಫೆಲೆಸ್ತೀನಿಯರ ಸಂಖ್ಯೆ 177ಕ್ಕೇರಿದೆ.
Next Story





